ಸಂರಕ್ಷಣ ಆಪ್ ನ್ನ ಸರಿಪಡಿಸಿ-ರಾಜಾರಾಮ್ ಆಗ್ರಹ

ರಾಜಾರಾಮ್ ಸುದ್ದಿಗೋಷ್ಠಿ


ಸುದ್ದಿಲೈವ್/ಶಿವಮೊಗ್ಗ


ರೈತರ ಬೆಳೆ ವಿಮೆಗಾಗಿ ಚಾ್ತಿಯಲ್ಲಿರುವ ಸಂರಕ್ಷಣ ಆಪ್ ಸರಿಯಾಗಿ ಕಾರ್ಯ ನಿರ್ವಹಿಸುತ್ತುತ್ತಿಲ್ಲ ಎಂದು ಜೆಡಿಎಸ್ ನ ರಾಜಾರಾಮ್ ಸುದ್ದಿಗೋಷ್ಠಿಯಲ್ಲಿ ಆಕ್ಷೇಪಿಸಿದ್ದಾರೆ.


ಬೆಳೆ ವಿಮೆಗಾಗಿ ಕೇಂದ್ರ ಸರ್ಕಾರ ಸಂರಕ್ಷಣ ಆಪ್ ನಲ್ಲಿ ಭರ್ತಿ ಮಾಡಬೇಕು. ಭೂಮಿ ಮತ್ತು ಫ್ರೂಟ್ ಎಂಬ ವರ್ಗವಿದೆ. ಭೂಮಿಯಲ್ಲಿ ಪಹಣಿ, ಸರ್ವೆ ನಂಬರ್ ಗಳನ್ನ ತುಂಬಿದರೆ,  ಪ್ರೂಟ್ ವಿಭಾಗದಲ್ಲಿ ಬೆಳೆಗಳನ್ನ ತುಂಬ ಬೇಕಿದೆ. ಇದಕ್ಕೆ ಜು.30 ಬೆಳೆ ವಿಮೆಗೆ ಅರ್ಜಿ ಹಾಕಲು ಕೊನೆಯ ದಿನವಾಗಿದ್ದು, ಅದು ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡ ಬೇಕಿರುವುದರಿಂದ ಓಪನ್ ಆಗ್ತಾ ಇಲ್ಲ ಎಂಬುದು ಅವರ ಆರೋಪವಾಗಿದೆ. 


ಹಾಗಾಗಿ ರೈತರಿಗೆ ಬೆಳೆ ವಿಮೆ ಅಪಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ  ಕೊನೆಯ ದಿನಾಂಕವನ್ನ  ವಿಸ್ತರಿಸ ಬೇಕು ಮತ್ತು ಸಂರಕ್ಷಣ ಆಪ್ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುವಂತೆ ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ.


ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ಸಹ  ಹಣ ಕೊಡಬೇಕು. ರಾಜ್ಯ ಸರ್ಕಾರದ ಬಳಿ ಹಣವಿಲ್ಲದ ಕಾರಣ ಸಂರಕ್ಷಣ ಆಪ್ ನ್ನ ನಿಷ್ಕ್ತಿಯಗೊಳಿಸಿರುವ ಅನುಮಾನವಿದೆ ಎಂದು ಆಕ್ಷೇಪಿಸಿದರು. ಅವಧಿ ವಿಸ್ತಾರವಾಗಬೇಕು. ಮತ್ತು ಯಾವ ಬೆಳೆ ಎಂಬ ವರ್ಗ ಖಾಲಿ ಬಿಡಲಾಗಿದೆ. ತೋಟಗಾರಿಕೆ ಇಲಾಖೆಯವರು ಸರಿ ಮಾಡಿ ಅಂತರ್ಜಾಲದಲ್ಲಿ ಬಿಡಬೇಕು ಎಂದು ಆಗ್ರಹಿಸಿದ್ದಾರೆ.


ಚಿಕ್ಕ‌ಮಗಳೂರು ಮತ್ತು ಶಿವಮೊಗ್ಗದಲ್ಲಿ ಮಳೆ ಹೆಚ್ಚಾಗಿದೆ. ಅಡಿಕೆ, ಶುಂಠಿ, ಮೆಣಸಿಗೆ ಮತ್ತು 6 ತಿಂಗಳ ಬೆಳೆಗೆ ವಿಮೆಗೆ ಅವಕಾಶವಿದೆ. ವೆಬ್ ಸೈಟ್ ನ್ನೇ ವೀಕ್ ಮಾಡಲಾಗಿದೆ. ಸರಿ ಮಾಡಬೇಕು‌ ಎಂದು ಆಗ್ರಹಿಸಿದರು. 

ಇದನ್ನೂ ಓದಿ-https://www.suddilive.in/2024/07/blog-post_285.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close