ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಬಾರ್ ಅಸೋಸಿಯೇಷನ್ ನ ನೂತನ ಅಧ್ಯಕ್ಷರಾಗಿ ರಾಘವೇಂದ್ರ ಅವರು ಆಯ್ಕೆಯಾಗಿದ್ದಾರೆ. ವಿಧಾನ ಸಭೆ ಹಾಗೂ ಲೋಕಸಭೆ ಚುನಾವಣೆಯನ್ನೇ ನಾಚಿಸುವಂತೆ ನಡೆದ ಚುನಾವಣೆಯಲ್ಲಿ ರಾಘವೇಂದ್ರ ಅವರಿಗೆ ಅಭೂತಪೂರ್ವ ಗೆಲವು ದೊರೆತಿದೆ.
ಅರ್ಹತ 791 ಮತಗಳಲ್ಲಿ 734 ಮತಗಳು ಚಲಾವಣೆಗೊಂಡಿವೆ. ಅಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಮತ್ತು ಜಯರಾಮ್ ನಡುವೆ ಫೈಟ್ ಬಿದ್ದಿತ್ತು. ಜಯರಾಮ್ 173 ಮಗಳನ್ನ ಪಡೆದರೆ ರಾಘವೇಂದ್ರ 561 ಮತಗಳಿಸಿ ಜಯಗಳಿಸಿದರು.
ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಿವಾಸ ಎಸ್ ಎ 428 ಮತಗಳಿಸಿ ಆಯ್ಕೆಯಾದರು. ಇವರ ವಿರುದ್ಧ ಕೆ.ಎಸ್.ದೇವರಾಜ, 204 ಮತ, ಜಿ.ಎಸ್ ಶಿವಪ್ಪ 94 ಮತಗಳಿಸಿದ್ದರು. ಖಜಾಂಚಿ ಸ್ಥಾನಕ್ಕೆ ಎಂ.ಬಿ ಮಾಲ್ತೇಶ್ ಹಾಗೂ ಉಮೇಶ್ ಕೆ.ಎಲ್ ನಡುವೆ ತೀವ್ರ ಪೈಪೋಟಿ ನಡೆದಿದೆ. ಮಾಲ್ತೇಶ್ 366 ಮತಗಳಿಸಿದರೆ 353 ಮತಗಳು ಲಭಿಸಿವೆ. ಆರು ಜನರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ-https://suddilive.in/archives/18662