ಹಲ್ಲೆಗೊಳಗಾದ ಬಸವರಾಜ್ ಮನೆಗೆ ಹಿಂದೂ ಹುಲಿ ಈಶ್ವರಪ್ಪ ಭೇಟಿ

ಸುದ್ದಿಲೈವ್/ಶಿವಮೊಗ್ಗ

ಮೊನ್ನೆ ದಿವಸ ಗಾಂಧಿ ಬಜಾರನ ಫುಟ್ ಪಾತ್  ಕಟ್ಲೆಕಾಯಿ ವ್ಯಾಪಾರಿ ಬಸವರಾಜ್ ಅವರ ಮೇಲೆ ಟ್ರಾಫಿಕ್ ಪೊಲೀಸ್ ಸೇರಿನಿಂದ ಹಲ್ಲೆ ಮಾಡಿರುವ ಘಟನೆಗೆ ಕುರಿತಂತೆ ಮಾಜಿ ಡಿಸಿಎಂ ಹಾಗೂ ಹಿಂದೂ ಹುಲಿ ಕೆ.ಎಸ್.ಈಶ್ವರಪ್ಪ ಬಸವರಾಜ್ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಹಲ್ಲೆಗೊಳಗಾದ ಬಸವರಾಜ್ ಅವರ ತಲೆಗೆ ಹೊಲಿಗೆ ಹಾಕಲಾಗಿದೆ. ಹಾಗೂ ಅವರ ಹೆಚ್ಚಿನ ಚಿಕಿತ್ಸೆಗಾಗಿ  ಮೆಗ್ಗಾನ್ ಜಿಲ್ಲಾ ಅಧಿಕ್ಷಕರಿಗೆ ಸೂಚನೆ ನೀಡಿದರು. ಈ ವೇಳೆ ಚಿಕಿತ್ಸೆಗಾಗಿ ಸ್ವಲ್ಪ ಪ್ರಮಾಣದ ಹಣವನ್ನ ಬಸವರಾಜ್ ಕುಟುಂಬಕ್ಕೆ ನೀಡಿದರು.

ಜು.8 ರಂದು ಸಂಜೆಯ ವೇಳೆಗೆ ಗಾಂಧಿ ಬಜಾರ್ ನಲ್ಲಿ ವ್ಯಾಪಾರ ಮಾಡುತ್ತಿದ್ದ ಬಸವರಾಜ್ ನ ಮೇಲೆ ಸೇರಿನಿಂದ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡಿದ ವೇಳೆ ಆತನ ತಲೆಗೆ ಬಲವಾದ ಪೆಟ್ಟು ಬಿದ್ದು ಮೆಗ್ಗಾನ್ ನಲ್ಲಿ ಹೊಲಿಗೆ ಹಾಕಲಾಗಿದೆ. ಈ ಪ್ರಕರಣ ಸಂಜೆಯ ವೇಳೆಗೆ ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿತ್ತು.

ಈ ಬೆನ್ಬಲ್ಲೇ ಮಾಜಿ ಡಿಸಿಎಂ ಈಶ್ವರಪ್ಪ ಹಾಗೂ ಪುತ್ರ ಕಾಂತೇಶ್ ಅವರ ಆರೋಗ್ಯ ವಿಚಾರಿಸಿದ್ದಾರೆ. ನಿನ್ನೆಯಿಂದಲೇ ಹಿಂದೂ ಸಂಘಟನೆಯ ವಿವಿಧ ನಾಯಕರು ಬಂದು ಆರೋಗ್ಯ ವಿಚಾರಿಸಿದ್ದಾರೆ. ಹಿಂದೂ ಜಾಗರಣ ವೇದಿಕೆಯ ದೇವರಾಜ್ ಅರಳಹಳ್ಳಿ ನಿನ್ನೆ ಮೆಗ್ಗಾನ್ ಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.

ಇಂದು ಗಾಯಗೊಂಡ ಬಸವರಾಜ್ ಮನೆಗೆ ರಾಷ್ಟ್ರಭಕ್ತ ಬಳಗದ ಸದಸ್ಯರು ಹಾಗೂ ಕಾರ್ಯಕರ್ತರಾದ ಅಮ್ಮ ಪ್ರಕಾಶ್ ರಾಜು ಎಸ್ ಟಿ ಡಿ ಗನ್ನಿ ಶಂಕರ್  ಪ್ರಕಾಶ್ ಬಾಲು ಮಾರುತಿ ಎಂ ರಾಮಚಂದ್ರಪ್ಪ ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

ಇದನ್ಬೂ ಓದಿ-https://suddilive.in/archives/18911

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close