ಭಗತ್ ಸಿಂಗ್ ಕನ್ನಡ ಯುವಕರ ಸಂಘಟನೆ ಸುದ್ದಿಗೋಷ್ಠಿ |
ಸುದ್ದಿಲೈವ್/ಶಿವಮೊಗ್ಗ
ಸೂಡ ಕಚೇರಿಯಲ್ಲಿ ಪಾರ್ಕಿಂಗ್ ಶೆಡ್ ತೆರವುಗೊಳಿಸಬಾರದು ಹಾಗೂ ಸಬ್ ರಿಜಿಸ್ಟಾರ್ ಕಚೇರಿಯನ್ನ ಎಪಿಎಂಸಿಗೆ ಸ್ಥಳಾಂತರಿಸಬಾರದು ಎಂದು ಭಗತ್ ಸಿಂಗ್ ಕನ್ನಡ ಯುವಕರ ಸಂಘ ಆಗ್ರಹಿಸಿದೆ.
ಈ ಕುರಿತು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ರಾಜಶೇಖರ್, ಸೋಮಿನಕೊಪ್ಪ ರಸ್ತೆ ಹಾಗೂ ಆಲ್ಕೊಳಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸಬ್ ರಿಜಿಸ್ಟ್ರಾರ್ ಶೆಡ್ ನ್ನ ತೆರವುಗೊಳಿಸಬಾರದು. ಒಂದು ವೇಳೆ ಶೆಡ್ ತೆರೆದು ವಾಹನ ಸಂಚಾರಕ್ಕೆ ವೀಲಿಂಗ್, ಗಾಂಜಾ ಸೇವನೆ ಮತ್ತು ಮದ್ಯ ಸೇವನೆ ಮಾಡಿದ ಯುವಕರು ಹಾವಳಿ ಹೆಚ್ಚಾಗಲಿದೆ. ಹಾಗಾಗಿ ಶೆಡ್ ತೆರವುಗೊಳಿಸಬಾರದು ಎಂದು ದೂರಿದರು.
ವಿನೋಬ ನಗರದ ಸಬ್ ರಿಜಿಸ್ಟಾರ್ ಕಚೇರಿಯನ್ನ ಸ್ಥಳಾಂತರಗೊಳಿಸಬಾರದು. ಹಲವಾರು ವರ್ಷಗಳಿಂದ ಇದೆ. ಹಲವಾರು ಅಂಗಡಿಗಳು, ಪತ್ರ ಬರಹಗಾರರು ಇದನ್ನ ನಂಬಿಕೊಂಡು ಇದ್ದಾರೆ. ಅಲ್ಲದೆ ಎಪಿಎಂಸಿ ಯಾರ್ಡ್ಗೆ ಸಬ್ ರಿಜಿಸ್ಟಾರ್ ಕಚೇರಿಯನ್ನ ಸ್ಥಳಾಂತರಿಸುವ ಬಗ್ಗೆ ಶಾಸಕ ಚೆನ್ನಬಸಪ್ಪ ಅವರು ಮತ್ತು ಕಂದಾಯ ಇಲಾಖೆ ಸಚಿವರು ವಿಧಾನ ಸಭೆಯಲ್ಲಿ ಮಾತನಾಡಿದ್ದಾರೆ. ಹಾಗಾಗಿ ಸ್ಞತಳಾಂತರ ಬೇಡ ಎಂದರು.
ಸ್ಥಳಾಂತರ ಮಾಡುವ ಬಗ್ಗೆ ಭಗತ್ ಸಿಂಗ್ ಸಂಘಟನೆ ಆಕ್ಷೇಪಿಸಿದೆ. ಮೂಲಭೂತ ಸೌಕರ್ಯವನ್ನ ಒದಗಿಸಿ ವಿನೋಬ ನಗರದ ಸಬ್ ರಿಜಿಸ್ಟಾರ್ ಕಚೇರಿಯಲ್ಲೇ ನಡೆಯಬೇಕು ಎಂದು ಒತ್ತಾಯಿಸಿದೆ. ಎಪಿಎಂಸಿ ಕಚೇರಿಗೆ ಬರುವ ಸಾರ್ವಜನಿಕರಿಗೆ ಬಸ್ ಸೌಕರ್ಯಗಳಿಲ್ಲ. ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡರೆ ಆಕ್ಷೇಪಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಆರ್ ಕೆ ದೇವದಾಸ್, ಸುಧಾಕರ್, ಮಣಿ, ರಾಜಣ್ಣ, ಶಿವಕುಮಾರ್, ಪ್ರಕಾಶ್, ಆರ್ಮುಗಂ, ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ-https://www.suddilive.in/2024/07/blog-post_966.html