ಜಿಲ್ಲೆಯಲ್ಲಿ ಭರ್ಜರಿ ಮಳೆ, ಹೊಸನಗರದಲ್ಲಿ ಅವಘಢ

ಸುದ್ದಿಲೈವ್/ಶಿವಮೊಗ್ಗ/ಹೊಸನಗರ/ತೀರ್ಥಹಳ್ಳಿ

ಒಂದು ಕಡೆ ಮಳೆ ಬೀಳುತ್ತಿರುವುದರಿಂದ ಸಂತೋಷಗೊಂಡರೂ ಮತ್ತೊಂದು ಕಡೆ ಅವಘಡ ಸಂಭವಿಸುತ್ತಿದೆ. ಪುರಾಣ ಪ್ರಸಿದ್ಧ ರಾಮಮಂಟಪ ಮುಳುಗಡೆಗೆ ಕ್ಷಣಗಣನೆ ಆರಂಭವಾಗಿದೆ. ತೀರ್ಥಹಳ್ಳಿಯ ರಾಮಮಂಟಪ ಮುಳುಗಲು ಒಂದು ಅಡಿ ಬಾಕಿ ಉಳಿದಿದೆ.

ಪುನರ್ವಸು ಮಳೆಯ ಆರ್ಭಟಕ್ಕೆ ಮೈದುಂಬಿದ ತುಂಗೆಯಲ್ಲಿ ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ರಾಮಮಂಟಪ ಮುಳುಗಲಿದೆ.

ಅದರಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಶಿವಮೊಗ್ಗದ ತುಂಗ ನದಿಗೆ ಭೇಟಿ ನೀಡಿದ್ದಾರೆ ಭೋರ್ಗರೆವ ತುಂಗ ನದಿಯ ಒಳಹರಿವು ಹೆಚ್ಚಾಗುತ್ತಿರುವ ಬೆನ್ನಲ್ಲೇ ಅವರ ಭೇಟಿ ಮಹತ್ವ ಪಡೆದು ಕೊಂಡಿದೆ.

ಹೊಸನಗರದಲ್ಲಿ ಮಳೆಗೆ ಅನಾಹುತ

ಶಿವಮೊಗ್ಗದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ವಿವಿಧೆಡೆ ಮನೆ ಮೇಲೆ ಮರಗಳು ಬಿದ್ದಿರುವ ದೃಶ್ಯ ಕಂಡು ಬಂದರೆ ಇನ್ನುಕೆಲವೆಡೆ ತಡೆಗೋಡೆಗಳು ಉರುಳಿವೆ. ಮನೆಗಳ ಗೋಡೆಗಳು ಉರುಳಿವೆ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಹೊಸನಗರ ತಾಲೂಕಿನ ಸುಳಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಗಿಣಿಕಲ್ ಗ್ರಾಮದ ಮನೆಯ ಮೇಲೆ ಮರವೊಂದು ಉರುಳಿ ಬಿದ್ದಿವೆ.

ಗ್ರಾಮದ ಕಟ್ಟಿನಗದ್ದೆ ಹಿರಿಯಣ್ಣ ಎಂಬ ಕೃಷಿಕನ ಮನೆ ಮೇಲೆ ಮರ ಉರುಳಿ ಬಿದ್ದಿದೆ.
ಮರ ಬಿದ್ದ ಪರಿಣಾಮ ಮನೆ ಜಖಂಗೊಂಡು ನಷ್ಟಗೊಂಡಿವೆ.ಸ್ಥಳಕ್ಕೆ ನಗರ ಹೋಬಳಿ ಉಪ ತಹಶೀಲ್ದಾರ್, ಸುಳಗೋಡು ಗ್ರಾಮ ಪಂಚಾಯತಿ ಪಿಡಿಓ ಸೇರಿದಂತೆ ಹಲವರು ಭೇಟಿ ನೀಡಿ ಪರಿಶೀಲಿಸಿದರು.

ಇನ್ನೊಂದೆಡೆ ಹೊಸನಗರ ಪಟ್ಟಣಕ್ಕೆ ಸಮೀಪ ಇರುವ ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ವರಕೋಡು ಗ್ರಾಮದ ದೊರೆದಿಂಬ ಎಂಬಲ್ಲಿ ಜೈನಾಬಿ ಕೋಂ ಮಾಸಿಂಸಾಬ್ ಎಂಬುವವರ ಮನೆ ಮೇಲೆ ಮರ ಉರುಳಿಬಿದ್ದಿದೆ.

ಮರ ಉರುಳಿ ಬಿದ್ಧ ಪರಿಣಾಮ ಮನೆ ಜಖಂಗೊಂಡ ನಷ್ಟಗೊಂಡಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಕೌಶಿಕ್ ಭೇಟಿ ಪರಿಶೀಲಿಸಿದ್ದಾರೆ.

ಹೊಸನಗರ ಮಳೆಗೆ ಉದ್ಘಾಟನೆಗೆ ಸಜ್ಜಾಗಿದ್ದ ಸೇತುವೆಯ ತಡೆಗೋಡೆ ಕುಸಿತವಾಗಿದೆ.
ಕಲ್ಲುಹಳ್ಳ ಸೇತುವೆ ತಡೆಗೋಡೆ ಕುಸಿತಗೊಂಡು ಅನಾಹುತಗಳು ಸಂಭವಿಸದಂತೆ ಘಟನೆ ನಡೆದಿರುವುದು ಗ್ರಾಮಸ್ಥರ ನೆಮ್ಮದಿಗೆ ಕಾತಣವಾಗಿದೆ.

ಹೊಸನಗರ ತಾಲೂಕಿನ ಕಲ್ಲುಹಳ್ಳ ಗ್ರಾಮದಲ್ಲಿ ಸೋಮವಾರ ರಾತ್ರಿ ಪಟ್ಟಣದಲ್ಲಿ ಸುರಿದ ಭಾರೀ ಮಳೆಗೆ ಪಟ್ಟಣಕ್ಕೆ ಸಮೀಪ ಇರುವ ಕಲ್ಲುಹಳ್ಳ ಸೇತುವೆ ಯ ತಡೆಗೋಡೆ ಕುಸಿತಗೊಂಡಿದೆ.‌

ಪಟ್ಟಣದಲ್ಲಿ ಹಾದು ಹೋಗುವ ರಾಣಿಬೆನ್ನೂರು- ಬೈಂದೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 766 c ಗೆ ಕಲ್ಲುಹಳ್ಳ ಎಂಬಲ್ಲಿ ಈ ಸೇತುವೆ ನಿರ್ಮಾಣವಾಗಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಡಿಯಲ್ಲಿ ಸುಮಾರು 5 ಕೋಟಿ ಅನುದಾನದಲ್ಲಿ ಸೇತುವೆ ಇತ್ತೀಚಿಗೆ ನಿರ್ಮಾಣಗೊಂಡಿತ್ತು. ಲೋಕಾರ್ಪಣೆ ಗೊಳ್ಳುವ ಮೊದಲೆ ಸೇತುವೆಯ ತಡೆಗೋಡೆ ಕುಸಿದು ಬಾರೀ ಅವಘಡಕ್ಕೆ ಕಾರಣವಾಗಿದೆ.ಇದೇ ರೀತಿ ಮಳೆ ಮುಂದುವರೆದಲ್ಲಿ ಇನ್ನಷ್ಟು ಭಾಗ ಕುಸಿವ ಭೀತಿ ಉಂಟಾಗಿದೆ.

ಭಾರಿ ಮಳೆಗೆ ಮನೆ ಮೇಲೆ ಬಿದ್ದ ತೆಂಗಿನಮರ –

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯ ಕಾರಕ್ಕಿ ಗ್ರಾಮದಲ್ಲಿ ಕಾರಕ್ಕಿ ಗ್ರಾಮದ ಅರಗೋಡಿ ನಾಗರಾಜ್ ಎಂಬುವವರ ಮನೆ ಮೇಲೆ ಬಿದ್ದ ತೆಂಗಿನ ಮರ ಉರುಳಿದೆ.‌

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಧ್ಯಾಹ್ನ ಮನೆಯ ಮೇಲೆ ತೆಂಗಿನಮರ ಉರುಳಿದೆ. ತೆಂಗಿನ ಮರ ಬಿದ್ದ ಪರಿಣಾಮ ಮನೆ ಸಂಪೂರ್ಣ ಜಖಂಗೊಂಡಿದೆ.

ಭಾರಿ ಗಾಳಿಯೊಂದಿಗೆ ಸುರಿದ ಮಳೆಗೆ ಮನೆ ಮುಂದೆ ಇದ್ದ ತೆಂಗಿನಮರ ಬುಡ ಸಮೇತವಾಗಿ ಮನೆಯ ಮೇಲೆ ಬಿದ್ದು ಲಕ್ಷಾಂತರ ರೂ. ನಷ್ಟವಾಗಿದೆ. ಘಟನಾ ಸ್ಥಳಕ್ಕೆ ಕೋಡೂರು ಗ್ರಾಪಂ ಸದಸ್ಯ ಯೋಗೇಂದ್ರಪ್ಪ, ಪಿಡಿಒ ನಾಗರಾಜ್, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ – ಪರಿಶೀಲಿಸಿದ್ದಾರೆ. ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ

ಭಾರಿ ಮಳೆಗೆ ಮನೆ ಕುಸಿತ – ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ

ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಮನೆಯ ಗೋಡೆ ಕುಸಿತ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಪಂ ವ್ಯಾಪ್ತಿಯ ಹೊಟ್ಯಾಳಪುರದಲ್ಲಿ ಘಟನೆ ನಡೆದಿದೆ. ರಾತ್ರಿ ಸುರಿದ ಮಳೆಗೆ ಮನೆಯ ಛಾವಣಿ ಹಾಗೂ ಗೋಡೆ ಕುಸಿತಗೊಂಡಿದೆ.

ಮನೆಯಲ್ಲಿ ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.ಹೊಟ್ಯಾಳಪುರ ಗ್ರಾಮದ ಪ್ರಭಾಕರ್ ಎಂಬುವವರ ಮನೆಯ ಗೋಡೆ ಕುಸಿತವಾಗಿದ್ದು, ಮಳೆಯ ರಭಸಕ್ಕೆ ಮನೆಯೊಳಗಿನ ಅಡುಗೆ ಮನೆ ಪಕ್ಕದ ಗೋಡೆ ಕುಸಿದಿದ್ದು , ಸಂಪೂರ್ಣ ಮನೆ ಕುಸಿಯುವ ಹಂತಕ್ಕೆ ಬಂದು ತಲುಪಿದೆ.ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.

ಇದನ್ನೂ ಓದಿ-https://suddilive.in/archives/19477

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket