ಸುದ್ದಿಲೈವ್/ಶಿವಮೊಗ್ಗ
ನಿನ್ಬೆ ರಾತ್ರಿ 10 ಗಂಟೆಯ ಸುಮಾರಿಗೆ ಸಂಭವಿಸಿದ ಆಕಸ್ಮಿಕ ಅಗ್ನಿದುರಂತದಲ್ಲಿ ನಾಲ್ಕು ಅಂಗಡಿಗಳು ಆಹುತಿಯಾಗಿದೆ. ಇಂದು ಬೆಳಿಗ್ಗೆ ಸ್ಥಳಕ್ಕೆ ಶಾಸಕ ಚೆನ್ನಬಸಪ್ಪ ಮತ್ತು ಪಾಲಿಕೆ ಆಯುಕ್ತರು ಭೇಟಿ ನೀಡಿ ಅವಲೋಕಿಸಿದರು.
ಎರಡು ಬಳೆ ಅಂಗಡಿ ಮತ್ತು ಎರಡು ಚಪ್ಪಲಿ ಅಂಗಡಿಗಳು ಬೆಂಕಿಗೆ ಆಹುತಿಯಾಗಿದೆ. ಸಮಯಕ್ಕೆ ಸರಿಯಾಗಿ ಕಾರ್ಯಪ್ರವೃತ್ತಿ ಆಗದಿದ್ದರೆ ಬಟ್ಟೆ ಅಂಗಡಿಗಳು ಬೆಂಕಿಯ ಕೆನ್ನಾಲಿಗೆಗೆ ಒಳಗಾಗುತ್ತಿದ್ದವು.
ಶಾಸಕ ಚೆನ್ನಬಸಪ್ಪನವರು ಮಾತನಾಡಿ, ಚೋರ್ ಬಜಾರ್ ಇಕ್ಕಟ್ಟಾಗಿವೆ. ಅಂಗಡಿಗಳು ಒಳಗಿರುವ ಬದಲು ಹೊರಗೆ ಬಂದಿವೆ. ದುರಂತ ಸಂಭವಿಸಿದರೆ ರಕ್ಷಣೆ ಮಾಡಲು ಅವಕಾಶವಿಲ್ಲದಂತಾಗಿದೆ. ಅಂಗಡಿಯವರು ಕುಳಿತು ಈ ಬಗ್ಗೆ ಯೋಚಿಸಲಿ ಎಂದು ಹೇಳಿದರು.
ಪರಿಹಾರಕ್ಕೆ ಪಾಲಿಕೆ ಆಯುಕ್ತರಿಗೆ ಕೊಡುವಂತೆ ಮನವಿ ಮಾಡಿಕೊಳ್ಳಲಾಯಿತು. ಈ ಕುರಿತು ಮಾತನಾಡಿದ ಆಯಕ್ತೆ ಕವಿತಾ ಯೋಗಪ್ಪನವರ್ ಮೊದಲು ಅಗ್ನಿ ದುರಂತಕ್ಕೆ ಕಾರಣವೇನು ಎಂಬುದು ಪರಿಶೀಲಿಸಲಾಗುವುದು.
ನಂತರ ಈ ಕುರಿತು ಸರ್ವೆ ನಡೆಸಿ ಪರಿಹಾರದ ಬಗ್ಗೆ ಚರ್ಚಿಸಿ ನೀಡುವುದಾಗಿ ಹೇಳಿದರು.
ಚೋರ್ ಬಜಾರ್ ಮೊದಲು ಹೇಗಿತ್ತು?
ಈ ಮೊದಲು ಚೋರ್ ಬಜಾರ್ ನ ಹೊರಭಾಗದಲ್ಲಿ ಕಾಟ್ ಗಳನ್ನ ಹಾಕಲಾಗುತ್ತಿತ್ತು. ಸಂಜೆ 7 ರಿಂದ 7-30 ಕ್ಕೆ ಅಂಗಡಿ ಬಂದ್ ಮಾಡಿ ಪೆಟ್ಟಿಗೆಯಲ್ಲಿ ಸಾಮಾನುಗಳನ್ನ ಬಂದ್ ಮಾಡಿ ಒಳಗೆ ಇಟ್ಟು ಹೋಗಲಾಗುತ್ತಿತ್ತು.
ಈಗ ಕಾರ್ಡ್ ಬೋರ್ಡ್ ಗಳನ್ನೇ ಫಿಕ್ಸ್ ಮಾಡಲಾಗಿದೆ. ಟಾರ್ಪಲ್ ಹಾಕಲಾಗುತ್ತಿದೆ. ಚೋರ್ ಬಜಾರ್ ಒಳಗೆ ಹೋಗಲು ದಾರಿಯಿಲ್ಲದಂತೆ ಅಂಗಡಿಗಳನ್ನ ಖಾಯಂಗೊಳಿಸಲಾಗಿದೆ. ಇದರಿಂದ ದುರಂತ ಸಂಭವಿಸಿದರೆ ಏನೂ ಕ್ರಮ ಕೈಗೊಳ್ಳಲು ಆಗದಂತಾಗಿದೆ. ಈ ಬಗ್ಗೆನೇ ಶಾಸಕರು ಆಕ್ಷೇಪಿಸಿದ್ದಾರೆ. ಅಂಗಡಿಯವರು ಈ ಬಗ್ಗೆ ಚಿಂತಿಸುವುದು ಒಳ್ಳೆಯದು.
ಇದನ್ನೂ ಓದಿ-https://suddilive.in/archives/18281