ಸುದ್ದಿಲೈವ್/ಸೊರಬ/ಸಾಗರ/ಹೊಸನಗರ
ಸಾಧರ್ಭಿಕ ಚಿತ್ರ |
ಮಲೆನಾಡಿನಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಮುಂದುವರೆದ ಮಳೆಯ ಆರ್ಭಟಕ್ಕೆ ಶಾಲೆ ಮತ್ತು ಕಾಲೇಜುಗಳಿಗೆ ಆಯಾ ತಹಶೀಲ್ದಾರ್ ಗಳು ರಜೆ ಘೋಷಿಸಿದ್ದಾರೆ.
ಸಧ್ಯಕ್ಕೆ ಹೊಸನಗರ, ಸಾಗರ ಮತ್ತು ಸೊರಬದ ತಹಶೀಲ್ದಾರ್ ಅವರು ತಮ್ಮ ತಾಲೂಕಿನಲ್ಲಿ ಮುಂದುವರೆದ ಮಳೆಯ ಆರ್ಭಟಕ್ಕೆ ಶಾಲಾ ಕಾಲೇಜಿನ ಮಕ್ಕಳಿಗೆ ರಜೆ ಘೋಷಿಸಿದ್ದಾರೆ.
ಸೊರಬ ಪಟ್ಟಣ ಸೇರಿ ತಾಲೂಕಿನಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಹಿತ ದೃಷ್ಠಿಯಿಂದ ಅಂಗನವಾಡಿ ಕೇಂದ್ರಗಳು ಹಾಗೂ ಶಾಲಾ- ಕಾಲೇಜುಗಳಿಗೆ ಜು. 19 ರಂದು ರಜೆ ಘೋಷಣೆ ಮಾಡಿರುವುದಾಗಿ ತಹಶೀಲ್ದಾರ್ ಮಂಜುಳಾ ಹೆಗಡಾಳ್ ತಿಳಿಸಿದ್ದಾರೆ.
ಉಳಿದ ಭದ್ರಾವತಿ, ಶಿವಮೊಗ್ಗ, ಶಿಕಾರಿಪುರ ಹಾಗೂ ತೀರ್ಥಹಳ್ಳಿಯ ತಹಶೀಲ್ದಾರ್ ಅವರು ಏನು ಮಾಡಲಿದ್ದಾರೆ. ಆಯಾ ತಾಲೂಕಿನಲ್ಲಿ ಮಳೆಯ ಪರಿಸ್ಥಿತಿ ಏನು ಎಂಬುದನ್ನ ಅವಲೋಕಿಸಿ ಕ್ರಮ ಕೈಗೊಳ್ಳಿದ್ದಾರೆ ಎಂಬುದನ್ನ ಕಾದು ನೋಡಬೇಕಿದೆ.
ಇದನ್ನೂ ಓದಿ-https://www.suddilive.in/2024/07/blog-post_237.html