ಸುದ್ದಿಲೈವ್/ಶಿವಮೊಗ್ಗ
ಇಲ್ಲಿನ ತಾವರೆ ಚಟ್ನಹಳ್ಳಿಯಲ್ಲಿರುವ ಇನ್ ಸ್ಕಾರ್ಟ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಡೆಲಿವರಿ ಟೀಮ್ ನ ಲೀಡರ್ ಆಗಿದ್ದ ಯುವಕನಿಂದ ವಂಚನೆ ಆಗಿದೆ ಎಂದು ಆರೋಪಿಸಿ ಸಂಸ್ಥೆಯ ವ್ಯವಸ್ಥಾಪಕರು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡುದ್ದಾರೆ.
ಈ ಸಂಸ್ಥೆಯು ಆನ್ ಲೈನ್ ನ ಫ್ಲಿಪ್ ಕಾರ್ಟ್ ಸಂಸ್ಥೆಯಿಂದ ಗ್ರಾಹರ ಆರ್ಡರ್ ನ್ನ ಡೆಲಿವರಿ ಮಾಡುವ ಸಂಶ್ಥೆಯಾಗಿದ್ದು, ಈ ಸಂಸ್ಥೆಗೆ ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದ ರಾಕೇಶ್ ಎಂಬ ಟೀಮ್ ಲೀಡರ್ ಸಂಸ್ಥೆಗೆ 8,81097 ರೂ. ಹಣ ವಂಚಿಸಿರುವ ಬಗ್ಗೆ ವ್ಯವಸ್ಥಾಪಕರು ಠಾಣೆಗೆ ದೂರು ನೀಡಿದ್ದಾರೆ.
ರಾಕೇಶ್ ಸಂಸ್ಥೆಯ ವೇರ್ ಹೌಸ್ ನಲ್ಲಿದ್ದು ನಂತರ ಟೀಮ್ ಲೀಡರ್ ಆಗಿದ್ದ. ಈತನ ಕೈ ಅಡಿ 9 ಜನ ಡೆಲಿವರಿ ಬಾಯ್ ಇದ್ದರು. ಮೇ03 ರಿಂದ ಮೇ30 ರವರೆಗೆ ನಿಯತ್ತಾಗಿ ಹಣ ಕಟ್ಟಿಕೊಂಡು ಬರುತ್ತಿದ್ದ ರಾಕೇಶ್ ನಂತರದ ದಿನಗಳಲ್ಲಿ ಡೆಲಿವರಿಯಿಂದ ಸಂಗ್ರಹವಾಗುತ್ತಿದ್ದ ಹಣವನ್ನ ಬ್ಯಾಂಕ್ ಗೆ ಕಟ್ಟದೆ ಇರುವಾಗ ಸಂಸ್ಥೆಯ ವ್ಯವಸ್ಥಾಪಕರಿಗೆ ಅನುಮಾನ ಬಂದಿದೆ.
ನಂತರ ಬ್ಯಾಂಜ್ ನ ಬ್ಯಾಲೆನ್ಸ್ ಶೀಟ್ ನೋಡಿದಾಗ ರಾಕೇಶ್ ಸರಿಯಾಗಿ ಹಣಕಟ್ಟದೆ 8,81,097 ರೂ ವಂಚಿಸಿರುವ ಬಗ್ಗೆ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ-https://suddilive.in/archives/18667