ಮತಚಲಾಯಿಸಿದವರಿಗೆ ಧನ್ಯವಾದ ತಿಳಿಸಿದ ಅಶ್ವಿನ್ ಕಡ್ಡಿಪುಡಿ-ಶ್ರೀಮಂತರ ಸಮಾಜವಾಗಬಾರದು-ಹೆಚ್ ಎಂ ಸಿ

ಅಶ್ವಿನ್ ಕಡ್ಡಿಪುಡಿ ಮತ್ತು ಹೆಚ್ ಎಂಸಿ ಸುದ್ದಿಗೋಷ್ಠಿ

ಸುದ್ದಿಲೈವ್/ಶಿವಮೊಗ್ಗ


ಮೊದಲ ಬಾರಿಗೆ ಭಾನುವಾರ ನಡೆದ ಅಖಿಲಭಾರತ ವೀರಶೈವ ಮಹಾಸಭ ಜಿಲ್ಲಾ ಘಟಕದ ಚುನಾವಣೆ ನಡೆದಿದೆ. ಚುನಾವಣೆಯಲ್ಲಿ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ರುದ್ರಮುನಿ ಸಜ್ಜನ್ ಗೆದ್ದಿದ್ದಾರೆ. ನಾನು ಸೋತಿರಬಹುದು ಆದರೆ ಮಹಾಸಭಾದಲ್ಲಿ ಇದುವರೆಗೂ ನಡೆಯುತ್ತಿದ್ದ ಸಾಂಪ್ರದಾಯವನ್ನ ಮುರಿದು ಮೊದಲಬಾರಿಗೆ ಚುನಾವಣೆ ನಡೆದಿದೆ ಎಂದರು. 


ಚುನಾವಣೆ ನಂತರ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಅಶ್ವಿನ್  3250 ಮತಗಳು ಚಲಾವಣೆ ಆಗಿದೆ.  ಸದಸ್ಯರು ಹೆಚ್ಚು ಜನರು ಬಂದು ಮತಚಲಾಯಿಸಿದ್ದಾರೆ ರುದ್ರಮುನಿ ಸಜ್ಜನ್ ರಿಗೆ ಮತ ನೀಡಿದ್ದಾರೆ. ಮೂರು ನಾಲ್ಕು ತಾಲೂಕು ಗಳಲ್ಲಿ ಅಧ್ಯಕ್ಷರ ಆಯ್ಜೆಗೆ ಚುನಾವಣೆ ನಡೆದಿದೆ. ಸಜ್ಜನ್ ರಿಗೆ ಸಮಾಜ ಮುಖಿಕೆಲಸ ಮಾಡಲಿ ಎಂದು ಆಶೀಸುತ್ತೇನೆ ಎಂದರು. 


ನನಗೆ ಮತ ಚಲಾಯಿಸಿದವರಿಗೆ ಧನ್ಯವಾದಗಳು. ಒಟ್ಟು 3250 ಮತಗಳು ಚಲಾವಣೆ ಆಗಿದ್ದು  ಇದರಲ್ಲಿ 309 ಮತಗಳಲ್ಲಿ ರುದ್ರಮುನಿ ಸಜ್ಜನ್ ಗೆದ್ದಿದ್ದಾರೆ ಎಂದರು.


ಶ್ರೀಮಂತರ ಸಮಾಜವಾಗಬಾರದು-ಹೆಚ್ ಎಂಸಿ


ಮಾಜಿ ಶಾಸಕ ಹೆಚ್ ಎಂ ಚಂದ್ರಶೇಖರ್ ಮಾತನಾಡಿ, ಆನಂದ ಪುರ ಸ್ವಾಮೀಜಿ ಮೂಲಕ ರುದ್ರಮುನಿ ನೋಡಿಕೊಳ್ಳಲು ಬಿಟ್ಟುಕೊಟ್ಟ ಕಾರಣ ಸಜ್ಜನ್ ಅಧ್ಯಕ್ಷರಾದರು. ಅವರು ನಾಲ್ಕು ಬಾರಿ ಗೆದ್ದಿಲ್ಲ. ನನಗೆ ಅವಕಾಶ ಬಂದಿತ್ತು. ನಾನು ಅವರಿಗೆ ಬಿಟ್ಟುಕೊಟ್ಟೆ. 


ಸಮಾಜದ ಪ್ರತಿಯೊಬ್ಬನೂ ಸದಸ್ಯರಾಗಬೇಕು. ಶ್ರೀಮಂತರ ಸಂಘ ಆಗಬಾರದು. ಸದಸ್ಯತ್ವ ಶುಲ್ಕ 10 ರೂ. ನಿಗದಿಯಾಗಬೇಕು. ಸಾವಿರ ರೂ ಬೇಡ. ಮಹಾಸಭಾಗೆ ಕಟ್ಟಡ ನಿರ್ಮಿಸಲಾಗಿದೆ. ಸಂತೋಷವಾಗಿದೆ. ನಮ್ಮ ಸಹಕಾರ ಮಹಾಸಭಗೆ ಇದೆ. ನನ್ನ ಸೂಚನೆ ಮೇರೆಗೆ ಅಶ್ವಿನ್ ಸ್ಪರ್ಧಿಸಿದರು. ಚುನಾವಣೆಯಲ್ಲಿ ಸೋಲು ಗೆಲವು ಮಾಮೂಲಿ ಎಂದರು. 

ಇದನ್ನೂ ಓದಿ-https://www.suddilive.in/2024/07/blog-post_922.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು