ಸುದ್ದಿಲೈವ್/ಶಿವಮೊಗ್ಗ
ಎರಡು ಮೂರು ದಿನಗಳ ಹಿಂದೆ ಮಲೆನಾಡಿನಲ್ಲಿ ಕಡಿಮೆಯಾಗಿದ್ದ ಮಳೆಯ ಆರ್ಭಟ ಮತ್ತೆ ಹೆಚ್ಚಳವಾಗಿದೆ. ಇದರ ಪರಿಣಾಮ ಮತ್ತೆ ನದಿ, ಹಳ್ಳಕೊಳ್ಳ ಮತ್ತು ಜಲಾಶಯಗಳು ಭರ್ತಿಯಾಗಿವೆ.
ತುಂಗ ನದಿಗೆ ನಿನ್ನೆ 53 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಇಂದು ಬೆಳಿಗ್ಗೆ 58 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮಳೆಯ ತೀವ್ರತೆಯ ಹಿನ್ನಲೆಯಲ್ಲಿ 62 ಸಾವಿರ ಕ್ಯೂಸೆಕ್ ನೀರನ್ನ ಜಲಾಶಯದಿಂದ ನದಿಗೆ ಹರಿಸಲಾಗುತ್ತಿದೆ. 15 ಗೇಟ್ ಗಳನ್ನ 2 ಮೀಟರು ಎತ್ತರಿಸಲಾಗಿದೆ. 5 ಗೇಟ್ ಗಳನ್ನ 1 ½ ಮತ್ತು 1 ಗೇಟನ್ನ ಅರ್ಧ ಮೀಟರ್ ಎತ್ತರಿಸಿ ನದಿಗೆ ನೀರು ಹರಿಸಲಾಗುತ್ತಿದೆ.
ಭದ್ರ ನದಿಗೆ ನಿನ್ನೆ 23 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರಿನ ಒಳಹರಿವಿತ್ತು. 186 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ನಿನ್ನೆ 171.6 ಅಡಿ ನೀರು ಸಂಗ್ರಹವಾಗಿತ್ತು. ಇಂದು 35 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 174.3 ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ 154 ಅಡಿ ಆಜುಬಾಜಿವಿನಲ್ಲಿ ನೀರು ಸಂಗ್ರಹವಾಗಿತ್ತು.
ಲಿಂಗನಮಕ್ಕಿ ಜಲಾಶಯದ ಒಳ ಹರಿವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇವತ್ತು 65,147 ಕ್ಯೂಸೆಕ್ ಒಳ ಹರಿವು ಇದೆ. ನೀರಿನ ಮಟ್ಟ 1804.80 ಅಡಿಗೆ ತಲುಪಿದೆ. ಒಟ್ಟು 151.64 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಡ್ಯಾಂನಲ್ಲಿ ಈವರೆಗೆ 108.31 ಟಿಎಂಸಿ ನೀರು ಸಂಗ್ರಹವಾಗಿದೆ.
ಇದನ್ನೂ ಓದಿ-https://www.suddilive.in/2024/07/3.html