ಸುದ್ದಿಲೈವ್/ಶಿವಮೊಗ್ಗ
ಭದ್ರ ಜಲಾಶಯದಲ್ಲಿ ರಿವರ್ಸ್ ಗೇಟಿನಿಂದ ಹರಿದು ಹೋಗುತ್ತಿದ್ದ ನೀರನ್ನ ಸಂಪೂರ್ಣ ಬಂದ್ ಮಾಡಲಾಗಿದೆ. ಮೂರು ದಿನಗಳಿಂದ ತಲೆ ನೀವಾಗಿದ್ದ ರಿವರ್ಸ್ ಸ್ಲೂಯಿಸ್ ಗೇಟ್ ಮುಚ್ಚಲಾಗಿದ್ದು ನದಿಗೆ ಹರಿದು ಹೋಗುತ್ತಿದ್ದ ನೀರನ್ನ ತಡೆಯಲಾಗಿದೆ.
ಭದ್ರ ಜಲಾಶಯದಿಂದ ಜು.5 ರಿಂದ ನೀರು ನದಿಗೆ ಹರಿದು ಹೋಗುತ್ತಿತ್ತು. ಮೂರು ದಿನಗಳಲ್ಲಿ ಭದ್ರನದಿಯಿಂದ (0.34) ಟಿಎಂಸಿ ನೀರು ಸೋರಿ ಹೋಗುತ್ತಿತ್ತು. ಜಲಾಶಯದಲ್ಲಿ 130 ಅಡಿ ನೀರು ಸಂಗ್ರಹವಾಗಿತ್ತು. 186 ಅಡಿ ಭರ್ತಿಯಾಗಲು ಬೇಕಾಗಿರುವ ನೀರು ಕಣ್ಣುಮುಂದೆನೆ ಸೋರಿ ಹೋಗುತ್ತಿರುವುದು ತಲೆ ನೋವಾಗಿತ್ತು.
ನೀರಿನ ಒಳಗೆ ಆಕ್ಸಿಜನ್ ಕಟ್ಟಿಕೊಂಡ ಸಿಬ್ವಂದಿಗಳು ನೀರಿನಲ್ಲಿ ಇಳಿದು ಯುದ್ದೋಪಾಯದಲ್ಲಿ ಕೆಲಸ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಭದ್ರ ಜಲಾಶಯ ನಿರ್ವಾಹಣ ವಿಭಾಗದ ನಿರ್ವಾಹಕ ಇಂಜಿನಿಯರ್ ಎನ್.ರವಿಕುಮಾರ್ ಆರು ಮಂದಿ ಮುಳುಗು ತಜ್ಞರು ಸೇರಿದಂತೆ ಕೊಡಗಿನಿಂದ ಬಂದಿರುವ 20 ಮಂದಿ ತಂತ್ರಜ್ಞರು ಈ ಕಾರ್ಯದಲ್ಲಿ ತೊಡಗಿದ್ದಾರೆ. ‘ಹೈದರಾಬಾದ್‌ನಲ್ಲಿರುವ ಡಿಎಸ್‌ಆರ್‌ಪಿಯ ಗೇಟ್ ತಂತ್ರಜ್ಞರೊಬ್ಬರು ಆನ್‌ಲೈನ್ ಮೂಲಕವೇ ದುರಸ್ತಿ ಕಾರ್ಯಕ್ಕೆ ಕೆಎನ್‌ಎನ್‌ಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.
ಡಿಎಸ್‌ಒ ಅಧಿಕಾರಿಗಳು ಬೆಂಗಳೂರಿನಿಂದ ಸಲಹೆ ಸೂಚನೆ ನೀಡುತ್ತಿದ್ದಾರೆ. ಕೆಎನ್ಎನ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಮ್ಮಿನಬಾವಿ ಕಾರ್ಯಾಚರಣೆಯ ಸಮನ್ವಯ ನಡೆಸುತ್ತಿದ್ದಾರೆ’ ಎಂದು ಅವರು ತಿಳಿಸಿದರು.
ಈ ಗೇಟು ಹಾಳಾಗಿರಲಿಲ್ಲ ಬದಲಾಗಿ ಜ್ಯಾಮ್ ಆಗಿತ್ತು. ಹಾಗಾಗಿ ನೀರು ಸೋರಿಹೋಗಿದೆ. ಈಗ ಸಂಪೂರ್ಣ ಸ್ಥಗಿತಗೊಂಡಿರುವುದಾಗಿ ರವಿಕುಮಾರ್ ಸುದ್ದಿಲೈವ್ ಗೆ ಮಾಹಿತಿ ನೀಡಿದರು.