ತುಂಗ ನದಿಯ ಒಳಹರಿವು ಹೆಚ್ಚಳ-ಕೋರ್ಪಳಯ್ಯನ ಮಂಟಪ ಮುಳುಗಡೆ

 

ಭದ್ರಜಲಾಶಯ





ಭದ್ರಜಲಾಶಯ


ನಗರದಲ್ಲಿ ಕೋರ್ಪಳಯ್ಯನ ಮಂಟಪ ಮುಳುಗಡೆ

ಸುದ್ದಿಲೈವ್/ಶಿವಮೊಗ್ಗ


ಮತ್ತೆ ಮಲೆನಾಡಿನಲ್ಲಿ ಮುಂಗಾರು ಚುರುಕುಗೊಂಡಿದೆ. ಜಿಲ್ಲೆಯ ಪ್ರಮುಖ ನದಿಗಳು ಮತ್ತೆ ಜೀವಕಳೆ ಪಡೆದಿದೆ.‌ 


ನಿನ್ನೆ  ಬೆಳಿಗ್ಗೆ ತುಂಗೆಯ ಒಳಹರಿವು 23 ಸಾವಿರ ಇದ್ದ ಕ್ಯೂಸೆಕ್ ನೀರು ಇಂದು ಮಧ್ಯಾಹ್ನದ ವೇಳೆಗೆ 73 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇಂದು ಬೆಳಿಗ್ಗೆ 32608 ಕ್ಯೂಸೆಕ್ ನೀರು ಒಳಹರಿವಿತ್ತು. ಈಗ ಒಳಹರಿವು ಅಚ್ಚರಿಯ ರೀತಿಯಲ್ಲಿ ಏರಿಕೆ ಕಂಡಿದೆ. ಪರಿಣಾಮ ಶಿವಮೊಗ್ಗ ನಗರದ ಕೋರ್ಪಳಯ್ಯನ ಮಂಟಪ ಮತ್ತೆ ಮುಳುಗಿದೆ. 


ತುಂಗ ಜಲಾಶಯದಲ್ಲಿರುವ 22 ಗೇಟನಲ್ಲಿ 21 ಗೇಟಿನಿಂದ ನದಿಗೆ ನೀರುಹರಿಸಲಾಗುತ್ತಿದೆ. 21 ಗೇಟಲ್ಲಿ  ಐದು ಗೇಟನ್ನ 3 ಮೀಟರ್ ಎತ್ತರಿಸಲಾಗಿದೆ. 10 ಗೇಟನ್ನ 2 ಮೀಟರ್ ಎತ್ತರಿಸಲಾಗಿದೆ. ಉಳಿದ 6 ಗೇಟನ್ನ ಅರ್ಧ ಮೀರ್ ಏರಿಸಿ ನೀರು ಹರಿಸಲಾಗುತ್ತಿದೆ. 


ಅದರಂತೆ ಲಿಂಗನಮಕ್ಕಿಯಲ್ಲಿ ಒಳಹರಿವು ಹೆಚ್ಚಳವಾಗಿದೆ. ಇಂದು ಬೆಳಿಗ್ಗೆ 50710 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 5301 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ನಿನ್ನೆ 1809.2 ಅಡಿ ಇದ್ದ ನೀರು ಇಂದು 1810.5 ಅಡಿ ಎತ್ತರ ನೀರು ಸಂಗ್ರಹವಾಗಿದೆ. 151.64 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 124.53 ಟಿಎಂಸಿ ನೀರು ಸಂಗ್ರಹವಾಗಿದೆ. 


ಭದ್ರಜಲಾಶಯ ನಿನ್ನೆ

ಭದ್ರಜಲಾಶಯ

181.1 ಅಡಿ ನೀರು ಸಂಗ್ರಹವಾಗಿದೆ. ಇಂದು 183.5 ನೀರು ಸಂಗ್ರಹವಾಗಿದೆ. 186 ಅಡಿ ಎತ್ತರದ ಜಲಾಶಯದಲ್ಲಿ ಇಂದು ಮಧ್ಯಾಹ್ನ 12-30 ಬ ರ ವೇಳೆಗೆ 20 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close