ಸುದ್ದಿಲೈವ್/ತೀರ್ಥಹಳ್ಳಿ
ರಾಷ್ಟ್ರೀಯ ಹೆದ್ದಾರಿ ಕುರುವಳ್ಳಿ – ಬಾಳೆಬೈಲು ಬೈಪಾಸ್ ರಸ್ತೆಯ ಧರೆ ಕುಸಿದಿದ್ದು ವಾಹನಗಳಿಗೆ ಓಡಾಡಲು ಸಂಚಾರಕ್ಕೆ ಅನಾನುಕೂಲವಾಗುತ್ತಿದೆ.
ರಸ್ತೆಯ ಮೇಲೆ ಮಣ್ಣು ಕುಸಿದು ಬಿದ್ದಿದ್ದು ಸಂಬಂಧಪಟ್ಟ ಅಧಿಕಾರಿಗಳು ಈಗಾಗಲೇ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ತಾಲೂಕಿನಲ್ಲಿ ಮಳೆಯಾಗುತ್ತಿದ್ದು ಮತ್ತಷ್ಟು ಮಣ್ಣು ಕುಸಿಯುವ ಭೀತಿ ಎದುರಾಗಿದೆ.
ಜಿಲ್ಲೆಯಲ್ಲಿ ಜುಲೈ ತಿಂಗಳ ವಾಡಿಕೆ ಮಳೆ ಅರ್ಧದಷ್ಟು ಬಿದ್ದಿದೆ. 603.54 ಮಿಮಿ ರಷ್ಟು ಮಳೆಯಾಗಬೇಕಿದ್ದು ಇಲ್ಲಿಯ ವರೆಗೆ 346.ಮಿಮಿ ಮಳೆಯಾಗಿದೆ. ತೀರ್ಥಹಳ್ಳಿಯಲ್ಲಿ ಕಳೆದ 24 ಗಂಟೆಯಲ್ಲಿ 56.20 ಮಿಮಿ ಮಳೆ ಸುರಿದಿದೆ.
ಆಗುಂಬೆಯ 5 ನೇ ತಿರುವಿನಲ್ಲಿ ಶನಿವಾರ ಧರೆ ಕುಸಿದಿತ್ತು. ಇಂದು ಕುರುವಳ್ಳಿ -ಬಾಳೆಬೈಲಿನಲ್ಲಿ ಧರೆ ಕುಸಿದಿದೆ. ಮಲೆನಾಡಿನಲಗಲಿ ಮಳೆಗಾಲದಲ್ಲಿ ಇದು ಸರ್ವೇಸಾಮಾನ್ಯವಾದರೂ ಜಾಗರೂಕತೆಯಿಂದ ವಾಹನ ಚಲಾಯಿಸುವಂತಾಗಿದೆ.
ಇದನ್ನೂ ಓದಿ-https://suddilive.in/archives/19361