ಖಾಲಿ ಇರುವ ಐಟಿಐ ಸೀಟ್‍ಗಳ ನೇರ ಪ್ರವೇಶಕ್ಕೆ ಅರ್ಜಿ ಆಹ್ವಾನ

ಸುದ್ದಿಲೈವ್/ಶಿವಮೊಗ್ಗ

ಶಿಕಾರಿಪುರ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆಯು 2024-25ನೇ ಸಾಲಿನ ಖಾಲಿ ಇರುವ ಸೀಟ್‍ಗಳ ನೇರ ಪ್ರವೇಶಕ್ಕಾಗಿ ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಎಲೆಕ್ಟ್ರೀಷಿಯನ್ -16, ಫಿಟ್ಟರ್-23, ಟರ್ನರ್ -17, ಮೆಕ್ಯಾನಿಕ್ ಮೋಟಾರ್ ವೆಹಿಕಲ್-24, ವೆಲ್ಡರ್(ಪಿಪಿಪಿ)-40, ಹಾಗೂ ಉದ್ಯೋಗ ಯೋಜನೆಯಡಿ ಲಭ್ಯವಿರುವ ಆಡ್ವಾನ್ಸ್ ಸಿಎನ್‍ಸಿ ಮೆಷಿನಿಂಗ್-24, ಬೆಸಿಕ್ ಡಿಸೈನರ್ & ವರ್ಚುಯಲ್ ವೆರಿಫೈಯರ್ (ಮೆಕ್ಯಾನಿಕಲ್)-24,

ಇಂಡಸ್ಟ್ರೀಯಲ್ ರೋಬೋಟಿಕ್ಸ್ & ಡಿಜಿಟಲ್ ಮ್ಯಾನಿಫ್ಯಾಕ್ಚರಿಂಗ್ ಟೆಕ್ನಿಷಿಯನ್ -40, ಆರ್ಟಿಸನ್ ಯೂಸಿಂಗ್ ಅಡ್ವಾನ್ಸ್ ಟೂಲ್-20, ಮ್ಯಾನಿಫ್ಯಾಕ್ಚರಿಂಗ್ ಪ್ರೋಸಸ್ ಕಂಟ್ರೋಲ್ & ಆಟೋಮಿಷನ್ -40 ವೃತ್ತಿಗಳ 2 ವರ್ಷಗಳ ತರಬೇತಿಗಾಗಿ ಒಟ್ಟು ಖಾಲಿ ಇರುವ 268 ಸೀಟ್‍ಗಳ ಪ್ರವೇಶಕ್ಕೆ ನೇರವಾಗಿ ಅರ್ಜಿ ಸಲ್ಲಿಸಿ, ದಾಖಲಾತಿ ಪರಿಶೀಲನೆ ಮಾಡಿಸಿಕೊಂಡು ಪ್ರವೇಶ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08187-295040 ನ್ನು ಸಂಪರ್ಕಿಸಬಹುದಾಗಿದೆ.

ಇದನ್ನೂ ಓದಿ-https://suddilive.in/archives/19355

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close