ಸತತ ಮಳೆ-ಮಳೆಗೆ ಕ್ಷೀರದಂತೆ ಧುಮ್ಮುಕ್ಕುತ್ತಿದೆ ರಾಜ, ರಾಣಿ, ರೋರಲ್ ರಾಕೆಟ್

ಸುದ್ದಿಲೈವ್/ಶಿವಮೊಗ್ಗ

ಮಲೆನಾಡಿನಲ್ಲಿ ಮುಂಗಾರು ಮಳೆಯ ಅಬ್ಭರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮುಂಗಾರು ಮಳೆಗೆ ನದಿ, ಹಳ್ಳಕೊಳ್ಳಗಳು ತುಂಬಿ ಹರಿಯಲಾರಂಭಿಸಿವೆ.

ಶರಾವತಿ ನದಿ ಕಣಿವೆಯಲ್ಲೂ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದಾಗಿ ವಿಶ್ವವಿಖ್ಯಾತ ಜೋಗ ಜಲಪಾತ ಮೈದುಂಬಿ ಧುಮ್ಮಿಕ್ಕಲಾರಂಭಿಸಿದೆ. ಕ್ಷೀರ ಸಾಗರವೇ ಹರಿಯುತ್ತಿದೆಯೇನು ಎನ್ನುವಂತೆ ಭಾಸವಾಗುತ್ತಿದೆ.

ಜೋಗ ಜಲಪಾತದ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಜೋಗ ಜಲಪಾತ ಮೈದುಂಬಲಾರಂಭಿಸಿದೆ
ಜಲಾಶಯದಿಂದ ಜಲಪಾತದ ನಡುವಿನ ಪ್ರದೇಶದಲ್ಲೂ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದಾಗಿ ಜೋಗ ಜಲಪಾತಕ್ಕೆ ಹರಿವು ಹೆಚ್ಚಿದೆ. ರಾಜಾ –ರಾಣಿ- ರೋರರ್- ರಾಕೆಟ್ ಫಾಲ್ಸ್ ಗಳು ಒಂದಕ್ಕಿಂತ ಒಂದು ಹೆಚ್ಚಿನ ರಭಸದಿಂದ ಧುಮ್ಮಿಕ್ಕುತ್ತಿವೆ.

ಜೋಗದಲ್ಲಿ ಇಂದು 7 ಸಾವಿರ ಜನ ಭೇಟಿನೀಡಿದ್ದಾರೆ. ಸುಮಾರು 700 ಗೂ ಹೆಚ್ಚು ಕಾರು ಮತ್ತು ದ್ವಿಚಕ್ರ ವಾಹನದಲ್ಲಿ ಬಂದಿದ್ದಾರೆ. ನಿನ್ನೆ ರಾತ್ರಿಯಿಂದ ಹಿಡಿದ ಮಳೆಗೆ ಜೋಗ ರಮಣೀಯವಾಗಿ ಧುಮುಕುತ್ತಿದೆ. ಜೋಗದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಇಂದು ರಸ್ತೆಯ ಮೇಲೆ ಪಾರ್ಕಿಂಗ್ ಮಾಡಿದ್ದಾರೆ. ಸ್ಥಳೀಯರಿಗೆ ಇದರಿಂದ ಕಿರಿಕಿರಿ ಉಂಟು ಮಾಡಿದೆ.

ಇದನ್ನೂ ಓದಿ-https://suddilive.in/archives/18710

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close