ಎರಡೂ ಪಕ್ಷದ ಹಗರಣವನ್ನ ಸಿಬಿಐಗೆ ಕೊಟ್ಟು ರಾಜ್ಯ ಸರ್ಕಾರ ಹೆಸರು ಉಳಿಸಿಕೊಳ್ಳಲಿ-ಈಶ್ವರಪ್ಪ

ಮಾಜಿ ಡಿಸಿಎಂ ಈಶ್ವರಪ್ಪ ಸುದ್ದಿಗೋಷ್ಠಿ

ಸುದ್ದಿಲೈವ್/ಶಿವಮೊಗ್ಗ


ನಾಳೆ ಇಬ್ಬರು ಮಂತ್ರಿಗಳ ಭೇಟಿ ಮಾಡುತ್ತಿದ್ದು, ಹಲವು ವರ್ಷಗಳಿಂದ ಬಾಕಿ ಉಳಿದಿರುವ ಬಡವರ  4000 ಮನೆಗಳನ್ನ ಪೂರ್ಣಗೊಳಿ ಹಂಚಬೇಕು ಎಂದು ಜಮೀರ್ ಅಹ್ಮದ್ ರನ್ನ ಭೇಟಿ ಆಗಲಿದ್ದೇನೆ ಹಾಗೂ ಶಿವಮೊಗ್ಗಕ್ಕೆ ಬನ್ನಿ ಎಂದು ಆಹ್ವಾನಿಸುತ್ತಿರುವುದಾಗಿ ಮಾಜಿ ಡಿಸಿಎಂ ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಕಟ್ಟಡ ಕಾರ್ಮಿಕರ 10,632 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ  ವೇತನ,  ವೈದ್ಯಕೀಯ ಧನ ಸಹಾಯ, ಅಪಘಾತದಲ್ಲಿ ಮರಣ ಹೊಂದಿದವರಿಗೆ ಧನಸಹಾಯಗಳು ಸೇರಿ ಹಲವು ಯೋಜನೆಗಳಿಗೆ ಹಣ ಬಿಡುಗಡೆ ಆಗಲಿಲ್ಲ. ಹಾಗಾಗಿ ಜು.27 ರಂದು ಜಮೀರ್ ಮತ್ತು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ರನ್ನ ಭೇಟಿ ಮಾಡುವೆ ಎಂದರು.


ಅವ್ಯವಹಾರದ ಬಗ್ಗೆ ವಿಧಾನ ಮಂಡಲ ಮತ್ತು ಹೊರಗಡೆ ಚರ್ಚೆ ಆಗತಾ ಇದೆ.  ಮೂಡಾ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಬಗ್ಗೆ ಚರ್ಚೆ ಆಗ್ತಾ ಇದೆ. ಬಿಜೆಪಿ ಮತ್ತು ಕಾಂಗ್ರೆಸ್ ನ ಹಗರಣವನ್ನ ಸಿಬಿಐಗೆ ಕೊಡಬೇಕು ಎಂದು ಆಗ್ರಹಿಸಿದರು.


ಒಬ್ಬರಿಗೊಬ್ಬರು ಮೇಲೆ ಆಪಾದನೆ ಬೇಡ. ಭೋವಿ ಅಭಿವೃದ್ಧಿ ನಿಗಮದ್ದೂ ಹಗರಣ ಹೊರಗೆ ಬಂದಿದೆ ಪ.ಜಾ.ಮತ್ತು ಪ.ವದವರ ಹಗರಣ ಮೂಡಾದಲ್ಲಿನ ಹಗರಣ ರಾಜ್ಯ ತಲೆತಗ್ಗಿಸುವಂತಾಗಿದೆ. ಎರಡೂ ಪಕ್ಷ ಅಧಿಕಾರದಲ್ಲಿರುವಾಗ ನಡೆದ ಹಗರವನ್ನ ಸಿಬಿಐಗೆ ವಹಿಸಿದರೆ ಭ್ರಷ್ಠರು ಹೊರಗೆ ಬರ್ತಾರೆ  ಎಂದರು

ಇದನ್ನೂ ಓದಿ-https://www.suddilive.in/2024/07/blog-post_855.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು