ಮಂಡಕ್ಕಿ ಭಟ್ಟಿಯಲ್ಲಿ ನುಗ್ಗಿದ ನೀರು |
ಸುದ್ದಿಲೈವ್/ಶಿವಮೊಗ್ಗ
ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ, ಕಿಗ್ಗ, ಹರಿಹರಪುರ, ಶೃಂಗೇರಿ, ತೀರ್ಥಹಳ್ಳಿಯಲ್ಲಿ ಸುರಿಯುತ್ತಿರುವ ಮಳೆಗೆ ಶಿವಮೊಗ್ಗದಲ್ಲಿ ತುಂಗೆ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದಾಳೆ.
ಮಧ್ಯಾಹ್ನ 3 ಗಂಟೆಗೆ 80 ಸಾವಿರ ಕ್ಯೂಸೆಕ್ ಹರಿದು ಬರುತ್ತಿದ್ದ ನದಿಗೆ ಈಗ 83.5 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಗೆ ಹವಮಾನ ಇಲಾಖೆ ಇನ್ನೂ ಎರಡು ಮೂರು ದಿನ ರೆಡ್ ಅಲರ್ಟ್ ಘೋಷಿಸಿದೆ. ಹಿನ್ನೆಲೆಯಲ್ಲಿ ನೀರಿನ ಪ್ರಮಾಣ ಹೆಚ್ಚಿದರೆ ನಗರದ ತಗ್ಗುಪ್ರದೇಶದಲ್ಲಿ ನದಿಯ ನೀರು ನುಗ್ಗಲಿದೆ.
ತೀರ್ಥಹಳ್ಳಿಯಲ್ಲಿ ಐತಿಹಾಸಿಕ ರಾಮಮಂಟಪ ಮುಳುಗಿದೆ 85 ಅಡಿ ಎತ್ತರದಲ್ಲಿ ನದಿ ಹರಿಯುತ್ತಿದೆ. ಅದರಂತೆ ತಗ್ಗು ಪ್ರದೇಶದ ಜನರಿಗೆ ಅಲರ್ಟ್ ಮಾಡಲಾಗಿದೆ. ಶಿವಮೊಗ್ಗದಲ್ಲಿ ಸಂಜೆಯ ವೇಳೆಗೆ ಸೀಗೆಹಟ್ಟಿ ಮಂಡಕ್ಕಿ ಭಟ್ಟಿಯಲ್ಲಿ ರಸ್ತೆಯ ಮೇಲೆ ನೀರು ಹರಿದಿದೆ.
ಒಂದು ವೇಳೆ ನದಿಯ ನೀರು ಹೆಚ್ಚಾದರೆ ರಾಮಣ್ಣ ಶ್ರೇಷ್ಠಿ ಪಾರ್ಕ್ ನ್ನ ಕಾಳಜಿಕೇಂದ್ರವಾಗಿ ಗುರುತಿಸಲಾಗಿದೆ. ಪಾಲಿಕೆಯ ಅಧಿಕಾರಿಗಳು ಹೈ ಅಲರ್ಟ್ ಆಗಿದ್ದಾರೆ. ಮಾಹಿತಿ ಪ್ರಕಾರ ನದಿಯ ಒಳಹರಿವು ಕೊಂಚ ತಗ್ಗಿದೆ ಎಂದು ಹೇಳಲಾಗುತ್ತಿದೆ. ಆದರೆ ರಾತ್ರಿ ಏನಾಗಲಿದೆ ಕಾದು ನೋಡಬೇಕಿದೆ.
ಇದನ್ನೂ ಓದಿ-https://www.suddilive.in/2024/07/blog-post_511.html