ಸುದ್ದಿಲೈವ್/ಶಿವಮೊಗ್ಗ
ಕೋಟೆ ರಸ್ತೆಯ ಕೋರ್ಪಲಯ್ಯನ ಛತ್ರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಡೆಂಗ್ಯೂ ಭೀತಿ ಹಾಗೂ ಅನೈತಿಕ ಚಟುವಟಿಕೆಯ ವಿರುದ್ಧ ಮಲ್ನಾಡ ಕೇಸರಿ ಪಡೆ ಸ್ಥಳಕ್ಕೆ ಅಧಿಕಾರಿಗಳನ್ನ ಕರೆಯಿಸಿ ಸೂಕ್ತ ರಕ್ಷಣೆಗೆ ಆಗ್ರಹಿಸಿದೆ.
ಶಾಲೆಯಲ್ಲಿ ಸುತ್ತಲೂ ಬೆಳೆದಿರುವ ಗಿಡ ಗಂಟೆಗಳು ಬೆಳೆದು ಸೊಳ್ಳೆಗಳಿಗೆ ಅನುಕೂಲವಾಗುವಂತೆ ಮಾಡಿದೆ. ಇದರಿಂದ ಮಕ್ಕಳಲ್ಲಿ ಡೆಂಗ್ಯೂ ಹರಡುವ ಬಗ್ಗೆ ಕೇಸರಿ ಪಡೆ ಆತಂಕ ವ್ಯಕ್ತಪಡಿಸಿದೆ.
ಮತ್ತು ಹಳೆಯ ಕಟ್ಟಡಗಳ ಬೀಗ ಒಡೆದು ಅನೈತಿಕ ಚಟುವಟಿಕೆ ಮಾಡುತ್ತಿರುವುದರ ಅಭಿವೃದ್ಧಿ ಮಲ್ನಾಡ್ ಕೇಸರಿ ಪಡೆ ಇಂದ ಸಂಬಂಧಪಟ್ಟ ಪೊಲೀಸ್ ಇಲಾಖೆ ಮಹಾನಗರ ಪಾಲಿಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಗಮನ ಸೆಳೆಯಲಾಯಿತು.
ನಾಳೆಯಿಂದಲೇ ಸ್ವಚ್ಛತೆಯ ಆದ್ಯತೆ ಕೊಡುತ್ತೇವೆ ಎಂಬ ಭರವಸೆ ನೀಡಿದರು ಶಿಕ್ಷಣ ಇಲಾಖೆಯವರು ಈಗಾಗಲೇ ಖಾಲಿ ಇರುವ ಕಟ್ಟಡದ ಬೀಗಗಳನ್ನು ಹಾಕಿ ಬಂದೋಬಸ್ತ್ ಮಾಡುತ್ತೇವೆ ಮತ್ತು ಸಂಬಂಧ ಕೊಟ್ಟ ಪೊಲೀಸ್ ಇಲಾಖೆಗೆ ದೂರು ನೀಡುತ್ತೇವೆ ಎಂದು ತಿಳಿಸಿದರು.
ಈ ಸರ್ಕಾರಿ ಶಾಲೆಯಲ್ಲಿ ಹಿರಿಯಪ್ರಾಥಮಿಕ ಶಾಲೆಯನ್ನ ಬಂದ್ ಮಾಡಲಾಗಿದೆ. ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದರಿಂದ ಶಾಲೆ ಬಂದ್ ಆಗಿದೆ. ಅಂಗನವಾಡಿ ಮಕ್ಕಳಿದ್ದಾರೆ. ಈ ಮಕ್ಕಳಿಗೆ ಹೆಚ್ಚಿನ ಸುರಕ್ಷತೆಯ ಅವಶ್ಯಕತೆ ಇದೆ.
ಇದನ್ನೂ ಓದಿ-https://suddilive.in/archives/18640