'ಗೊಂದಲದ' ಹೇಳಿಕೆಗೆ ಕ್ಷಮೆ ಕೇಳುದ್ರಾ ಆರ್ ಎಂ ಎಂ?

ಸುದ್ದಿಲೈವ್/ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಸರ್ಕಾರಿ ಕಟ್ಟಡ ಉದ್ಘಾಟನೆಯ ವೇಳೆ ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡರ ಹೇಳಿಕೆ ಕಾಂಗ್ರೆಸ್ ಕಾರ್ಯಕರ್ತರನ್ನೇ ಮುಜುಗರಕ್ಕೆ ಈಡುಮಾಡಿತ್ತು.

ಇಂದು ಆ ಬಗ್ಗೆ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಗೌಡರು ಸ್ಪಷ್ಟನೆ ಮುಂದಾಗಿದ್ದಾರೆ. ಇದು ಸ್ಪಷ್ಟನೆನೋ ಅಥವಾ ತೇಪೆ ಹಚ್ಚುವ ಕೆಲಸವೋ ಎಂಬುದನ್ನ ಓದುಗರೆ ನಿರ್ಧರಿಸಬೇಕಿದೆ.‌

ಮೊನ್ನೆ ಶನಿವಾರ ನೆಡೆದ ಪೊಲೀಸ್ ಇಲಾಖೆ ಕಟ್ಟಡದ ಉದ್ಘಾಟನಾ ಸಮಾರಂಭದ ಭಾಷಣದಲ್ಲಿ ಮಲೆನಾಡಿನಲ್ಲಿ ಮನೆಗಳು ಸೋರುವುದು ಸಹಜ ಎಂದಿದ್ದೆ,ಈ ಕಟ್ಟಡ ಸೋರುತ್ತಿರುವುದು ಸಹಜ ಎಂದು ಹೇಳಿಲ್ಲ, ನನ್ನ ಮಾತಿಗೆ ಕ್ಷಮೆ ಇರಲಿ ಎಂದು ಆರ್ ಎಂ ಮಂಜುನಾಥ್ ಗೌಡ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ಇದ್ದ ಕಾರ್ಯಕ್ರಮದಲ್ಲಿ ಸೋರಿಕೆ ವಿಚಾರ ಪ್ರಾಸ್ತಾಪಿಸಿ ದೊಡ್ಡ ಗೊಂದಲ ಮಾಡಬಾರದು ಎಂದು ಆ ಹೇಳಿಕೆ ನೀಡಿದೆ ಎಂದಿದ್ದಾರೆ. ಕಳಪೆ ಕಾಮಗಾರಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿರುವ ವೇಳೆ ಗೌಡರ ಈ ‘ಗೊಂದಲದ’ ಹೇಳಿಕೆ ಅನುಮಾನವನ್ನೂ ಹುಟ್ಟಿಸಿತ್ತು.

ಕಳಪೆ ಕಟ್ಟಡದ ಕಾಮಗಾರಿಯ ಬಗ್ಗೆ ಸಾರ್ವಜನಿಕ ಚರ್ಚೆ ಆಗದಿದ್ದರೆ ಕಾಂಗ್ರೆಸ್ ನಾಯಕರೂ ಮಲಗಿಬಿಡುತ್ತಿದ್ದರೋ ಏನೋ ಗೊತ್ತಿಲ್ಲ. ಜನರೇ ಈ ಬಗ್ಗೆ ಮಾತನಾಡಿದ್ದರಿಂದ ಪಕ್ಷದ ನಾಯಕರು ಈಗ ಮೈಕೊಡವಿಕೊಂಡು ಎದ್ದಂತೆ ಕಾಣುತ್ತಿದೆ. ವೇದಿಕೆ ಮೇಲಿದ್ದ  ಬಿಜೆಪಿ ಮಾಜಿ ಸಚಿವರಿಗೆ ಗೊಂದಲ, ಮುಜುಗರ ಆಗಬೇಕಿತ್ತು. ಆದರೆ ಕಾಂಗ್ರೆಸ್ ನಾಯಕರಿಗೆ ಆಗಿದ್ದು ಮಾತ್ರ ಸೋಜಿಗ ಎನ್ನಬಹುದು.

ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿನ ಭಾರತೀಪುರ ರಸ್ತೆಯ ಪಕ್ಕದ ಗುಡ್ಡಗಳು ಕುಸಿಯಲು ಗುತ್ತಿಗೆದಾರರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಈ ಸಂಬಂಧ ಸೂಕ್ತ ತನಿಖೆ ನೆಡೆಸಿ ತಪ್ಪಿಸ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಹ ಗೌಡರು ಆಗ್ರಹಿಸಿದ್ದಾರೆ.‌

ಇದನ್ನೂ ಓದಿ-https://suddilive.in/archives/19593

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು