ಸುದ್ದಿಲೈವ್/ಶಿಕಾರಿಪುರ
ಶಿಕಾರಿಪುರದ ಎರಡು ಪ್ರಮುಖ ಜಲಾಶಯಗಳಲ್ಲಿ ಮಳೆಯ ಹೆಚ್ಚಳಕ್ಕೆ ತುಂಬಿತುಳುಕುತ್ತಿವೆ. ಮಲೆನಾಡಿನಲ್ಲಿ ಮಳೆ ಚುರುಕುಗೊಂಡಿದೆ. ಹಳ್ಳ-ಕೊಳ್ಳ, ಕೆರೆಗಟ್ಟೆಗಳು ತುಂಬಿತುಳುಕುತ್ತಿವೆ. ನದಿಗಳಂತು ಬೋರ್ಗೆರೆಯಲು ಆರಂಭಿಸಿವೆ.
ಹಳ್ಳ-ಕೊಳ್ಳಗಳಲ್ಲಿ ಜಲಾಶಯ ಭರ್ತಿಯಾಗುತ್ತಿರುವ ಬೆನ್ನಲ್ಲೇ ಪೊಲೀಸರು ನೀರಿನಕಡೆ, ನದಿಕಡೆ ಜಲಾಶಯದ ಕಡೆ ಹೋಗದಿರುವಂತೆ ಎಚ್ಚರಿಕೆಯ ಬ್ಯಾನರ್ರು, ಬ್ಯಾರಿಕೇಡ್ ಗಳನ್ನ ಅಳವಡಿಸಿದ್ದಾರೆ. ಆದರೆ ಕೆಲವರು ಭರ್ತಿಯಾದ ಅಂಬ್ಳಿಗೋಳದ ಜಲಾಶಯಕ್ಕೆ ಮೀನು ಹಿಡಿಯಲು ಮುಂದಾಗಿದ್ದಾರೆ.
ಈ ಹುಚ್ಚಾಟ ಮೆರೆದಿರುವ ಯುವಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ-https://www.suddilive.in/2024/07/blog-post_848.html