ಸುದ್ದಿಲೈವ್/ಶಿವಮೊಗ್ಗ
ತುಂಗ ನದಿ ಮಲೀನತೆ ಬಗ್ಗೆ ಸಿಎಂಗೆ ಮನವಿ ನೀಡಿದ ಬೆನ್ನಲ್ಲೇ ನಟ ಅನಿರುದ್ಧ ಇಂದು ನೇರವಾಗಿ ಡಿಸಿ ಕಚೇರಿಗೆ ಬಂದು ಅಧಿಕಾರಿಗಳ ಜೊತೆ ಸಭೆನಡೆಸಿದ್ದಾರೆ.
ಈ ವೇಳೆ ಪೊಲ್ಯೂಷನ್ ಬೋರ್ಡ್ ಅಧಿಕಾರಿ ಮಾತನಾಡಿ, ಮನೆಗಳ ಸೀವಿಯೇಜ್ ನೀರು ಪಾಲಿಕೆ ವ್ಯಾಪ್ತಿಯಲ್ಲಿ ತಡೆಯಬೇಕಿದೆ ಎಂದರು. ಪಾಲಿಕೆ ಆಯುಕ್ತರು ಮಾತನಾಡಿ, 35 ವಾರ್ಡ್ ನಲ್ಲಿ 6 ವಾರ್ಡ್ ಸ್ಮಾರ್ಟ್ ಸಿಟಿ ವಾರ್ಡ್ ಬರುತ್ತದೆ. ರಿವರ್ ಫ್ರಂಟ್ ನಿರ್ಮಿಸಲಾಗಿದೆ ಇದು ಪಾಲಿಕೆಗೆ ಹ್ಯಾಂಡ್ ಓವರ್ ಆಗುವ ಹಂತದಲ್ಲಿದೆ ಎಂದರು.
ಐಎನ್ ಡಿ (ಇಂಟರ್ ವೆನ್ಷನ್ ಅಙಡ್ ಡೈವರ್ಷನ್)ಯುಜಿಡಿ 7 ರನ್ನಿಂಗ್ ನಲ್ಲಿದೆ. ಪೈಪ್ ಲೈನ್ ಸೇರುತ್ತದೆ. ಟಾಯಿಲೆಟ್, ಕಿಚನ್ ಮತ್ತು ಬಾತ್ ರೂಮ್ ನ ನೀರು ನೇರವಾಗಿ ನದಿ ಸೇರ್ತಾ ಇದೆ. ಹೊಸಮನೆಗಳಲ್ಲಿ ಬಲವಂತವಾಗಿ ಯೂಜಿಡಿ ಸಂಪರ್ಕ ಪಡೆಯಲು ಒತ್ತಾಯಿಸುತ್ತಿದ್ದೇವೆ. ಕೆಲ ಹಳೆಯ ಮನೆಯವರು ಯುಜಿಡಿ ಸಂಪರ್ಕವಿಲ್ಲ ಎಂದರು.
13 ಪೈಪ್ ಲೈನ್ ಮೂಲಕ ನದಿಗೆ ಮಲೀನತೆ ನೀರು ಫಿಲ್ಟ್ರ್ ಆಗಿ ಸೇರಲಿದೆ. ಎರಡು ಯುಜಿಡಿಯಿಂದ 32 ಎಂಎಲ್ ಡಿ ಮಲೀನತೆ ನದಿಗೆ ಸೇರುವುದನ್ನ ತಡೆಯಲಿದೆ. ಇದನ್ನ ಶುದ್ಧಿಕರಣೀಕರ ಆಗಲಿದೆ. ಗ್ರೇ ವಾಟರ್ಸಮಸ್ಯೆ ಇದೆ. ಟಾಯಿಲೆಟ್ ಗೆ ಯುಜಿಡಿ ಸಂಪರ್ಕ ಪಡೆದರೆ ಕಿಚನ್ ಮತ್ತು ಬಾತ್ ರೂಂನ ಸಂಪರ್ಕದ ನೀರು ನೇರವಾಗಿ ನದಿಗೆ ಸೇರಲಿದೆ. ಮುಂದಿನ ದಿನಗಳಲ್ಲಿ ನದಿ ಮಲೀನತೆ ತಡೆಯಲು ಹಲವು ಕ್ರಮ ಜರುಗಿಸುವುದಾಗಿ ಪಾಲಿಕೆ ಇಂಜಿನಿಯರ್ ತಿಳಿಸಿದರು.
ನದಿಗೆ ನೇರವಾಗಿ ಸೇರದಿರುವಂತೆ ಮತ್ತೊಂದು ಸರ್ವೆ ನಡೆಸಲು ಡಿಸಿ ಸೂಚಿಸಿದರು. ಪಲ್ಯೂಷನ್ ಬೋರ್ಡ್ ನವರು ಎಲ್ಲೆಲ್ಲಿ ನದಿಗೆ ಸೇರಲಿದೆ ಅದನ್ನ ಗುರುತಿಸಿ ಮತ್ತೆ ವರದಿ ನೀಡುವಂತೆ ಸೂಚಿಸಲಾಯಿತು.
ಗ್ರಾಮಾಂತರ ಭಾಗದಲ್ಲಿ ನದಿ ಹರಿಯುವ ಹಳ್ಳಿಗಳಲ್ಲೂ ಗ್ರೇ ವಾಟರ್ ಮತ್ತು ಸೀಪೇಜ್ ವಾಟರ್ ತಡೆಯಲು ಗ್ರಾಮಪಂಚಾಯತ್ ಗೂ ಸೂಚನೆ ನೀಡುವಂತೆ ಜೆಡಿಎಸ್ ಕಾರ್ಯದರ್ಶಿ ಸೋಮಿನಕೊಪ್ಪ ಕಾಂತರಾಜ್ ಆಗ್ರಹಿಸಿದರು.
ನವೆಂಬರ್ ವರೆಗೆ ಲೂಪೋಲ್ ಪತ್ತೆಹಚ್ಚಿ, ಎರಡು ವಾರದಲ್ಲಿ ಮತ್ತೆ ಸಭೆ ನಡೆಸೋಣ. ಪರಿಸ್ಥಿತಿ ಅವಲೋಕಿಸಿ ಮುಂದಿನ ಹೆಜ್ಜೆ ಇಡೋಣ. ಕಾವೇರಿ ಉಳಿಸಿ ಸಮಿತಿ ರಚಿಸಿದ ರೀತಿ ತುಂಗ ಉಳಿಸಿ ಸಮಿತಿ ರಚಿಸೋಣ ಸರ್ಕಾರದ ಅನುಮೋದನೆ ಪಡೆದು ಸಮಿತಿ ರಚಿಸೋಣ ಎಂದು ಡಿಸಿ ಸೂಚಿಸಿದರು.
ನಟ ಅನಿರುದ್ಧ್ ಮಾತನಾಡಿ, ಈ ಎಲ್ಲಾ ಕೆಲಸಕ್ಕೆ ಡೆಡ್ ಲೈನ್ ಹಾಕಿಕೊಳ್ಳೋಣ ಎಂದರು. ಮುಂದಿನ ತಿಂಗಳು ಆ.15 ರ ನಂತರ ಸಭೆ ನಡೆಸೋಣ ಎಙದು ಡಿಸಿ ದಿನಾಂಕ ಫಿಕ್ಸ್ ಮಾಡಿದರು. ಕರ್ನಾಟಕ ನೀರಾವರಿ ಇಲಾಖೆಯ ಎಂಡಿ ರಾಜೇಶ್ ಅಮ್ಮಿನ್ ಭಾವಿಮಠ್ ಉಪಸ್ಥಿತರಿದ್ದರು.
ನಂತರ ಮಾತನಾಡಿದ ನಟ ಅನಿರುದ್ದ್, ನಾವೆಲ್ಲ ಸೇರಿ ತುಂಗ ನದಿ ಉಳಿಸಬೇಕಿದೆ.ನ.1ವರಂ್ಉ ತುಂಗ ಆರತಿ ನಡೆಯುವ ಸಾಧ್ಯತೆ ಇದೆ. ಪ್ರತಿದಿನ ಸಂಜೆ ತುಂಗ ಆರತಿ ನಡೆಯಲಿ. ಇದು ಪ್ರವಾಸಿಗರನ್ನ ಸೆಳೆಯಬಹುದು. ಸ್ವಚ್ಛತೆ ಬಗ್ಗೆ ಪಟ್ಟಿಯನ್ನೇ ಚರ್ಚಿಸಲಾಗಿದೆ. ನಾವು ಮುಂದಿನ ಪೀಳಿಗೆಗೆ ಅನುಕೂಲವಾಗಲಿ ಎಂದು ಆಶಿಸಿದರು.
ಇದನ್ನೂ ಓದಿ-https://suddilive.in/archives/19007