ಸುದ್ದಿಲೈವ್/ಶಿವಮೊಗ್ಗ
ವಾಲ್ಮೀಕಿ ಅಭಿವೃದ್ಧಿ ಹಗರಣ ಕಾಂಗ್ರೆಸ್ ಮುಖ ಕಳಚಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯಪ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಗೇಂದ್ರ ಅವರನ್ನ ಅರೆಸ್ಟ್ ಮಾಡಲಾಗಿದೆ. ಹಗರಣ ನಡೆದಿರೋದು ನೋಡಿದ್ರೆ ಹಣ ಬೇರೆ ರಾಜ್ಯದ ಚುನಾವಣೆಗೆ ಬಳಕೆಯಾಗಿರುವುದು ಗೊತ್ತಾಗ್ತಾ ಇದೆ. ಈ ಹಗರಣ ದಲ್ಲಿ ಸಿಎಂ ಡಿಸಿಎಂ ಪಾತ್ರ ಇದೆ ಅನ್ನೋದು ಸ್ಪಷ್ಟ ವಾಗಿದೆ ಎಂದರು.
ಎಸ್ ಐ ಟಿ ಅಧಿಕಾರಿಗಳನ್ನೇ ಈ ಪ್ರಕರಣ ದಲ್ಲಿ ವಿಚಾರಣೆಗೆ ಒಳಪಡಿಸಬೇಕು. ಪ್ರಮುಖ ಆರೋಪಿ ವರ್ಮಾ ಅವರ ಮೊಬೈಲ್ ಪತ್ತೆಯಾಗಿಲ್ಲ.ಮೊಬೈಲ್ ಪತ್ತೆಯಾದ್ರೆ ಯಾರು ಯಾರಿಗೆ ಎಷ್ಟು ಹಣ ಕೊಟ್ಟಿದ್ದಾರೆ ಗೊತ್ತಾಗುತ್ತದೆ. ಇದು ನಿಜವಾಗಿಯೂ ಎಲ್ಲರು ತಲೆತಗ್ಗಿಸುವ ಹಗರಣ ಎಂದರು.
ಕನ್ನಡ ನಾಡಿಗೆ ಇದೊಂದು ಕಳಂಕದ ತರುವ ಹಗರಣ ಆಗಿದೆ. ಯಾವ ದಲಿತರ ಅಭಿವೃದ್ಧಿ ಗೆ ಇಡಲಾಗಿದ್ದ ಹಣವನ್ನ ಹೊಡೆದು ತಿಂದಿದ್ದಾರೆ.ಸಿಎಂ ಹಾಗೂ ಡಿಸಿಎಂಗೆ ಮಾನ ಮಾರ್ಯದೆ ಇದ್ರೆ ಕೂಡಲೇ ರಾಜೀನಾಮೆ ನೀಡಬೇಕು ಎಂದರು.
ಇದೊಂದು ದೊಡ್ಡ ಹಗರಣ ಅವರಿಗೆ ಗೊತ್ತಿಲ್ಲದೇ ಆಗಿಲ್ಲ.ಹಾಗಾಗಿ ತನಿಖೆ ಮುಗಿಯುವರೆಗೂ ಸಿಎಂ ಹಾಗೂ ಡಿಸಿಎಂ ರಾಜೀನಾಮೆ ನೀಡಬೇಕು. ನಾಟಕೀಯವಾಗಿ ಕಾಂಗ್ರೆಸ್ ನಾಯಕರು ಅಧಿಕಾರ ನಡೆಸುತ್ತಿದ್ದಾರೆ ಎಂದರು.
ಮೂಡ ಹಗರಣ ವಿಚಾರ
ಮೂಡ ಸೈಟ್ ಹಂಚಿಕೆ ವಿಚಾರದಲ್ಲಿ ಇದುವರೆಗೂ ಸಿಎಂ ಸಿದ್ದರಾಮಯ್ಯ ನನ್ನ ಮೇಲೆ ಒಂದು ಕಪ್ಪು ಚುಕ್ಕೆ ಇಲ್ಲ ಅಂತಾ ಓಡಾಡುತ್ತಿದ್ದರು.ಇವಾಗ ಅಡ್ಡಡ್ಡ ಸಿಕ್ಕಿಹಾಕಿಕೊಂಡಿದ್ದಾರೆ. 3 ಎಕರೆ 62 ಅಂತಾ ಹೇಳ್ತಾ ಇದ್ದಾರೆ. ಅಷ್ಟೊಂದು ಬೆಲೆ ಎಲ್ಲಿದೆ ಅವರೇ ಹೇಳಬೇಕು ಎಂದರು.
ಈ ಹಗರಣದಲ್ಲಿ ಸಿಎಂ ಭಾಗಿಯಾಗಿದ್ದಾರೆ.ಈ ಪ್ರಕರಣ ವನ್ನ ಸಿಬಿಐ ಗೆ ವಹಿಸಬೇಕು. ಸಿಎಂ ಮೇಲೆ ಎಸ್ ಐ ಟಿ ತನಿಖೆ ಸರಿಯಲ್ಲ. ಹಾಗಾಗಿ ಸಿಬಿಐಗೆ ತನಿಖೆ ವಹಿಸಬೇಕು. ಸಿಬಿಐಗೆ ಕೊಟ್ಟು ವರದಿ ಬರುವರೆಗೂ ಸಿಎಂ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ-https://suddilive.in/archives/19243