ನಿನ್ನೆಯ ಎರಡು ಪ್ರಕರಣಗಳಲ್ಲಿ ಪೊಲೀಸರ ಮೇಲೆ ಹಲ್ಲೆ-ಹಾಗಾದರೆ ಪೊಲೀಸರಿಗೆ ರಕ್ಷಣೆ ಇಲ್ವಾ?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ನಿನ್ನೆ ಒಂದೇ ದಿನ ಇಬ್ಬರು ಪೊಲೀಸರ ಮೇಲೆ ಅಟ್ಯಾಕ್ ನಡೆದಿದೆ. ಪೊಲೀಸರ ಮೇಲೆ ಅಟ್ಯಾಕ್ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.

ನಿನ್ನೆ ಬೆಳಿಗ್ಗಿನ ಜಾವ ಕೊಲೆಗೆ ಯತ್ನ, ಗಾಂಜಾ ಸಾಗಾಟ, ಮಾರಾಟದ ಪ್ರಕರಣದಲ್ಲಿರುವ ಆರೋಪಿಯಾಗಿದ್ದ ರಜಾಕ್ ರನ್ನ ಬಂಧಿಸುವ ವೇಳೆ ಪೊಲೀಸರ ಮೇಲೆ ದಾಳಿ ನಡೆದಿದೆ. ಅರ್ಜುನ್ ಎಂಬ ಸಿಬ್ಬಂದಿ ಗಾಯಗೊಂಡಿದ್ದಾರೆ.

ನಿನ್ನೆ ಸಂಜೆ ಕಿಡ್ನ್ಯಾಪ್ ಮತ್ತು ರಾಬರಿ ಪ್ರಕರಣದಲ್ಲಿ ವಿನೋಬ ನಗರ ಪೊಲೀಸ್ ಠಾಣೆಯ ಮಲ್ಲಪ್ಪನವರ ಮೇಲೆ ಆರೋಪಿ ಮೊಹಮದ್ ಶಾನ್ ಯತ್ನಿಸಿದ್ದಾನೆ. ಅದೂ ಅಲ್ಲದೆ ಮೊಹಮದ್ ಶಾನ್ ತನ್ನ ಕುತ್ತಿಗೆಗೆ ಹರಿತವಾದ ಆಯುಧದಿಂದ ಕೊಯ್ದುಕೊಂಡಿದ್ದಾನೆ.

ಈ ಎರಡೂ ಪ್ರಕರಣಗಳು ನೈಜವಾಗಿದ್ದರೆ, ಪೊಲೀಸರ ಮೇಲೆ ನಡೆಯುತ್ತವೆ ಹಲ್ಲೆಗಳು ಸಮಾಜ ಯಾವ ಕಡೆ ಸಾಗ್ತಾ ಇದೆ ಎಂಬದರ ನಿದರ್ಶನವೂ ಆಗಿದೆ. ಇಂದು ಈ ಪ್ರಕರಣಗಳು ಸಣ್ಣದಾಗಿ ಕಾಣಸುತ್ತಾ ಇರಬಹುದು. ಪ್ರಕರಣಗಳಲ್ಲಿ ಪೊಲೀಸರು ಗಾಯಗೊಳ್ತಾರೆ ಎಂದರೆ ಅವರ ಸುರಕ್ಷತೆಯ ಬಗ್ಗೆಯೂ ಚರ್ಚೆ ಆಗಬೇಕಿದೆ.

ಈ ಹಿಂದೆಯೂ ಪೊಲೀಸರ ಮೇಲೆ ದಾಳಿಯಾಗಿವೆ. ಆದರೆ ಪೊಲೀಸರನ್ನ ಕಂಡರೆ ಪರಾರಿಯಾಗುತ್ತಿದ್ದ ಆರೋಪಿಗಳು, ಧೈರ್ಯವಾಗಿ ಅವರ ಮೇಲೆ ದಾಳಿ ನಡೆಸುತ್ತಾರೆ ಎಂದರೆ ಪೊಲೀಸರ ಮೇಲಿನ ಭಯ ಹೊರಟು ಹೋಗಿದೆಯಾ? ಎಂಬ ಜಿಜ್ಞಾಸೆಗೂ ಎರಡು ಪ್ರಕರಣ ಕಾರಣವಾಗಿದೆ.

ಡಿಜೆ ಹಳ್ಳಿ, ಕೆಜೆಹಳ್ಳಿ, ಹುಬ್ಬಳ್ಳಿ ಹಾಗೂ ಚನ್ನಗಿರಿಯಲ್ಲಿ ಅಲ್ಲಿನ ಪೊಲೀಸ್ ಠಾಣೆಗಳ ಮೇಲೆಯೇ ದಾಳಿ ನಡೆದಿತ್ತು. ಸಧ್ಯಕ್ಕೆ ಶಿವಮೊಗ್ಗದಲ್ಲಿ ಅಂತಹ ಪ್ರಕರಣಗಳು ನಡೆದಿಲ್ಲ ಎಂಬ ನೆಮ್ಮದಿಯಿದ್ದರೂ ಇಂತಹ ಸಣ್ಣಪುಟ್ಟ ಪ್ರಕರಣಗಳನ್ನ ಗಂಭೀರವಾಗಿ ಪರಿಗಣಿಸಿ ಮುನ್ನಚ್ಚರಿಕೆ ತೆಗೆದುಕೊಳ್ಳದಿದ್ದರೆ, ಮುಂದಿನ ದಿನಗಳು ಊಹಿಸಿಕೊಳ್ಳದಷ್ಟು ದೊಡ್ಡದಾಗಬಹುದು.

ಇದನ್ನೂ ಓದಿ-https://suddilive.in/archives/18964

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close