ಇಂದಿನ ಜಲಾಶಯದ ಮಟ್ಟ

 ಸುದ್ದಿಲೈವ್/ಶಿವಮೊಗ್ಗ


ಮಲೆನಾಡಿನಲ್ಲಿ ಮಳೆಯ ಆರ್ಭಟ ಮುಂದು ವರೆದಿದೆ. ಇದರಿಂದ ಜಿಲ್ಲೆಯ ಪ್ರಮುಖ ನದಿಗಳ ಒಳಹರಿವು ಹೆಚ್ಚಾಗಿದೆ. ತುಂಗೆ ಹೊರತು ಪಡಿಸಿ ಇನ್ನೆರಡು ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.



ಕೇದ ವರ್ಷ ಭದ್ರ ನದಿಗೆ ಒಳಹರಿವು ಇಲ್ಲದೆ ಸೊರಗಿತ್ತು. ಈ ವರ್ಷ ಡೆಡ್ ಸ್ಟೋರೇಜ್ ನಿಂದ ತುಂಬಿ ಬರುತ್ತಿರುವ ನದಿಗೆ ಜೀವಕಳೆ ತುಂಬಿದೆ. 186 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಇಂದು 49555 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದ ನಿನ್ನೆಗಿಂತ 4 ಅಡಿ 11 ಇಂಚು ನೀರು ಹೆಚ್ಚಾಗಿದೆ.


ನಿನ್ನೆ 153 ಅಡಿ ಇದ್ದ ಜಲಶಯದ ಮಟ್ಟ 157.11 ಅಡಿಗೆ ಇಂದು ಏರಿಕೆಯಾಗಿದೆ. ಕಳೆದ ವರ್ಷ 145 ಅಡಿ ಆಜುಬಾಜಿನಲ್ಲಿ ನೀರು ಸಂಗ್ರಹವಾಗಿತ್ತು. ಅದರಂತೆ ತುಂಗೆಯ ಒಳ ಹರಿವು ಕಡಿಮೆಯಾಗಿದೆ. 


ನಿನ್ನೆ 71 ಸಾವಿರ ಕ್ಯೂಸೆಕ್ ನಷ್ಟು ಒಳಹರುವಿತ್ತು. ಇವತ್ತು 64764 ಕ್ಯೂಸೆಕ್ ನೀರು ಹರಿದು ಬಂದಿದೆ. 62700 ಕಗಯೂಸೆಕ್ ನೀರನ್ನ ನದಿಗೂ ಉಳಿದ 1500 ಕ್ಯೂಸೆಕ್ ನೀರನ್ನ ತುಂಗ ಮೇಲ್ದಂಡೆಗೂ ಹರಿಸಲಾಗುತ್ತಿದೆ. 


ಇಂದು ಲಿಂಗನಮಕ್ಕಿಯ ಒಳಹರಿವು 87496 ಕ್ಯೂಸೆಕ್ ನಷ್ಟಿದೆ. 1819 ಸಾಮಾರ್ಥ್ಯದ ಜಲಾಶಯದಲ್ಲಿ ಈಗ 1791.50 ಅಡಿ ನೀರು ಸಂಗ್ರಹವಾಗಿದೆ. ನಿನ್ನೆಗಿಂತ 3.70 ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ 1758.96 ಅಡಿ ನೀರು ಸಂಗ್ರಹವಾಗಿತ್ತು. 

ಇದನ್ನೂ ಓದಿ-https://www.suddilive.in/2024/07/blog-post_385.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು