ಸುದ್ದಿಲೈವ್/ಸಾಗರ
ವೈವಾಹಿಕ ಜೀವನ ಮುರಿದು ಬಿದ್ದ ಹಿನ್ನಲೆಯಲ್ಲಿ ಸೇಡು ತೀರಿಸಿಕೊಳ್ಳಲು ಗಾಂಜಾ ಕೇಸ್ ಫಿಕ್ಸ್ ಮಾಡಿಸುವ ಉದ್ದೇಶದಿಂದ ಮನೆಯ ಕಾಂಪೌಂಡ್ ಒಳಗೆ ಗಾಂಜಾ ಪ್ಯಾಕೇಟ್ ಗಳನ್ನ ಎಸೆದು ಹೋಗಿರುವ ಬಗ್ಗೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಪ್ರಕರಣ ಎಫ್ಐಆರ್ ಆಗಿ 15 ದಿನ ಕಳೆದಿದ್ದು ಈಗ ಬೆಳಕಿಗೆ ಬಂದಿದೆ. ಹುಲ್ಲತ್ತಿ ಗ್ರಾಮದಲ್ಲಿ ಜಿತೇಂದ್ರ ಎಂಬ ಸಿವಿಲ್ ಇಂಜಿನಿಯರ್ ಮನೆಯಲ್ಲಿ 15-20 ಗ್ರಾಂ ತೂಕದ 19 ಗಾಂಜಾ ಪ್ಯಾಕೇಟ್ ಗಳು ಪತ್ತೆಯಾಗಿವೆ.
ಈ ಗಾಂಜಾವನ್ನ ಅಪರಿಚಿತರು ತಂದು ಇವರ ಮನೆಯ ಕಾಂಪೌಂಡ್ ಒಳಗೆ ಇಟ್ಟು ಹೋಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿಧ. ಈ ದೃಶ್ಯ ಮನೆಯ ಸಿಸಿ ಟಿವಿಯಲ್ಲಿ ಪತ್ತೆಯಾಗಿದೆ. ಈ ರೀತಿ ಮಾಡಲು ಜಿತೇಂದ್ರ ಅವರ ಮಾವನ ಮಗಳನ್ನ ಶಾಂತ ಕುಮಾರ ಸ್ವಾಮಿ ಎಂಬುವರಿಗೆ ಈ ಹಿಂದೆ ಕೊಟ್ಟು ಮದುವೆ ಮಾಡಲಾಗಿತ್ತು.
ಇವರ ವೈವಾಹಿಕ ಜೀವನ ಮುರಿದು ಬಿದ್ದಿದ್ದು ಶಾಂತ ಕುಮಾರ ಸ್ವಾಮಿ ಜಿತೇಂದ್ರ ಅವರ ಮಾವನ ಮಗಳಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಜಿತೇಂದ್ರ ಅವರ ಮನೆಯ ಒಳಗೆ ಗಾಂಜಾ ಪ್ಯಾಕೇಟ್ ನ್ನ ಮೂರನೇ ವ್ಯಕ್ತಿಯ ಮೂಲಕ ಬಿಸಾಕಿ ಹೋಗಿರಬಹುದು ಎಂದು ಶಂಕಿಸಿ ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ-https://www.suddilive.in/2024/07/blog-post_345.html