ಮಳೆಯ ಆರ್ಭಟ, ಪಾಲಿಕೆವತಿಯಿಂದ ಮೈಕ್ ಅನೌನ್ಸ್ ಮೆಂಟ್, ತಂಡ ರಚನೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಪುನರ್ವಸು ಮಳೆ ಆರ್ಭಟ ಜೋರಾಗಿದೆ. ರಾತ್ರಿಯಿಡಿ ಮಳೆ ಸುರಿದಿದೆ. ಬೆನ್ನಲ್ಲೇ ತುಂಗ ನದಿಯ ಭೋರ್ಗೆರತ ಹೆಚ್ಚಾಗಿದೆ. 

ಶಿವಮೊಗ್ಗದಲ್ಲಿ ಪಾಲಿಕೆ ಐದು ವಾರ್ಡುಗಳಲ್ಲಿ ಎಚ್ಚರಿಕೆ ನೀಡಿದೆ. ಮಳೆಯ ನೀರು ರಾತ್ರಿಯ ವೇಳೆಗೆ 70188 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ಹಾಗೂ ಈ ಒಳಹರಿವು ರಾತ್ರಿಯ ವೇಳೆ ಹೆಚ್ಚಾಗುವ ಸಾಧ್ಯತೆಯಿಂದಾಗಿ ಐದು ವಾರ್ಡ್ ಗಳಲ್ಲಿ ಎಚ್ಚರಿಕೆ ಮತ್ತು ರೆಸ್ಕ್ಯೂ ತಂಡ ರಚಿಸಲಾಗಿದೆ.


ಬೀಬಿ ಸ್ಟ್ರೀಟ್, ಕುಂಬಾರಗುಂಡಿ, ಇಮಾಮ್ ಬಾಡಾ, ಸೀಗೆಹಟ್ಟಿಯಲ್ಲಿ ಈಗಾಗಲೇ ವಾಹನದಲ್ಲಿ ಪಾಲಿಯಿಂದ ಮೈಕ್ ಅನೌನ್ಸ್ ಮೆಂಟ್ ಮಾಡಲಾಗಿದೆ. ನದಿಯಲ್ಲಿ ಒಳ ಹರಿವು ಹೆಚ್ಚಾಗುತ್ತಿರುವ ಬಗ್ಗೆ ಮತ್ತು ಜೀವ ಸುರಕ್ಷತೆ ಕುರಿತು ಎಚ್ಚರಿಕೆ ನೀಡಲಾಗಿದೆ.

ಏರಿಯಾ ವೈಸ್ ತಂಡ ರಚಿಸಲಾಗಿದೆ. ಪಾಲಿಕೆ ಐದು ತಂಡ ರಚಿಸಿದೆ ವಿದ್ಯಾನಗರದಲ್ಲಿ ಬರುವ ರಾಜೀವ್ ಗಾಙಧಿ ಬಡಾವಣೆ, ಪ್ರಿಯಾಂಕ ಗಾಂಧಿ ಮತ್ತಿತರೆ ನದಿಯ ತಟದ ಬಡಾವಣೆಗಳಿಗೆ ಒಂದು ತಂಡ,

ಬೀಬಿ ಸ್ಟ್ರೀಟ್, ಕುಂಬಾರ ಗುಂಡಿ, ಇಮಾಮ್ ಬಾಡಾ, ಬಾಪೂಜಿನಗರದ ಕಡೆ ಐದು ತಂಡ ರಚಿಸಲಾಗಿದೆ. ಒಟ್ಟಿನಲ್ಲಿ ಮಳೆಯ ನೀರು ಹೆಚ್ಚಳವಾದಲ್ಲಿ ರೆಸ್ಕ್ಯೂ ತಂಡವನ್ನ ಪಾಲಿಕೆ ಸಜ್ಜು ಮಾಡಿಕೊಂಡಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು