ತುಂಗಭದ್ರ ನದಿಯ ಸ್ವಚ್ಚತೆ ಕುರಿತು ಹೊನ್ಬಾಳಿ ಶ್ರೀಗಳನ್ನ ಭೇಟಿಯಾದ ಡಾ.ಸರ್ಜಿ



ಸುದ್ದಿಲೈವ್/ಶಿವಮೊಗ್ಗ


ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ ಕೊಪ್ಪಳ ಜಿಲ್ಲೆಯ ಕಿಷ್ಕಿಂದೆಯವರೆಗೂ ತುಂಗಾ ಭದ್ರಾ ನದಿಗಳ ನದಿಗಳ ಶುದ್ಧತೆ ಹಾಗೂ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹೊನ್ನಾಳಿಯ ಹಿರೇಕಲ್ಮಠದ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳನ್ನು ಬುಧವಾರ ನಿರ್ಮಲಾ ತುಂಗಾ-ಭದ್ರಾ ಅಭಿಯಾನದ ತಂಡದೊಂದಿಗೆ ಭೇಟಿಯಾಗಿ ಪೂಜ್ಯರಿಗೆ ಮನವಿ ಸಲ್ಲಿಸಿ, ಇದೇ ವೇಳೆ ಪೂಜ್ಯರಿಂದ ಆಶೀರ್ವಾದ ಪಡೆಯಲಾಯಿತು. 


ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ಹಾಗೂ ಬಯಲು ಸೀಮೆಯ ಐದು ಜಿಲ್ಲೆಗಳ ಜೀವನದಿಯಾಗಿರುವ ತುಂಗಾ-ಭದ್ರಾ ನದಿಗಳು ಅತ್ಯಂತ ಕಲುಷಿತವಾಗುತ್ತಿವೆ, ಕುಡಿಯಲು ಯೋಗ್ಯವಲ್ಲದ ದುಸ್ಥಿತಿಗೆ ತಲುಪಿದೆ, ಆದ್ದರಿಂದ ನದಿಯನ್ನು ಪಾವಿತ್ರ್ಯತೆಯನ್ನು ಕಾಪಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪರಿಸರ ತಂಡಗಳು ಹಾಗೂ ನಿರ್ಮಲ ತುಂಗಾ-ಭದ್ರಾ ಅಭಿಯಾನವು ಹಮ್ಮಿಕೊಂಡ ಜಾಗೃತಿ ಕುರಿತು ಮಹಾಸ್ವಾಮಿಗಳಿಗೆ ವಿಷಯ ತಿಳಿಸಲಾಯಿತು. 


ಈ ವೇಳೆ ಶಾಸಕ ಡಾ.ಧನಂಜಯ ಸರ್ಜಿ ಹಾಗೂ ನಿರ್ಮಲ ತುಂಗ ಭದ್ರಾ ಅಭಿಯಾನ ತಂಡದ ಪ್ರಮುಖರಾದ ಪ್ರೊ.ಬಿ.ಎಂ.ಕುಮಾರಸ್ವಾಮಿ, ಪ್ರೊ. ಎಲ್. ಕೆ. ಶ್ರೀಪತಿ, ಬಾಲಕೃಷ್ಣ ನಾಯ್ಡು, ಮಾಜಿ ನಗರಸಭಾ ಸದಸ್ಯರಾದ .ಶಂಕರ್, ಹಾಲೇಶಪ್ಪ ಅವರುಗಳು ಹಾಜರಿದ್ದರು.


ಇದನ್ನೂ ಓದಿ-https://www.suddilive.in/2024/07/blog-post_126.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು