ಸುದ್ದಿಲೈವ್/ಶಿವಮೊಗ್ಗ
ಹೊಸನಗರ ತಾಲೂಕಿನ ನಗರ ಹೋಬಳಿಯ ಬಿದನೂರು ಕೋಟೆ ಕೆರೆ ಎದುರಿಗೆ ಇರುವ ಕೆಳದಿ ಚೆನ್ನಮ್ಮಾಜಿಯ ಗದ್ದಿಗೆಯ ವಿಚಾರ ಮತ್ತೆ ಚರ್ಚೆಗೆ ಬಂದಿದೆ,
ಡಿಜಿಟಲ್ ಮಾಧ್ಯಮದ ಯುಟ್ಯೂಬ್ ಚಾನೆಲ್ ವೊಂದು ಸ್ಥಳೀಯರನ್ನು ಹಾಗೂ ಸ್ಥಳೀಯ ಇತಿಹಾಸಕಾರರನ್ನು ಅಯೋಗ್ಯರು ಎಂದು ನಿಂದಿಸಿ ವರದಿಯಾಗಿರುವ ಬಗ್ಗೆ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ,
ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ವೊಂದು ವಿಡಿಯೋ ಚಿತ್ರೀಕರಣ ಮಾಡಿ ಸ್ಥಳೀಯ ಕಾದಂಬರಿಕಾರ ಅಂಬ್ರಯ್ಯ ಮಠ ಇವರೊಡನೆ ಚರ್ಚಿಸಿ ಇಂದು ಆ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿ ದೇವಸ್ಥಾನದ ಜಾಗವನ್ನ ಸ್ಥಳೀಯರು ಹಾಗೂ ಸ್ಥಳೀಯ ಇತಿಹಾಸಕಾರರು ಗದ್ದಿಗೆ ಎಂದಿದ್ದಾರೆ, ಇವರೆಲ್ಲರೂ ಅಯೋಗ್ಯರು ಎಂಬ ಶೀರ್ಷಿಕೆಯ ಅಡಿ ಸುದ್ದಿ ಮಾಡಿರುವುದು ಸ್ಥಳಿಯರ ಆಕ್ರೋಶಕ್ಕೆ ಗುರಿಯಾಗಿದೆ.
ಡಿಜಿಟಲ್ ಮಾಧ್ಯಮಗಳ ವರದಿಯಿಂದ ಸ್ಥಳೀಯರು ಹಾಗೂ ಸ್ಥಳೀಯ ಇತಿಹಾಸಕಾರರು ನೊಂದಿದ್ದಾರೆ. ಈ ಕೂಡಲೇ ಡಿಜಿಟಲ್ ಮಾಧ್ಯಮದವರು ಕ್ಷಮೆ ಕೇಳಬೇಕು ಇಲ್ಲದಿದ್ದಲ್ಲಿ ಚರ್ಚೆಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಇಲ್ಲವಾದಲ್ಲಿ ಕಾನೂನು ಹೋರಾಟವನ್ನು ಆರಂಭಿಸುವುದಾಗಿ ಎಚ್ಚರಿಸಲಾಗಿದೆ.
ಹಲವು ವರ್ಷಗಳಿಂದ ಚರ್ಚೆಯಲ್ಲಿದ್ದ ಕೊಪ್ಪಲು ಮಠ ಹಾಗೂ ದೇವಪ್ಪನ ಮಠದ ಕೆಳದಿ ಅರಸರ ಗದ್ದಿಗೆ ಹುಡುಕಾಟಕ್ಕೆ ಜಿಲ್ಲೆಯ ಇತಿಹಾಸಕಾರರಾದ ಅಜಯ್ ಶರ್ಮ ಹಾಗೂ ಇತರರು ಹಲವಾರು ದಾಖಲಾತಿಗಳನ್ನು ಹುಡುಕಿ ತೆಗೆದಿದ್ದಾರೆ. ಸ್ಥಳೀಯರಾದ ಇತಿಹಾಸಕಾರ ಸುಧೀಂದ್ರ ಬಂಡಾರ್ಕರ್ ಅವರು ಸಹ ಈ ವಿಚಾರದಲ್ಲಿ ಹಲವಾರು ಸಂಶೋಧನೆಗಳನ್ನು ನಡೆಸಿದ್ದಾರೆ.
ಒಟ್ಟಾರೆ ಈ ಎಲ್ಲಾ ಸಂಶೋಧನೆಗಳ ಫಲವಾಗಿ ಕೋಟೆ ಕೆರೆ ಕೆಳಗೆ ಇರುವ ನಂದಿಯನ್ನೇ ಕೆಳದಿ ಚೆನ್ನಮ್ಮರ ಗದ್ದುಗೆ ಎಂದು ಹಲವು ಆಧಾರಗಳ ಮೂಲಕ ಪ್ರಸ್ತುತಪಡಿಸಿದ್ದಾರೆ ಹಾಗೂ ಕೆಲವಾರು ವರ್ಷಗಳಿಂದ ಅಲ್ಲಿ ಚೆನ್ನಮ್ಮನ ಜಯಂತಿಯು ಸ್ಥಳೀಯರು ಹಾಗೂ ಶಿವಮೊಗ್ಗ ಜಿಲ್ಲೆಯ ಇತಿಹಾಸಕ್ತರು ಹಾಗೂ ಮಾಧ್ಯಮಗಳ ಸಮ್ಮುಖದಲ್ಲಿ ನಡೆದು ಬರುತ್ತಿದೆ.
ಈಗ ಯೂಟ್ಯೂಬ್ ಚಾನಲ್ ವೊಂದು ಪ್ರಚಾರದ ಹುಚ್ಚಿಗೆ ಬಿದ್ದು ಸ್ಥಳೀಯರನ್ನು ಸ್ಥಳೀಯ ಇತಿಹಾಸಕಾರರನ್ನು ಅಯೋಗ್ಯರು ಎಂದು ಹೇಳಿರುವುದು ಸ್ಥಳೀಯರನ್ನ ಕೆರಳಿಸಿದೆ ಹಾಗೂ ಇದಕ್ಕೆ ಕುಮ್ಮಕ್ಕು ನೀಡಿದವರನ್ನು ಕಾನೂನು ಹೋರಾಟಕ್ಕೆ ಎಳೆಯಲಾಗುವುದು ಎಂದು ಅಜಯ್ ಶರ್ಮ ತಿಳಿಸಿದ್ದಾರೆ.ಅಲ್ಲದೆ ಈ ವಿಚಾರವಾಗಿ ಯಾರೇ ಚರ್ಚೆಗೆ ಬಂದರೂ ವೇದಿಕೆಯಲ್ಲಿ ಚರ್ಚೆಗೆ ಸಿದ್ದ ಎಂದು ಸವಾಲು ಹಾಕಿದ್ದಾರೆ.
ಸಭೆಯಲ್ಲಿ ಮಲೆನಾಡಿನ ಇತಿಹಾಸ ಆಸಕ್ತರು ಹಾಗೂ ಸಂಶೋಧಕರಾದಂತ ಪ್ರದೀಪ್ ಹೂದಲ ,ಕಲ್ಯಾಣ್ ಕುಮಾರ್ ಬಾಂಡ್ಯ, ಆದರ್ಶ ಹುಂಚದ ಕಟ್ಟೆ ,ನಿತಿನ್ ಹೇರಳೆ, ಹಾಗೂ ಸುಧೀಂದ್ರ ಭಂಡಾರ್ಕರ್ ಇತರರು ಇದ್ದರು ಹಾಗೂ ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೆಳದಿಯ ಅರಸು ಮನೆತನಕ್ಕೆ ಸಂಬಂಧಪಟ್ಟ ಪ್ರಸ್ತುತ ಬೆಳಗಾವಿಯಲ್ಲಿ ವಾಸವಿರುವ ಚಂದ್ರಕಾಂತ್ ಸಂಗ ನಾಯಕರು ಚಂಪಕಸರಸಿ ವಿಚಾರದಲ್ಲೂ ಹಲವಾರು ಕಥೆಗಳನ್ನು ಕಟ್ಟಿ ಇದೆ ಡಿಜಿಟಲ್ ಮಾಧ್ಯಮದವರು ಎನಿಸಿಕೊಂಡವರು ಹೇಳಿದ್ದರು ಎಂದು ನೆನಪಿಸಿದರು.
ಅವರು ಈ ರೀತಿಯಾಗಿ ಕೆಳದಿ ಇತಿಹಾಸಕ್ಕೆ ಅಪಚಾರ ಎಸಗುವುದನ್ನು ಕಟುವಾಗಿ ವಿರೋಧಿಸಿದರು. ಸದ್ಯಕ್ಕೆ ಇವರೆಲ್ಲರೂ ಎಸೆದಿರುವ ಸವಾಲನ್ನು ಡಿಜಿಟಲ್ ಮಾಧ್ಯಮ ಸ್ವೀಕರಿಸುತ್ತದೆಯೋ ಅಥವಾ ಕ್ಷಮೆ ಕೇಳುತ್ತದೆಯೋ ಎಂದು ಕಾದು ನೋಡಬೇಕು.
ಇದನ್ನೂ ಓದಿ-https://suddilive.in/archives/18334