ವಾಸದ ಮನೆಯಲ್ಲಿ ಕಳುವು ಮಾಡಿದ್ದ ಆರೋಪಿಗಳು ಅಂದರ್

ಸುದ್ದಿಲೈವ್/ಶಿವಮೊಗ್ಗ

ಬಾಪೂಜಿನಗರದ ಮಹಿಳೆಯೊಬ್ಬರ ವಾಸದ ಮನೆಯ ಬಾಗಿಲು ಮುರಿದು ಸುಮಾರು 234 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಘಟನೆಯನ್ನ ಕೋಟೆ ಪೊಲೀಸರು ಬೇಧಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಕೋಟೆ ಪೊಲೀಸರು ಪ್ರಕರಣದ ಮತ್ತು ಆರೋಪಿತರ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ. ಕೆ, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ, ಎ ಜಿ ಕಾರ್ಯಪ್ಪ  ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಬಾಬು ಆಂಜನಪ್ಪ ಮೇಲ್ವಿಚಾರಣೆಯಲ್ಲಿ ಕೋಟೆ ಪಿಐ  ಗುರುಬಸವರಾಜ್,ಹೆಚ್ ನೇತೃತ್ವದ,

ಪಿ.ಎಸ್.ಐ  ಕುಮಾರ್, ಶ್ರೀ ಸಿ.ಆರ್.ಕೊಪ್ಪದ್, ಎಎಸ್ಐ ಶ್ರೀಹರ್ಷ, ಹಾಗೂ ಸಿಬ್ಬಂಧಿಗಳಾದ ಹೆಚ್.ಸಿ. ಅಣ್ಣಪ್ಪ, ನಾಗರಾಜ, ಸಿಪಿಸಿ ರವರಾದ ಗೊರವರ ಅಂಜಿನಪ್ಪ, ಕಿಶೋರ, ಪ್ರಕಾಶ್, ರಂಗನಾಥ್ ರವರನ್ನು ಒಳಗೊಂಡ ತನಿಖಾ ತಂಡವನ್ನ ರಚಿಸಲಾಗಿತ್ತು.

ತನಿಖಾ ತಂಡವು ನಿನ್ನೆ ಪ್ರಕರಣದ ಆರೋಪಿತರಾದ 1) ಮೊಹಮ್ಮದ್ ರಫೀಕ್ @ ಕಾಣ 24 ವರ್ಷ  ಚಿಕ್ಕಲ್, ಶಿವಮೊಗ್ಗ 2) ಅತಾವುಲ್ಲಾ, 29 ವರ್ಷ, ಬಾಪೂಜಿನಗರ. ಶಿವಮೊಗ್ಗ, 3) ರೂಮನ್ ಕುರೇಶಿ, 20 ವರ್ಷ ಬಾಪೂಜಿನಗರ, ಶಿವಮೊಗ್ಗ ಇವರನ್ನು ದಸ್ತಗಿರಿ ಮಾಡಲಾಯಿತು.

ಆರೋಪಿತರಿಂದ ಪ್ರಕರಣಕ್ಕೆ ಸಂಬಂಧಿಸಿದ ಅಂದಾಜು ಮಾಲ್ಯ 15,40,500/- ರೂಗಳ 237 ಗ್ರಾಂ ಬಂಗಾರದ ಒಡವೆಗಳು ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ 50,000/- ರೂ ಮೌಲ್ಯದ ಬೈಕ್ ಸೇರಿ ಒಟ್ಟು 15,90,500/- ರೂ ಗಳ ಮಾಲನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ.

ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೋಲಿಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ಇದನ್ಬೂ ಓದಿ-https://suddilive.in/archives/18348

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close