ಈಸ್ಟ್ ಇಂಡಿಯಾ ಕಂಪನಿಯಂತಾಗಿದೆ ಸ್ಮಾರ್ಟ್ ಸಿಟಿ-ಕೆಬಿಪಿ ಈ ರೀತಿ ಹೇಳಿದ್ದೇಕೆ?

 

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆಬಿಪಿ ಸುದ್ದಿಗೋಷ್ಠಿ

ಸುದ್ದಿಲೈವ್/ಶಿವಮೊಗ್ಗ


ನಗರದಲ್ಲಿ ಸ್ಮಾರ್ಟ್ ಸಿಟಿಯೋಜನೆಯ ಅವ್ಯವಹಾರ, ಕಿದ್ವಾಯಿ ಮಾದರಿಯ ಆಸ್ಪತ್ರೆಯ ನಿರ್ಮಾಣದಲ್ಲಿ ವಿಳಂಬ, ಸ್ವಚ್ಚತೆ ಮತ್ತು ನಾಯಿ ಹಾವಳಿಗಳ ಕುರಿತು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಸುದ್ದಿಗೋಷ್ಠಿ ನಡೆಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರೆ ಸಚಿವ ಮಧು ಬಂಗಾರಪ್ಪನವರಿಗೆ ತನಿಖೆ ನಡೆಸಲು ಆಗ್ರಹಿಸಿದರು. 


ಮೆಗ್ಗಾನ್ ಆಸ್ಪತ್ರೆಯ ಕಳೆದ ನವೆಂಬರ್ ನಲ್ಲಿ ಕಿದ್ವಾಯಿ ಆಸ್ಪತ್ರೆ ಮಾದರಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಕಟ್ಟುವುದಾಗಿ ಹೇಳಿದ್ದ ಸರ್ಕಾರದ ಸಚಿವರಾದ ಶರಣಪ್ರಕಾಶ್ ಪಾಟೀಲ್ ಮತ್ತು ಮಧು ಬಂಗಾರಪ್ಪನವರು ಭೂಮಿ ಪೂಜೆ ಮಾಡಿ ವರ್ಷದ ಒಳಗೆ  ಕಟ್ಟಡ ನಿರ್ಮಾಣವಾಗಲಿದೆ ಎಂಬ ಭರವಸೆ ಸುಳ್ಳಾಗಿದೆ. ಕಟ್ಟಡ ಇನ್ನೂ ಮೇಲೆಳುವುದರಲ್ಲೇ ಇದೆ ಎಂದು ವಾಗ್ದಾಳಿ ನಡೆಸಿದರು. 


ಕ್ಯಾನ್ಸರ್ ಗೊತ್ತಾಗಿ ಸ್ಕ್ಯಾನ್ ಮಾಡಿಸಿಕೊಳ್ಳುವುದರೊಳಗೆ ಅದು ಕೊನೆಯ ಹಂತ ತಲುಪಲಿದೆ. ಮೆಗ್ಗಾನ್ ಆಸ್ತ್ರೆಯ ಹಾಸ್ಟೆಲ್ ಕಡೆ ಹೋಗುವ ದಾರಿಯಲ್ಲಿ ನಿರ್ಮಾಣವಾಗುತ್ತಿರುವ ಕಿದ್ವಾಯಿ ಮಾದರಿಯ ಆಸ್ಪತ್ರೆ ನಿರ್ಮಾಣಕ್ಕೆ  ಹೈಕೋರ್ಟ್ ಸ್ಟೇ ನೀಡಿದೆ.  ಈ ಬಗ್ಗೆ  ಸಿಮ್ಸ್ ಡೀನ್ ಅವರೇ ಸ್ಪಷ್ಟಪಡಿಸಿದ್ದಾರೆ.   ಇದರಿಂದ ಬಡ ಜನರಿಗೆ ತೊಂದರೆ ಆಗುತ್ತಿದೆ ಎಂದು ತಿಳಿಸಿದರು. 


ಕ್ಯಾನ್ಸರ್ ಪತ್ತೆಗೆ ಅನುಕೂಲವಾಗಿರುವ ಪೆಟ್ ಸ್ಕ್ಯಾನ್ ನನ್ನಾದರೂ ಆಸ್ಪತ್ರೆಯಲ್ಲಿ ಆರಂಭಿಸಬೇಕು. ಆಸ್ಪತ್ರೆಯಲ್ಲಿ ಇದನ್ನ ಆರಂಭಿಸಿದರೆ ಕ್ಯಾನ್ಸರ್ ಪತ್ತೆಹಚ್ಚಲು ಅನುಕೂಲವಾಗಲಿದೆ ಎಂದ ಅವರು, ಬಡವರ ಸೂರು ಆರಂಭಿಸಲು ಗೋವಿಂದಾಪುರ ಮತ್ತು ಗೋಪಿಶೆಟ್ಟಿಯಲ್ಲಿ ಆಶ್ರಯ ಮನೆಗಳ ಸಮುಚ್ಚಾಯ ಆರಂಭಿಸಿ 3 ವರ್ಷ ಕಳೆದರೂ ಮನೆ ಪೂರ್ಣವಾಗಿಲ್ಲ.  ಜು.21, 221 ಕ್ಕೆ ನಾಗಾರ್ಜುನ ಸಂಸ್ಥೆಗೆ 236 ಕೋಟಿ ವ್ಯಯದಲ್ಲಿ ನಿರ್ಮಾಣವಾಗುತ್ತಿದ್ದು ಇದರಲ್ಲಿ 128 ಕೋಟಿ ಹಣ ಪೇಮೆಂಟ್ ಆಗಿದೆ.


ಪಾಲಿಕೆಯಲ್ಲಿ ಹಣವಿಲ್ಲ


ಆದರೆ ಇದುವರೆಗೂ 50% ಹಣ ಪೇಮೆಂಟ್ ಆದರೂ ಮನೆ 50% ನಿರ್ಮಾಣವಾಗಿಲ್ಲ. ಗುತ್ತಿಗೆದಾರ ಈಗ ಮತ್ತೆ 9 ಕೋಟಿ ಬಿಲ್ ನೀಡಿದ್ದಾನೆ. ಈ ಬಗ್ಗೆ ಪಾಲಿಕೆಯಲ್ಲಿ ಹಣವಿಲ್ಲ ಎಂದು  ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಮುಂದೆ ಏನು ಮಾಡಬೇಕು. ಈ ಬಗ್ಗೆ  ಡಿಸಿಎಂ ಈಶ್ವರಪ್ಪ ಪ್ರತಿಭಟಿಸಿದ್ದಾರೆ. ಹಣ ಕಟ್ಟಿದವರಿಗೆ ಬ್ಯಾಂಕ್ ಲೋನ್ ಆರಂಭವಾಗಿದೆ. ಇದಕ್ಕೆ ಜಿಲ್ಲಾ ಮಂತ್ರಿಗಳು ಸಹಕಾರಕ್ಕೆ ಬರಬೇಕು ಎಂದರು. 


ಯುಜಿ ಕೇಬಲ್ ಬಗ್ಗೆ ತನಿಖೆಯಾಗಲಿ


ಸ್ಮಾರ್ಟ್ ಸಿಟಿ ಅನುದಾನದಲ್ಲಿ 30% ಯುಜಿ ಕೇಬಲ್ ಗೆ ವ್ಯಯ ಮಾಡಲಾಗಿತ್ತು. ವಿದ್ಯುತ್ ಕಂಬಗಳ ಹಾವಳಿ ತಪ್ಪಿಸಲು ಯುಜಿ ಕೇಬಲ್ ಮೊರೆಹೋಗಲಾಗಿತ್ತು. 6 ವಾರ್ಡ್ ಗಳಲ್ಲಿ ಇದನ್ನ ಸ್ಥಾಪಿಸಲಾಗಿತ್ತು. ಆದರೆ ಯುಜಿ ಕೇಬಲ್ ಒಳಗಡೆನೇ ಸ್ಪೋಟವಾಗಿತ್ತು. ಇದರ  ಬೆನ್ನಲ್ಲೇ ಮೆಸ್ಕಾಂ ಮುಖ್ಯ ಅಭಿಯಂಯತರ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಲಾಗಿದೆ. ಆದರೆ ತನಿಖಾ ಸಮಿತಿ ಇನ್ನೂ ಗುತ್ತಿಗೆದಾರರು ಇಲಾಖೆಗೆ ಹಸ್ತಾಂತರ ಮಾಡಿಲ್ಲ ಎಂದಿದ್ದಾರೆ. ಯುಜಿ ಕೇಬಲ್ ಹಾಳಾಗಿ ಮತ್ತೆ ಬೇರೆ ಕಂಬಗಳ ಮೂಲಕ ವಿದ್ಯುತ್ ಸಂಪರ್ಕ ನೀಡಲಾಗಿದೆ. 


ತನಿಖೆ ಮತ್ತು ತಪಾಸಣೆಗೆ ಹೋಗುವ ಅಧಿಕಾರಿಗಳು ನಿವಾಸಿಗಳ ಗಮನಕ್ಕೆ ತಂದು ತನಿಖೆಯಾಗಬೇಕು. ಯುಜಿ ಕೇಬಲ್ ಸರಿಯಾದ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. 


ತುಂಗ ನದಿ ನೋಡಲು ಹಣ ಕೊಡಬೇಕು


ಮಂಟಪಕ್ಕೆ ತುಂಗ ನದಿ ನೋಡಲು ಕೋರ್ಪಳಯ್ಯನ ಛತ್ರದ ಬಳಿ ಹಣ ನೀಡಿ ನೋಡುವ ಸ್ಥಿತಿ ನಿರ್ಮಾಣವಾಗಿದೆ ಈಸ್ಟ್ ಇಂಡಿಯಾ ಕಂಪನಿ ವಾಪಾಸ್ ಆದಂತೆ ಭಾಸವಾಗುತ್ತಿದೆ. ಇದು ಬದಲಾಗಬೇಕು. ಸ್ಮಾರ್ಟ್ ಸಿಟಿಯಲ್ಲಿ ಲೂಟಿ ಆಗಿದ್ದುಸಾಕಾಗದೆ ಅ್ನ್ನ ನೋಡಲು ಜನ ಮತ್ತೆ ಶುಲ್ಕಕಟ್ಟಬೇಕು ಎಂದರೆ ನಾಚಿಕೆಗೇಡು ಎಂದರು. 


ನಾಯಿ, ಹಂದಿ ಮೊದಲಾದ ಪ್ರಾಣಿಗಳ ಹಾವಳಿ ತಪ್ಪಿಸಿ-ಕಡಿದಾಳ್ ಗೋಪಾಲ್


ಕಡಿದಾಳ ಗೋಪಾಲ್, ಬೀದಿ ನಾಯಿ ಹಾವಳಿ ಹೆಚ್ಚಾಗಿದೆ. ನಾಯಿಗಳ ಸಂತತಿ ಹೆಚ್ಚಾಗಿದೆ. ಪಾಲಿಕೆ ನಿಯಂತ್ರಣ ಮಾಡುವುದಾಗಿ ಹೇಳಿ ಏನು ಕ್ರಮ ಕೈಗೊಂಡಿದ್ದಾರೋ ಗೊತ್ತಿಲ್ಲ. ಸಂತತಿ ಹೆಚ್ಚಾಗಿದೆ. ಹಂದಿಗಳ ಹಾವಳಿ ಹೆಚ್ಚಾಗಿದೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮವಹಿಸಬೇಕು ಎಂದರು. 


ಸೊಳ್ಳೆ ಹೆಚ್ಚಾಗಿದೆ ಡೆಂಗೇ ಜ್ವರ ಹೆಚ್ಚಾಗಿದೆ. ಕ್ರಮ ಕೈಗಪಳ್ಖಬೇಕು. ಬಡಾವಣೆಗಳಲ್ಲಿ ಬೀದಿ ದೀಪಗಳೇ ಇಲ್ಲವಾಗಿದೆ. ಮಳೆ ಹಾನಿ ಉಂಟಾಗಿದೆ. ಮನ್ಸೂನ್  ಮತ್ತು ಸೈಕ್ಲೋನ್ ನಿಂದ ಮಳೆ ಹೆಚ್ಚಾಗಿ ಅನಾಹುತವಾಗಿದೆ. 

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ನ ದೀಪಕ್ ಸಿಂಗ್, ರಾಮಕೃಷ್ಣ, ನರಸಿಂಹ ಗಂಧದಮನೆ, ನಿಖಿಲ್, ದಯನಂದ್, ರಘು, ಗೀತಾ ಸತೀಶ್ ಮೊಲಾದವರು ಉಪಸ್ಥಿತರಿದ್ದರು. 


ಇದನ್ನೂ ಓದಿ-https://www.suddilive.in/2024/07/blog-post_764.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close