ಸುದ್ದಿಲೈವ್/ಶಿವಮೊಗ್ಗ
ನಗರದ ನ್ಯೂ ಮಂಡಲಿಯಲ್ಲಿ ಪೋಲಿ ಪೋಕರಿಗಳ ಹಾವಳಿ ಹೆಚ್ಚಾಗಿದ್ದು ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಮಹಿಳೆಯೊಬ್ವರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೇರೆ ಏರಿಯಾದಿಂದ ನಮ್ಮ ಏರಿಯಾಗೆ ಬಂದು ಹುಡುಗಿಯರನ್ನ ಅವ್ಯಾಚ್ಯ ಶಬ್ದಗಳಿಂದ ಬೈಯುವುದು ಕಲ್ಲಿನಲ್ಲಿಹೊಡೆಯುವುದನ್ನ ಮಾಡುತ್ತಿರುವುದಾಗಿ ಠಾಣೆಯಲ್ಲಿ ದೂರುದಾಖಲಾಗಿದೆ.
ಫಜೀರ್, ಮುಬಾರಕ್, ನಯಾಜ್, ಸಮೀರ್, ಲುಕಮಾನ್ ಮತ್ತು ಹುಸೇನ್ ವಿರುದ್ಧ ದೂರು ದಾಖಲಾಗಿದೆ. ನ್ಯೂಮಂಡ್ಲಿಯಲ್ಲಿ ರ್ಯಾಶ್ ಡ್ರೈವಿಂಗ್ ಮಾಡಿ ಮಾರಕಾಸ್ತ್ರಗಳನ್ನ ಹಿಡಿದು ಓಡಾಡುತ್ತಾರೆ ಎಂದು ಮಹಿಳೆಯೋರ್ವರು ಆರೋಪಿಸಿದ್ದಾರೆ.
ಇದರಿಂದ ಇಲಗಲಿ ವಾಸಕ್ಕೆ ತೊಂದರೆ ಉಂಟಾಗುತ್ತಿದ್ದು, ಭಾನುವಾರ ರಾತ್ರಿ 10 ಗಂಟೆಗೆ ಈಯುವಕರ ಹಾವಳಿ ಹೆಚ್ಚಾಗಿದ್ದು ಈ ಯುವಕರನ್ನ ಕೇಳು ಹೋದ ಮಹಿಳೆಯ ಮೇಲೆ ಅವ್ಯಚ್ಯ ಶಬ್ದಗಳಿಂದ ಬೈದಿದ್ದಾರೆ. ನಂತರ ಮಹಿಳೆ ಕಿರಚಿಕೊಂಡಾಗ ಸ್ಥಳೀಯರು ಸಹಾಯಕ್ಕೆ ಬರುವುದನ್ನ ಕಂಡು ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.
ಇದನ್ನೂ ಓದಿ-https://suddilive.in/archives/19518