ಸುದ್ದಿಲೈವ್/ಶಿಕಾರಿಪುರ
ಅರಣ್ಯ ಪ್ರದೇಶದ ಖಾಲಿ ಬಾವಿಗೆ ಬಿದ್ದ ಆರು ವರ್ಷದ ಕರಡಿ ಸಾವನ್ನಪ್ಪಿದೆ. ಆಯತಪ್ಪಿ ಬಿದ್ದಿದ್ದ ಕರಡಿ ತೀವ್ರಗಾಯಗೊಂಡ ಪರಿಣಾಮ ಚಿಕಿತ್ಸೆಗೆ ಸ್ಪಂಧಿಸದೆ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಶಿಕಾರಿಪುರ ತಾಲ್ಲೂಕು, ಹುಲುಗಿನಕಟ್ಟೆ ಅರಣ್ಯ ಪ್ರದೇಶದಲ್ಲಿನ ಸುಮಾರು 40 ಅಡಿ ಆಳದ ಹಳೆಯ ತೆರೆದ ಬಾವಿಯಲ್ಲಿ ಗಙಡು ಕರಡಿಯೊಂದು ಆಯತಪ್ಪಿ ಬಿದ್ದಿತ್ತು.
ಆರು ವರ್ಷದ ಗಂಡು ಕರಡಿಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಾಗರ ವಿಭಾಗ ಇವರ ಮಾರ್ಗದರ್ಶನದಲ್ಲಿ ಅಗ್ನಿಶಾಮಕ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿ ಕರಡಿಯನ್ನು ಜೀವಂತವಾಗಿ ಮೇಲಕ್ಕೆ ಎತ್ತಿದರು.
ಕರಡಿಯು ತೀವ್ರ ಗಾಯಗೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತದೆ. ಈ ಕಾರ್ಯಚರಣೆಯಲ್ಲಿ ಶ್ರೀ ಸಂತೋಷಕುಮಾರ್ ಕೆಂಚಪ್ಪನವರ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಶ್ರೀ ಬಿ ಸುರೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಶಿಕಾರಿಪುರ ಉಪ ವಿಭಾಗರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಚರಣೆಯಲ್ಲಿ ಶ್ರೀ ರೇವಣಸಿದ್ದಯ್ಯ ಬಿ ಹಿರೇಮರ್, ವಲಯ ಅರಣ್ಯಾಧಿಕಾರಿ, ಶ್ರೀ ಮುರಳಿ ಪಶುವೈಧ್ಯಾಧಿಕಾರಿ,
ಅಗ್ನಿಶಾಮಕದಳದ ಠಾಣಾಧಿಕಾರಿ ಹಾಗೂ ಸಿಬ್ಬಂದಿ ವರ್ಗ, ಉಪ ವಲಯ ಅರಣ್ಯಾಧಿಕಾರಿಗಳಾದ ಸಚಿನ್, ಕುಮಾರ ನಾಯ್ಕ, ಹರೀಶ್, ಆಂಜನೇಯ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಇದನ್ನೂ ಓದಿ-https://www.suddilive.in/2024/07/6.html