ಸುದ್ದಿಲೈವ್/ಶಿವಮೊಗ್ಗ
ಮಲೆನಾಡಿನ ಅಧಿಕ ಮಳೆಗೆ ಅನಾಹುತಗಳ ಸರಮಾಲೆಯೇ ಕಂಡು ಬರುತ್ತಿದೆ. ಬಸ್ ಗಳ ಮೇಲೆ ವಿದ್ಯುತ್ ತಂತಿ ಹರಿದ ಬೆನ್ನಲ್ಲೇ ರೈಲಿನ ಅಡಿಳಮೇಲೆ ಮರ ಬಿದ್ದಿದೆ. ಪರಿಣಾಮ ಬೆಂಗಳೂರು-ತಾಳಗುಪ್ಪ ಇಂಟರ್ ಸಿಟಿ ಪ್ರಯಾಣಿಕರು ಪರದಾಡುವಂತಾಗಿದೆ.
ಕುಂಸಿ ಮತ್ತು ಅರಸಾಳು ನಡುವೆ ಬರುವ ಸೂಡೂರು ಬಳಿ ರೈಲ್ವೆ ಹಳಿಯ ಮೇಲೆ ಮರ ಬಿದ್ದಿದ್ದು ಸುಮಾರು 8-20 ರಿಂದ ಇಲ್ಲಿಯವರಗೂ ತೆರವು ಕಾರ್ಯಾಚರಣೆ ಆಗದೆ ಎರಡು ಗಂಟೆಯ ವರಗೆ ರೈಲು ನಿಂತಿದೆ. ಸಾಗರ ಮತ್ತು ತಾಳಗುಪ್ಪ ಚಲಿಸುವ ಪ್ರಯಾಣಿಕರು ಪರದಾಡುವಂತಾಗಿದೆ.
ಸಾಗರದಿಂದ ಒಂದು ರೈಲು ಮತ್ತು ಶಿವಮೊಗ್ಗದಿಂದ ಇನ್ನೂ ಎರಡು ರೈಲು ಸಙಚರಿಸಬೇಕಿದ್ದು ತೆರವು ಕಾರ್ಯಾಚರಣೆ ಮುಗಿಯುವ ವರೆಗೂ ರೈಲುಗಳು ಸಂಚರಿಸದಂತಾಗಿದೆ. ತೆರವು ಕಾರ್ಯಾಚರಣೆಗೆ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.