ಇಂದು ಜಿಲ್ಲೆಯ ಪ್ರಮುಖ ಜಲಾಶಯಗಳ ನೀರಿನ ಮಟ್ಟ

ಸುದ್ದಿಲೈವ್/ಶಿವಮೊಗ್ಗ

ಜುಲೈ ಅರ್ಧ ತಿಂಗಳು ಕಳೆದರೂ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ಆದರೂ ತಕ್ಕಮಟ್ಟದಲ್ಲಿ ಜಿಲ್ಲೆಯಪ್ರಮುಖನದಿಗಳ ಜಲಾಶಯಗಳು ತುಂಬಿಕೊಂಡಿವೆ.

ತುಂಗ ಭದ್ರ ಮತ್ತು ಶರಾವತಿಯ ಜಲಾಶಯಗಳಲ್ಲಿ ತಕ್ಕಮಟ್ಟಿಗೆ ನೀರು ಏರಿಕೆಯಾಗಿದೆ. ತುಂಗ ಜಲಾಶಯದಲ್ಲಿ ಇಷ್ಟು ಹೊತ್ತಿಗೆ 60-70 ಕ್ಯೂಸೆಕ್ ನೀರು ಹರಿದುಬರಬೇಕಿತ್ತು. ಯಾಕೆಂದರೆ ಭದ್ರಕ್ಕಿಂತ ತುಂಗನದಿಗೆ ಮಳೆಯಜಲಾನಯ ಪ್ರದೇಶಗಳಿವೆ.

ಆದರೆ ಮಳೆ ಈ ಬಾರಿ ನಿರೀಕ್ಷೆಯ ಮಟ್ಟದಲ್ಲಿ ಆಗದೆ ಇರುವುದು ಕಾರಣವಾಗಿದೆ. ಸಧ್ಯಕ್ಕೆ ತುಂಗ ಜಲಾಶಯದಲ್ಲಿ 25 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ನಿನ್ನೆ 14 ಸಾವಿರ ಕ್ಯೂಸೆಕ್ ನೀರು ಹರಿದು ಬಂದಿತ್ತು. ರಾತ್ರಿಯ ವೇಳೆಗೆ ನೀರಿನ ಒಳಹರಿವು 21 ಸಾವಿರಕ್ಕೆ ಏರಿಕೆಯಾಗಿತ್ತು.

ಇಂದು ಬೆಳಿಗ್ಗೆ 25 ಸಾವಿರ ಕ್ಯೂಸೆಕ್ ನೀರು ಏರಿಕೆಯಾಗಿ ಈಗ 21 ಗೇಟ್ ಮೂಲಕ ನದಿಗೆ ಒಳಹರಿವಿನಷ್ಟೇ ಹೊರಹರಿವನ್ನ ಹರಿಸಲಾಗುತ್ತಿದೆ. ಭದ್ರ ಜಲಾಶಯಕ್ಕೆ 14 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಈಗ ಇದರ ಮಟ್ಟ 139.8 ಅಡಿ ಏರಿಕೆಯಾಗಿದೆ.

ಕಳೆದವರ್ಷ ಭದ್ರಜಲಾಶಯದ ನೀರಿನ ಸಂಗ್ರಹ ಈದಿನಕ್ಕೆ 141 ಅಡಿ ನೀರು ಸಂಗ್ರಹವಾಗಿತ್ತು. ಕಳೆದ ವರ್ಷಕ್ಕಿಂತ ಅಂತಹ ವ್ಯತ್ಯಾಸ ಕಾಣದಿದ್ದರು. ಕಳೆದ ವರ್ಷ ಅದರ ಗರಿಷ್ಠವಾಗಿ ಸಂಗ್ರಹವಾಗಿದ್ದ ನೀರಿನ ಮಟ್ಟ 166 ಅಡಿ ನೀರು ಸಂಗ್ರಹ, 186 ಅಡಿ ನೀರು ಸಂಗ್ರಹದ ಸಾಮರ್ಥ್ಯಹೊಂದಿರುವ ಜಲಾಶಯದಲ್ಲಿಕಳೆದ ವರ್ಷ 20 ಅಡಿ ನೀರು ಸಂಗ್ರಹದ ಕೊರತೆಉಂಟಾಗಿತ್ತು. ಈ ವರ್ಷ ಏನಾಗಲಿದೆ ಕಾದು ನೋಡಬೇಕಿತ್ತು.

ಶರಾವತಿಯ ಲಿಂಗಾನಮ್ಮಕ್ಕಿಯಲ್ಲಿ 1819 ಅಡಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ಇಂದು ಅದರ ಜಲಾಶಯದ ಮಟ್ಟ 1775 ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದರ ಜಲಾಶಯದ ಮಟ್ಟ 1754.45 ಅಡಿ ಅಷ್ಟು ನೀರು ಸಂಗ್ರಹವಾಗಿತ್ತು. 36,197 ಅಡಿ ನೀರು ಜಲಾಶಯಕ್ಕೆಹರಿದು ಬರುತ್ತಿದೆ.

ಇದನ್ನೂ ಓದಿ-https://suddilive.in/archives/19228

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close