ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಆಯನೂರು ಹಣಗೆರೆಕಟ್ಟೆ ರಸ್ತೆಯ ಬೆಂಡೆಮಟ್ಟಿ ಕ್ರಾಸ್ ನ ಚರಂಡಿಯಲ್ಲಿ ಅನಾಮಧೇಯ ಗಂಡಸ್ಸಿನ ಶವವೊಂದು ದೊರೆತಿದೆ.
ಕೈಕಾಲು ತುಂಡಾಗಿದ್ದು, ಶವ ಒಂದು ವಾರದ ಬಳಿಕ ದೊರೆತಿದೆ. ಪ್ರಾಣಿಗಳು ಕಚ್ಚಿ ಎಳೆದಿದ್ದರಿಂದ ಕೈಕಾಲು ತುಂಡಾಗಿರಬಹುದು ಎಂದು ಶಂಕಿಸಲಾಗಿದೆ. ಇಂದು ಬೆಳಿಗ್ಗೆ ಕೊಟ್ಟಿಗೆಗೆ ಸೊಪ್ಪು ತರಲು ಹೋಗಿದ್ದ ಗ್ರಾಮಸ್ಥರಿಗೆ ಈ ಶವ ಕಂಡು ಬಂದಿದೆ.
ಎಡಗೈ ಮಣಿಕಟ್ಟಿನ ಮೇಲೆ ತ್ರಿಶೂಲ ಮತ್ತು ಓಂ ಎಂಬ ಹಚ್ಚೆ ಕಂಡು ಬಂದಿದೆ. ಈ ಶವದ ಬಗ್ಗೆ ಆಯನೂರಿನ ಗ್ರಾಮಸ್ಥರಿಗೆ ಗುರುತು ಪತ್ತೆಯಾಗಿಲ್ಲ. ಸುಮಾರು 50-60 ವರ್ಷದ ಶವ ಇದಾಗಿರುವುದಾಗಿ ಅಂದಾಜಿಸಲಾಗಿದೆ.
ಇದನ್ನೂ ಓದಿ- https://www.suddilive.in/2024/07/10377.html