ಸುದ್ದಿಲೈವ್/ಸೊರಬ
554 ಕೋಟಿ ವೆಚ್ಚದಲ್ಲಿ ಶರಾವತಿ ಡೆಡ್ ಸ್ಟೋರೇಜ್ ನಿಂದ ಶಿರಾಳಕೊಪ್ಪ, ಆನವಟ್ಟಿ ಹಾಗೂ ಸೊರಬ ಸೇರಿದ ಕುಡಿಯುವ ನೀರು ಒದಗಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂದಿನ ಒಂದು ತಿಂಗಳಲ್ಲಿ140 ಕೋಟಿವೆಚ್ಚದಲ್ಲಿ ಸೊರಬವನ್ನ ಸರ್ವಾಂಗಿಣ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ವರದ ನದಿ ತಡೆಗೋಡೆಗೆ 62 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದರು.
85% ಟೀಚರ್ಸ್ ನೇಮಕಾತಿ ಆಗಿದೆ. ಶಾಲೆಗಳಿಗೆ ಮಕ್ಕಳಿಗೆ 1500 ಕೋಟಿ ವೆಚ್ಚದಲ್ಲಿ ವಾರಕ್ಕೆ ಆರುದಿನವೂ ಬಿಸಿಯೂಟದಲ್ಲಿ ಮೊಟ್ಟೆ ನೀಡಲಾಗುವುದು. ದ ಝಳ ಡೌತಿ ನೀರನ್ನ ಎರಡು ಕೆಲಾನ್ ಮೂಲಕ ಕೆರೆ ತುಂಬಿಸಲಾಗುವುದು.
ಕೆನಾಲ್ ದುರಸ್ತೆನೂ ಅಡಗಲಿದೆ. ಕೃಷಿ ಚಟುವಟಿಗೆ ಸೋಲಾರ್ ಅಳವಡಿಕೆ ಮಾಡಲಾಗುವುದು. ಯಾರನ್ನೂ ಹೊಸ ಒತ್ತುವರಿ ಮಾಡುವರನ್ನ ಪುರಸ್ಕರಿಸಲಾಗದು. ಆದರೆ ಅರಣ್ಯ ಭೂಮಿಯಲ್ಲಿ ಅನಾದಿ ವರ್ಷಗಳಿಂದ ಬಂದವರನ್ನ ಒಕ್ಕಲೆಬ್ಬಿಸಲ್ಲ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಸಚಿವರು ಬಂದು ಮಲೆನಾಡಿಗರ ಅರಣ್ಯ ಭೂಮಿ ನಿವಾಸಿಗಳಿಗೆ ಒಳ್ಳೆಯ ಸುದ್ದಿಕೊಡುತ್ತೇನೆಂದಿದ್ದಾರೆ.ಆಕೆಲಸವನ್ನ ನಾವು ಕಾನೂನಾತ್ಮಕವಾಗಿ ಮಾಡಲಿದ್ದೇವೆ ಎಂದರು.
ವಿಮಾನ ನಿಲ್ದಾಣದ ಬಗ್ಗೆ ಗರಂ
ಶಿವಮೊಗ್ಗದ ವಿಮಾನ ನಿಲ್ದಾಣದ ಮೇಲೆ ಕಮಲದ ರೀತಿಯಲ್ಲಿ ನಿರ್ಮಿಸಲಾಗಿದೆ. ಆದರೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡರದಿರುವ ಹಗರಣದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ರಾಜೀನಾಮೆ ಸಿಎಂ ನೀಡಲಿ ಎಂದು ಹೇಳಿದ್ದಾರೆ. ಅವರೇನು ಕಾನೂನಾ ಎಂದು ಗರಂ ಆದರು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕೋಟ್ಯಾಂತರ ರೂ ವೆಚ್ಚ ಮಾಡಿದ್ದಾರೆ. ನೈಟ್ ಲ್ಯಾಂಡಿಗ್ ಸಮಸ್ಯೆಯಾಕೆ ಮಾಡುದ್ರಂತೆ. ಕಟ್ಟಡವನ್ನ ಕಮಲದ ರೀತಿ ಕಟ್ಟಲು ಬಿಜೆಪಿಗೆ ಬರುತ್ತೆ. ಸುಸಜ್ಜಿತ ಏರ್ ಪೋರ್ಟ್ ನಿರ್ಮಿಸಲು ಬರಲಿಲ್ಲವಾ ಎಂದು ಕುಟುಕಿದರು. ಇಂದು ಗೃಹಸಚಿವರು ಸೊರಬಕ್ಕೆ ಬರಬೇಕಿತ್ತು. ಆದರೆ ಏರ್ ಪೋರ್ಟ್ ಸಮಸ್ಯೆಯಂದ ಬರಲಿಲ್ಲ. ಈ ಹಿನ್ನಲೆಯಲ್ಲಿ ಅವರ ಹೇಳಿಕೆ ಗಂಭೀರತೆ ಪಡೆದುಕೊಂಡಿದೆ.
ಇದನ್ಬೂ ಓದಿ-https://suddilive.in/archives/19170