ಸುದ್ದಿಲೈವ್/ಶಿವಮೊಗ್ಗ
ಬಾಲರಾಜ ಅರಸ್ ನ ಬೋವಿ ಸಮಾಜದ ಎದುರಿನ ಗಾಂಧಿ ಪಾರ್ಕ್ ನಲ್ಲುದ್ದ ಮರ ಧರೆಗುರುಳಿದೆ. ಧರೆಗುರುಳಿದ ಮರ ಸಣ್ಣಪುಟ್ಟ ಹಾನಿ ಉಂಟು ಮಾಡಿದೆ.
ಗಾಂಧಿ ಪಾರ್ಕ್ ಗೆ ಹೊಂದಿಕೊಂಡಿದ್ದ ಶೌಚಾಲಯದ ಹಿಂಭಾಗದಲ್ಲಿರುವ ಹಳೆಯ ಮರವೊಂದು ಉರುಳಿ ಬಿದ್ದಿದೆ. ಮರ ಬಿದ್ದ ಹೊಡೆತಕ್ಕೆ ವಿದ್ಯುತ್ ಕಂಬದ ತಂತಿಗಳು ಹಾಳಾದರೆ, ಮೂರು ಬೈಕ್ ಕೆಳಗೆ ಸಿಲುಕಿಕೊಂಡಿರುವ ಮಾಹಿತಿ ತಿಳಿದುಬಂದಿದೆ.
ಬೈಕ್ ಸವಾರರಿಬ್ಬರಿಗೆ ಗಾಯಗಳಾಗಿದ್ದು ಅವರ ಆಸ್ಪತ್ರೆಗೆ ಸಾಗಿಸಾಗಿದೆ. ಶೌಚಾಲಯದ ಹಿಂಭಾಗದ ಮರವೊಂದು ಬುಡಸಮೇತ ಬುಡಮೇಲಾಗಿದ್ದು ಬಾಲರಾಜ್ ಅರಸ್ ರಸ್ತೆ ಜ್ಯಾಮ್ ಆಗಿದೆ.
ಹಳೆ ಮರ ಈ ಬಾರಿಯ ಮಳೆಗೆ ಶಿಥಿಲಗೊಂಡು ಬಿದ್ದಿರುವ ಶಂಕೆ ಇದೆ. ಮರ ಬಿದ್ದ ಕಾರಣ ಮೂರು ಬೈಕ್ ಸವಾರರು ಸಿಲುಕಿಕೊಂಡಿರುವುದಾಗಿ ತಿಳಿದು ಬಂದಿದೆ. ಮಳೆ ಅಷ್ಟೊಂದು ಇಲ್ಲವಾದರೂ ಈ ಘಟನೆ ನಡೆದಿದೆ. ಸ್ಥಳೀಯರೇ ಅವರನ್ನ ಸಂರಕ್ಷಿಸಿದ್ದಾರೆ. ಪ್ರಾಥಮಿಕ ಮಾಹಿತಿ ಇವಿಷ್ಟಿದೆ.
ಇದನ್ನೂ ಓದಿ-https://www.suddilive.in/2024/07/blog-post_594.html