ಸ್ಲೂಯಿಸ್ ಗೇಟ್ ವೀಕ್ಷಿಸಿದ ಮಾಜಿ ಸಚಿವ ರೇಣುಕಾಚಾರ್ಯ-ಸರ್ಕಾರದ ದಿವಾಳಿ ತನಕ್ಕೆ ಕಿಡಿ

ಸುದ್ದಿಲೈವ್/ಶಿವಮೊಗ್ಗ

ಭದ್ರ ಜಲಾಶಯದ ಸ್ಲೂಯಿಸ್ ಗೇಟ್ ನಿಂದ ನೀರು ಹರಿದು ಹೋಗಿರುವುದನ್ನ ಖಂಡಿಸಿ ಇಂದು‌ ಹೊನ್ನಾಳಿ ಬಿಜೆಪಿಯ ಮಾಜಿ ಸಚಿವ ರೇಣುಕಾಚಾರ್ಯರರ ನೇತೃತ್ವದಲ್ಲಿ ಜಲಾಶಯಕ್ಕೆ ಮುತ್ತಿಗೆ ಹಾಕಲಾಯಿತು.

ಕದ್ದು ಮುಚ್ಚಿ ನೀರು ಬಿಡುತ್ತಿರುವ ರಾಜ್ಯ ಸರ್ಕಾರಕ್ಕೆ ದಿಕ್ಕಾರ, ಅಯ್ಯೋಯ್ಯೋ ಅನ್ಯಾಯ, ರೈತರ ಪಾಲಿಗೆ ಅನ್ಯಾಯವೆಸಗುತ್ತಿರುವ ರಾಜ್ಯ ಸರ್ಕಾರಕ್ಕೆ, ದಿವಾಳಿ ಸರ್ಕಾರ, ಪಾಪರ್ ಸರ್ಕಾರಕ್ಕೆ ದಿಕ್ಕಾರ ಎಂದು ಘೋಷಣೆಯೊಂದಿಗೆ ರೇಣಿಕಾಚಾರ್ಯರ ರೈತರ ತಂಡ ಘೋಷಣೆಕೂಗಿದೆ. ಬಿಅರ್ ಪಿ ಹೌಸ್ ಗೆಸ್ಟ್ ಹೌಸ್ ನಿಂದ ಜಲಾಶಯದ ವರೆಗೆ ಪಾದಯಾತ್ರೆ ನಡೆಸಿ ಸ್ಲೂಯಿಸ್ ಗೇಟ್ ವೀಕ್ಷಿಸಿದರು.

ಈ ಕುರಿತು ಮಾಧ್ಯಮಗಳಿಗೆ ಮಾತನಾಡಿದ ನಾಜಿ ಸಚಿವರು ತಾತ್ಕಾಲಿಕಚಾಗಿ ಇಂಜಿನಿಯರ್ ಅವರು ರಿವರ್ ಸ್ಲೂಯಿಸ್ ಗೇಟ್ ನ್ನ ತಾತ್ಕಾಲಿಕವಾಗಿ ಸಿದ್ದಪಡಿಸಿದ್ದಾರೆ. ಬೇಸಿಗೆಯಲ್ಲೇ ಇಲ್ಲಿ ಎಸ್ ಇ ಭದ್ರ ಜಲಾಶಯಕ್ಕೆ 20 ಲಕ್ಷದ ತುರ್ತು ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಿದರೆ ರಾಜ್ಯ ಸರ್ಕಾರ ಲೋಕಸಭಾ ಚುನಾವಣೆಯ ಕಾರಣ ಹೇಳಿ ಬೇಸಿಗೆಯಲ್ಲಿ ಕೆಲಸ ಮಾಡಲಿಲ್ಲ.

ಆದರೆ ಚುಬಾವಣೆ ಇದ್ದರೂ ತುರ್ತು ಕಾಮಗಾರಿ ಎಙದು ಪರಿಗಣಿಸಿ ಸ್ಲೂಯಿಸ್ ಗೇಟ್ ನ್ನ ಖಾಯಂ ಆಗಿ ಕೆಲಸ ಮುಗಿಸಬಹುದಿತ್ತು. ಆದರೆ ರಾಜ್ಯ ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸದೆ ನಿರ್ಲಕ್ಷಿಸಿದೆ. ತಾತ್ಕಾಲಿಕವಾಗಿ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರದ ನಿರ್ಲಕ್ಷ ತನದಿಂದ ಕಾಮಗಾರಿ ನಡೆದಿಲ್ಲ ಎಂದು ದೂರಿದರು.

ಕುಡಿಯುವ ನೀರಿಗೆ ಬಿಡಲಾಗಿದೆ ಎಂದು ಸ್ಲೂಯಿಸ್ ಗೇಟ್ ಮೂಲಕ ನೀರು ಹರಿಸಲಾಗುತ್ತಿದೆ. 4000 ಕ್ಯೂಸೆಕ್ ನೀರು ಹರಿದು ಹೋಗಿದೆ. ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ಬರಗಾಲ ವಿರುತ್ತದೆ. ಆದರೆ ಅದೃಷ್ಠವಶಾತ್ ಮಳೆಯಾಗಿತ್ತು. 140 ಅಡಿ ನೀರು ನಿಲ್ಲಬೇಕಿದ್ದ ಜಲಾಶಯದಲ್ಲಿ 132 ಅಡಿ ನೀರು ಸಂಗ್ರಹವಾಗಿದೆ ಎಂದು ಆರೋಪಿಸಿದರು.

ಒಂದು ವೇಳೆ ಸರ್ಕಾರ ಖಾಯಂ ಕಾಮಗಾರಿ ಬಡೆಸಲು ಹಣವಿಲ್ಲವೆಂದರೆ ಹೇಳಲಿ ರೈತರೇ ಕಾಮಗಾರಿಗೆ ಹಣ ಸಂಗ್ರಹಿಸಿಕೊಡುತ್ತಾರೆ. ಗ್ಯಾರೆಂಟಿಯಲ್ಲೇ ಮುಳುಗಿರುವ ಕಾಂಗ್ರೆಸ್ ಗೆ ರೈತರ ಸಮಸ್ಯೆ ಅರ್ಥವಾಗುತ್ತಿಲ್ಲ. ಇಂದು ಸಾಂಕೇತಿಕವಾಗಿ ಪ್ರತಿಭಟಿಸಿದ್ದೇವೆ. ಮುಂದಿನ ದಿನಗಳಲ್ಲಿ ಸಾವಿರಾರು ರೈತರೊಂದಿಗೆ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಲೋಕಿಕೆರೆ ನಾಗರಾಜ್, ಮಾಡಾಳ್ ಮಲ್ಲಿಕಾರ್ಜುನ್, ಚಂದ್ರಶೇಖರ್ ಪೂಜಾರ್ ಮೊದಲಾದ ರೈತರು ಪ್ರತಿಭಟಿಸಿದರು.

ಇದನ್ನೂ ಓದಿ-https://suddilive.in/archives/18750

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close