ಸುದ್ದಿಲೈವ್ /ಸಾಗರ
ಸಾಗರದಲ್ಲಿ ಮಳೆಗಳ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಸಚಿವರು ಕನ್ನಿಹೊಳೆ ಮಂಡಗಳಲೆ, ಸಾಗರದ ಕತ್ತಲೆ ಬಬಾರ್ ನ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದರು.
ಮಳೆಯ ಆರ್ಭಟಕ್ಕೆ ಸಾಗರ ತಾಲೂಕಿನ ಸೈದೂರಿನ ಕನ್ನಿಹೊಳೆಯು ರಸ್ತೆ ಮೇಲೆ ನೀರು ಹರಿಯುತ್ತಿದೆ. ಮಂಡಗಳಲೆಯಲ್ಲಿ ಮನೆ ಕುಸಿತದಿಂದ ನಿರಾಶ್ರಿತರಾದ ಎರಡು ಕುಟುಂಬಗಳನ್ನ ಸರ್ಕಾರಿ ಶಾಲೆಗಳಲ್ಲಿ ಕಾಳಜಿ ಕೇಂದ್ರ ಆರಂಭಿಸಲಾಗಿದೆ. ಇವರನ್ನ ಸಚಿವರು ಭೇಟಿ ಮಾಡಿ ಮಾಹಿತಿ ಪಡೆದರು.
ಸಾಗರದ ಕತ್ತಲೆ ಬಜಾರ್ ನಲ್ಲಿ ಪ್ರೇಮ ಎಂಬುವರ ಮನೆ ಕುಸಿದು ಬಿದ್ದಿದೆ. ಇವರಿಗೆ ಎನ್ ಡಿಆರ್ ಎಫ್ ನಿಂದ 1.20 ಲಕ್ಷ ರೂ. ಪುರಸಭೆಯಿಂದ 20 ಸಾವಿರ ಮತ್ತು 5 ಸಾವಿರ ರೂ.ಗಳನ್ನ ಪರಿಹಾರವಾಗಿ ನೀಡಲಾಗಿದೆ.
ಸಾಗರದಲ್ಲಿ ಅಧಿಕೃತ ಮತ್ತು ಅನಧಿಕೃತ ಮನೆಗಳಲ್ಲಿ 39 ಮನೆಗಳು ಮಳೆಯಿಂದಾಗಿ ಗೋಡೆ ಕುಸಿತವಾಗಿದೆ, ಇದರಲ್ಲಿ ಸಾಗರದಲ್ಲಿ ಮನೆ ಹಾನಿಗೊಳಗಾದ 10 ಮನೆಗಳು ಸಂಪೂರ್ಣ ಮಳೆಗೆ ಹಾನಿಯಾಗಿದ್ದು ಇವುಗಳು ಅಧಿಕೃತ ದಾಖಲೆಇರುವ ಮನೆಗಳಾಗಿವೆ.
ಸಚಿವರ ಭೇಟಿ ವೇಳೆ ಕುಟುಂಬ ಅಳಲು ತೋಡಿಕೊಂಡಿದೆ. ಹೆಚ್ಚಿನ ಸಹಾಯಕ್ಕಾಗಿ ಕೇಳಿಕೊಂಡಿದೆ. ಸಚಿವರು 25 ಸಾವಿರ ರೂ. ಸಹಾಯಮಾಡುವುದಾಗಿ ಹೇಳಿದ್ದಾರೆ.