ಕುಂಬಾರ ಗುಂಡಿಯ ರಸ್ತೆಯ ಮೇಲೆ ಹರಿದಿತ್ತು ತುಂಗ ನದಿ-ಮನೆಹಾನಿ ಪ್ರದೇಶಗಳಿಗೆ ಶಾಸಕ ವಿಸಿಟ್-ನಾಳೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ!

ಕುಂಬಾರಗುಂಡಿಯ ರಸ್ತೆಯ ಮೇಲೆ ಹರಿದ ತುಂಗೆ


ಸುದ್ದಿಲೈವ್/ಶಿವಮೊಗ್ಗ


ಹಳೇ ಮಂಡ್ಲಿ, ಮತ್ತು ಲಕ್ಷ್ಮೀಪುರದಲ್ಲಿ ತುಂಗನದಿ ನೀರು ತೀರ್ಥಹಳ್ಳಿ ರಸ್ತೆ ಮೇಲೆ ಹರಿದ ಹಾಗೆ ಕುಂಬಾರಗುಂಡಿಯ ರಸ್ತೆಯ ಮೇಲೆ ಇಂದು ಬೆಳಿಗ್ಗೆ ತುಂಗ ನದಿ ನೀರು ಹರಿದಿದೆ. 85 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿದು ಬಂದ ಪರಿಣಾಮ ಕುಂಬಾರ ಗುಂಡಿ ಮಾರಿಕಾಂಬ ದೇವಸ್ಥಾನದ ಪಕ್ಕದಲ್ಲಿರುವ ರಾಜಾಕಾಲುವೆಯಿಂದ ನದಿ ನೀರು ರಸ್ತೆಗೆ ಬಂದಿತ್ತು.‌ 


ಇಂದು ಬೆಳಿಗ್ಗೆ ಸುಮಾರು 9-15 ರ ವೇಳೆಗೆ ಬಟ್ಟೆ ಮಾರಗಕೆಟ್ ಡೌನ್, ಮತ್ತು ಜೆಪಿಎನ್ ಸ್ಕೂಲ್ ಬಳಿ ನದಿಯ ನೀರು ರಾಜಾಕಾಲುವೆಯಿಂದ ರುವರ್ಸ್ ಹೊಡೆದು ರಸ್ತೆಗೆ ಬಂದಿತ್ತು.‌ ಪುಣ್ಯಕ್ಕೆ ಯಾರ ಮನೆಗೂ ನೀರು ನುಗ್ಗಿಲ್ಲ. 


ಸಧ್ಯಕ್ಕೆ ತುಂಗೆಯ ಒಳಹರಿವು ಕಡಿಮೆಯಾಗಿದೆ. ಬೆಳಿಗ್ಗೆ 85 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದ ನೀರು  ಪ್ರಸ್ತುತ 80 ಸಾವಿರ ಕ್ಯೂಸೆಕ್ ಗೆ ತಗ್ಗಿದೆ. ಇದರಿಂದ ರಸ್ತೆಯ ಮೇಲೆ ಬಂದಿದ್ದ ನೀರು ಇಳಿಮುಖವಾಗಿದೆ. 


ಮಳೆ ಹಾನಿಗೊಳಗಾದ ಮನೆಗಳಿಗೆ ಶಾಸಕ ಚೆನ್ನಬಸಪ್ಪ ವಿಸಿಟ್!



ಬೆಂಗಳೂರಿನ ಅಧಿವೇಶನ ಮುಗಿಸಿಕೊಂಡು ಬಂದ ಶಾಸಕ ಚೆನ್ನಬಸಪ್ಪ ನಗರದ ಒಳಗೆ ಹಾನಿಗೊಳಗಾದ ಮನೆಗಳಿಗೆ ಅಧಿಕಾರಿಗಳ ಸಮೇತ ವಿಸಿಟ್ ಮಾಡಿದ್ದಾರೆ. ಶಾಂತಿನಗರದ ಪೀರ್ ಸಾಬ್ ಮನೆ, ಮುಮ್ತಾಜ್ ಕೋಂ ಶೇಖ್ ಅಹ್ಮದ್, ತ್ರಿಮೂರ್ತಿನಗರದಲ್ಲಿ ಶಾಂತಮ್ಮ ಕೋಂ ಕಣ್ಣಪ್ಪ, ಶ್ರೀನಿವಾಸ್, 

ಮಳೆಗೆ ಹಾನಿಗೊಳಗಾದ ಮನೆಗಳಿಗೆ ಶಾಸಕ ಚೆನ್ನಬಸಪ್ಪ ಭೇಟಿ, ಪರಿಶೀಲನೆ


ಅಶೋಕರಸ್ತೆಯಲ್ಲಿ ವಿಜೇಂದ್ರ, ಪುರಲೆಯಲ್ಲಿ ರೂಪ ಕೋಂ ಚಂದ್ರಪ್ಪ, ಚೌಡೇಶ್ ಬಿನ್ ರಂಗಪ್ಪ, ಮಂಜಮ್ಮ‌ಕೋಂ ರಂಗಪ್ಪ, ಗುರುಪುರದಲ್ಲಿ ಗೌರಿ ಕೋ ರಾಜೀವ್, ವಿದ್ಯಾನಗರದ ಭೋವಿ ಕಾಲೋನಿಯಲ್ಲಿ ಸುಶೀಲಮ್ಮ, ಪ್ಯಾರಿ ಜಾನ್, ವಿದ್ಯಾನಗರದ 4 ನೇ ತಿರವಿನಲ್ಲಿ ಗಣೇಶ್, ಸವಾಯಿಪಾಳ್ಯದ ಜಾಮೀಯಾ ಮಸೀದಿ, ಗೋಪಾಳದ ಜೆಪಿನಗರದಲ್ಲಿ ರತ್ನೋಜಿಯವರ ಮನೆಗಳು ಹಾನಿಗೊಳಗಾಗಿದ್ದವರು. ತಹಶೀಲ್ದಾರ್ ಗಿರೀಶ್, ಆಯುಕ್ತೆ ಕವಿತಾ ಯೋಗಪ್ಪನವರ್ ಹಾಗೂ ಇತರೆ ಅಧಿಕಾರಿಗಳ  ಜೊತೆ ಶಾಸಕರು ಮನೆಹಾನಿಯಾದ ಜಾಗಗಳಿಗೆ ವಿಸಿಟ್ ಮಾಡಿದ್ದಾರೆ. 


ನಾಳೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ

ಸಚಿವ ಮಧುಬಂಗಾರಪ್ಪ

ನಾಳೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಶಿವಮೊಗ್ಗ ನಗರದ ಮಳೆಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಸವಾಯಿ ಪಾಳ್ಯದ ಮಸೀದಿ, ವಿದ್ಯಾನಗರದ ಭೋವಿ ಕಾಲೋನಿಗಳಲ್ಲಿ ಮನೆ ಬಿದ್ದು ಹೋದ ಜಾಗಗಳಿಗೆ ಭೇಟಿ ನೀಡಲಿದ್ದಾರೆ. ಈ ಎಲ್ಲಾ ಹಾನಿಗೊಳಗಾದ  ಪ್ರದೇಶಗಳಿಗೆ ಭೇಟಿ ನೀಡುವ ಮೊದಲು ಗಾಜನೂರಿನ ತುಂಗ ಜಲಾಶಯಕ್ಕೆ ಭೇಟಿ ನೀಡಲಿದ್ದಾರೆ. ನಂತರ ಕಾಡಾ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. 


ಇದನ್ನೂ ಓದಿ-https://www.suddilive.in/2024/07/blog-post_148.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close