ಡೆಂಗ್ಯೂ ನಿಯಂತ್ರಣ ಸಭೆಯಲ್ಲಿ ಶಾಸಕ ಚೆನ್ನಬಸಪ್ಪ ಹಲವು ಸಲಹೆ

ಸುದ್ದಿಲೈವ್/ಶಿವಮೊಗ್ಗ

ಪಾಲಿಕೆಯಲ್ಲಿ ನಡೆದ ಡೆಂಗೀ ಜ್ವರ ನಿಯಂತ್ರಣ ಸಭೆಯಲ್ಲಿ ಪಾಲಿಕೆ ಹೆಲ್ತ್ ಇನ್ ಸ್ಪೆಕ್ಟರ್ ಅವರ ಅಂಕಿ ಅಂಶದ ಬಗ್ಗೆ ಶಾಸಕ ಚೆನ್ನಬಸಪ್ಪ ಆಕ್ಷೇಪಿಸಿದ್ದಾರೆ. ಹೆಲ್ತ್ ಇನ್ ಸ್ಪೆಕ್ಟರ್ ರವರು ಸಭೆಯಲ್ಲಿ ಔಷಧಿ ಸಂಪಡಣೆಯನ್ನ ನಗರದಲ್ಲಿ ನಾಲ್ಕು ಮಿಷನ್ ಮೂಲಕ 35 ವಾರ್ಡ್ ನಲ್ಲೂ ಸ್ಪ್ರೇ ಹೊಡೆದಾಗಿದೆ ಎಂದು ಹೇಳಿರುವ ಬಗ್ಗೆ ಶಾಸಕರು ಆಕ್ಷೇಪಿಸಿದ್ದಾರೆ.

ಅಧಿಕಾರಿ ಅಮೋಘ್ ಅವರು 9 ವಾರ್ಡ್ ಗೆ ಒಂದು ಮಿಷಿನ್ ನಂತೆ 35 ವಾರ್ಡ್ ನಲ್ಲಿ ನಾಲ್ಕು ಮಿಷನ್ ನಲ್ಲಿ ಸ್ಪ್ರೇ ಮಾಡಲಾಗಿದೆ ಎಂದರು. ಈ ಬಗ್ಗೆ ಸಂಪೂರ್ಣ ಮುಗಿದಿರುವ ಬಗ್ಗೆ ಆಕ್ಷೇಪಿಸಿದ ಶಾಸಕರು ಎಲ್ಲಾ ವಾರ್ಡ್ ಗಳಲ್ಲಿ ಔಷಧ ಸಿಂಪಡಣೆ ಮುಗಿದಿದೆ ಎಂಬುದು ನಂಬಲು ಸಾಧ್ಯವಿಲ್ಲ. 9 ವಾರ್ಡ್ ಮುಗಿಸಲು ಎಷ್ಟು ಸಮಯ ಬೇಕು ಗೊತ್ತಾ ಎಂದು ಹೆಲ್ತ್ ಇನ್ ಪೆಕ್ಟರ್ ಗೆ ಪ್ರಶ್ನಿಸಿದರು.

ನೀವು ಸಿಂಪಡಣೆ ಆರಂಭಿಸಿದ್ದೀರಿ. ಒಪ್ಪುತ್ತೇನೆ. ನೀವು ಹಗಲು ರಾತ್ರಿ ಕೆಲಸ ಮಾಡಿದ್ದೀರಿ. ಕೊರೋನ, ಪ್ರವಾಹ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಆದರೆ 35 ವಾರ್ಡ್ ನಲ್ಲಿ ಡೆಂಗ್ಯೂ ವಿಚಾರದಲ್ಲಿ ಸಿಂಪಡಣೆ ಆಗಿದೆ ಎಂಬುದು ಸರಿಯಲ್ಲ. ಮೂರು ರೀತಿ ಸಿಂಪಡಣೆ ಮಾಡಬೇಕು. ಒಂದು ವಾರದಲ್ಲಿ ಏನು ಮಾಡಬಹುದು ಯೋಚಿಸಿ ಅಧಿಕಾರಿಗಳು ಕಾರ್ಯೋನ್ಮುಖರಾಗಿ ಎಂದು ಶಾಸಕರು ಹೇಳಿದರು.

ಸಾರ್ವಜನಿಕರ ಸಹಕಾರ ಬೇಕು ಎನ್ನುತ್ತೀರಿ ಸಂಘ ಸಂಸ್ಥೆಗಳ ಸಭೆಕರೆದಿಲ್ಲವೇಕೆ ಎಂದು ಪ್ರಶ್ನಿಸಿದ ಶಾಸಕರು. ನಾನು ಕರೆಯಬೇಕೆಂದರೆ ಕರೆಯಲು ಸಿದ್ದ. ಈ ಹಿಙದೆ ಪಾಲಿಕೆಯಲ್ಲೇ ಸಂಘ ಸಂಸ್ಥೆಗಳ ಪಟ್ಟಿ ತಯಾರಿಸಲಾಗಿತ್ತು. ಅವರ ಸಭೆ ಕರೆಯಿರಿ. ಸಹಕಾರ ಕೇಳಿ ಏನೂ ತಪ್ಪಿಲ್ಲ. ನಾಳೆದಿನ  ನಗರದಲ್ಲಿ ವ್ಯತ್ಯಾಸವಾದರೆ ಯಾರೂ ಕ್ಷಮಿಸೊಲ್ಲ. ಎಲ್ಲಾ ವಿಷಯವನ್ನೂ ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಿ ಎಂದು ಪಾಲಿಕೆ ಆರೋಗ್ಯ ಇಲಾಖೆಯ ನಿರೀಕ್ಷಕರಿಗೆ ಸಲಹೆ ನೀಡಿದರು‌

ಪಾಲಿಕೆ ನಲ್ಮ್ ಸೇರಿಸಿಕೊಳ್ಳಿ, ಟಾಸ್ಕ್ ಫೋರ್ಸ್ ರಚಿಸಿಕೊಳ್ಳಿ, ಗಣಪತಿ ಪೆಂಡಾಲ್ ಸಮಿತಿ, ಸ್ತ್ರೀ ಶಕ್ತಿ ಸೇರಿಸಿಕೊಳ್ಳಿ, ಒಂದು ವಾರದಲ್ಲಿ ಏನು ಕ್ರಮ ಕೈಗೊಳ್ಳಲು ಸಾಧ್ಯವಿದೆ ಯೋಚಿಸಿ ಕಾರ್ಯೋನ್ಮುಖರಾಗಿ. ಮೆಗ್ಗಾನ್ ಆಸ್ಪತ್ರೆಯಲ್ಲಿ ಬಹಳ ಸಮಸ್ಯೆ ಇದೆ. ರೋಗಿಗಳ ಅಂಕಿ ಸಂಖ್ಯೆಗಳು ವ್ಯತ್ಯಾಸವಿದೆ. ಮುಚ್ಚಿಡಬೇಡಿ‌ ಪ್ರಕರಣದ ಬಗ್ಗೆ ಪಾರದರ್ಶಕವಾಗಿರಿ ಎಂದು ಸಭೆಗೆ ತಿಳಿಸಿದರು.

ಬಾಪೂಜಿ ನಗರದಲ್ಲಿ 200 ಜನಕ್ಕೆ ಶರಾವತಿ ನಗರದಲ್ಲಿ 50 ಜನರಿಗೆ ಏಕಾಏಕಿ ವಾಂತಿ ಭೇಧಿ ಶುರುವಾಗಿತ್ತು. ಆದರೆ ಅಂಕಿ ಅಂಶ ಮಾತ್ರ ಬೇರೆ ರೀತಿ ನೀಡಲಾಗಿತ್ತು. ಏನು ಸಹಾಯ ಬೇಕು ಅದಕ್ಕೆ ಸದಾ ನಿಮ್ಮೊಂದಿಗೆ ನಾನಿರುವೆ. ಹಣಕ್ಕೆ ಪಾಲಿಕೆ ಆಯುಕ್ತರು ತಲೆಕೆಡೆಸಿಕೊಳ್ಳಬೇಡಿ ಎಷ್ಟು ಬೇಕು ಅಷ್ಟು ಹಣಕೊಡಿ ಎಂದು ಶಾಸಕರು ಸಲಹೆ ನೀಡಿದರು.

ಮೊದಲಿಗೆ ಡಿಹೆಚ್ ಒ ಡಾ.ನಟರಾಜ್ ಮಾತನಾಡಿ, ನಗರದಲ್ಲಿ 54 ಡೆಂಗ್ಯೂ ಪ್ರಕರಣ ಮತ್ತು 2 ಝಿಕಾ ಕಾಯಿಲೆಗಳು ಪತ್ತೆ ಆಗಿವೆ. ಗಾಂಧಿನಗರದ ನಿವಾಸಿಗೆ  ಇತರೆಕಾಯಿಲೆ ಜೊತೆ ಝಿಕಾ ಕಾಯಿಲೆ ಪತ್ತೆಯಾಗಿತ್ತು. ಹಾಗಾಗಿ ಅವರು ಸಾವುಕಂಡಿದ್ದಾರೆ. ಓರ್ವ ಗುಣಮುಖರಾಗಿದ್ದಾರೆ. ಡೇಂಗ್ಯೂಗೆ ತಾಳಗುಪ್ಪದಲ್ಲಿ ಒಂದು ಸಾವಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 3340 ಡೆಂಗ್ಯೂ ಪರೀಕ್ಷೆ ನಡೆದಿದೆ. ಇದರಲ್ಲಿ  315 ಡೆಂಗ್ಯೂ ಪಾಸಿಟಿವ್ ಪತ್ತೆಯಾಗಿದೆ.  ನಗರದಲ್ಲಿ 471 ಜನರನ್ನ ಪರೀಕ್ಷೆ ಒಳಪಡಿಸಲಾಗಿದೆ. ಇದರಲ್ಲಿ 54 ಡೆಂಗ್ಯೂ ಪತ್ತೆಯಾಗಿದೆ. ಪ್ರತಿ ಮನೆಯ ಸರ್ವೆಗೆ, ಮೈತ್ರಿ ಕಾಲೇಜು, ನಂಜಪ್ಪ ಲೈಫ ಕೇರ್, ಫಾದರ್ ಮುಲ್ಲರ್ ಇತರೆ ಕಾಲೇಜಿನ ವಿದ್ಯಾರ್ಥಿಗಳನ್ನ ಮನೆ ಮನೆ ಸರ್ವೆಗೆ ತೆಗೆದುಕೊಳ್ಳಲಾಗಿದೆ. ಎನ್ ಎಸ್ ಎಸ್ ಸ್ಟ್ಯೂಡೆಂಟ್ ನ ಸರ್ವೆಗೆ ತೆಗೆದುಕೊಳ್ಳಲಾಗುತ್ತಿದೆ. ಇವರುಗಳು ಇನ್ಸೆಟಿವ್ ಕೇಳುತ್ತಿದ್ದಾರೆ ಎಂದು ಸಭೆಗೆ ತಿಳಿಸಿದರು.

ಇದಕ್ಕೆ ಆಹಾರ ಇಲಾಖೆಯ ಜಿಲ್ಲಾ ಸರ್ವಲೈನ್ಸ್ ಅಧಿಕಾರಿ ಗುಡದಪ್ಪ ಮಾತನಾಡಿ, ವಾಲೆಂಟೈರ್ ಗಳು ಇನ್ಸೆಟಿವ್ ಮತ್ತು ಆಹಾರ ಕೇಳುತ್ತಿದ್ದಾರೆ. 100 ರೂ ಇನ್ಸೆಟಿವ್ ಕೊಡಲು ಯೋಚಿಸಲಾಗಿದೆ. ವಾಹನದ ವ್ಯವಸ್ಥೆ ಮತ್ತು ಇಂಡಿಸ್ ಮಸ್ಕ್ಯೂಟೋ ಮನೆಯೊಳಗೆ ಇರುವುದರಿಂದ ಇನ್ ಡೋರ್ ಫಾಗಿಂಗ್ ಆಗಬೇಕು. ಹೂವಿನ ಕುಂಡದಿಂದ ಸೊಳ್ಳೆ ಕಾಣ್ತಾತಿದೆ. ಖಾಲಿ ನಿವೇಶನದಲ್ಲಿ ಸೊಳ್ಳೆ ಕಾಣ್ತಿದೆ. ಸ್ಮಾರ್ಟ್ ಸಿಟಿಯಲ್ಲಿ ಸಿಮೆಂಟ್ ಬ್ಲಾಕ್ ನಲ್ಲಿ ಹೋಲ್ ಗಳಿವೆ ಇಲ್ಲೂ ಸೊಳ್ಳೆ ಕಾಣ್ತಾ ಇದೆ. ಇದನ್ನ ಪಾಲಿಕೆಯ ಗಮನಕ್ಕೆ ತರಲಾಗಿದೆ ಎಂದರು.

ಸಾರ್ವಜನಿಕರು ಸಹಕಾರ ಸಿಗ್ತಾ ಇಲ್ಲ. ಫ್ರಿಡ್ಜ್ ನ ಟ್ರೇಗಳಲ್ಲೂ ನೀರು ಸಂಗ್ರಹವಾಗುಬುದರಿಂದ ಲಾರ್ವ ಕಂಡು ಬರುತ್ತಿದೆ. ಆದರೆ ಬಹಳ ಜನ ಮನೆಯೊಳಗೆ ಆರೋಗ್ಯ ಕಾರ್ಯಕರ್ತರನ್ನ ಬಿಡೊಲ್ಲ. ಪ್ರತಿ ಶುಕ್ರವಾರ ಡ್ರೈಡೇ ಆಚರಿಸಬೇಕು. ಸ್ವಯಂ ಕೃತವಾಗಿ ನಡೆಯಬೇಕು ಎಂದು ಡಾ.ಗುಡದಪ್ಪ ಸಭೆಗೆ ತಿಳಿಸಿದರು.

ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಮಾತನಾಡಿ, ಪ್ರಾಯಕ್ಕೆ ಬಂದ ಸೊಳ್ಳೆಯನ್ನ ಫಾಗಿಂಗ್ ಮೂಲಕ ನಿರ್ಮೂಲನೆ ಮಾಡಿದರೂ. ಲಾರ್ವಾ ವ್ಯವಸ್ಥೆಯಲ್ಲಿರುವ ಸೊಳ್ಳೆ ಸಾಯುತ್ತಿಲ್ಲ ಎನ್ನುತ್ತಿದ್ದಾರೆ.‌ ನಾಲ್ಕು ತಿಂಗಳು ನಿಯಂತ್ರಣಕ್ಕೆ ಒತ್ತು ನೀಡಬೇಕು. ಬೈಲಾರ್ ಸ್ಪ್ರೇ ಮಾಡಲಾಗುತ್ತಿದೆ. ನಾಲ್ಕು ವಾಹನದಲ್ಲಿ ಸ್ಪ್ರೈ ಮಿಷನ್ ಇದೆ ಎಲ್ಲಾ ವಾರ್ಡ್ ಗೂ ಆಗಿದೆ ಎಂದರು.

ಶಿವಮೊಗ್ಗ ಜಿಲ್ಲಾ ಸರ್ಜನ್ ಸಿದ್ದನಗೌಡ ಮಾತನಾಡಿ ಮೆಗ್ಗಾನ್ ನಲ್ಲಿ  ಪ್ಲೇಟ್ ಲೇಟ್ಸ್ ಸಾನಲ್ಲಿ ಸಾಕಷ್ಟಿದೆ ಅದಕ್ಕೆ ಮೂರು ದಿನ ಮಾತ್ರ ಅವಧಿ ಇರುತ್ತದೆ. 40-30 ಯುನಿಟ್ ಬೇಕಿದೆ. ಸಧ್ಯಕ್ಕೆ ಮೆಗ್ಗಾನ್ ವೈರಲ್ ವಾರ್ಡ್ ನಲ್ಲಿ  31 ರೋಗಿಗಳಿದ್ದು ಇವರಿಗೆ ಪ್ಲೇಟ್ ಲೇಟ್ ಕಡಿಮೆ ಆಗಿದೆ. ಆದರೆ ಡೇಂಗ್ಯೂ ಪಾಸಿಟಿವ್ ಇಲ್ಲ.ಐದು ಜನರಿಗೆ ಪಾಸಿಟಿವ್ ಬಂದಿದೆ. ವಿಆರ್ ಡಿಎಲ್ ಲ್ಯಾಬ್ ನಲ್ಲಿ 1347 ಜನರಿಗೆ  ಪರೀಕ್ಷೆ ನಡೆಸಿದಾಗ 510 ಪಾಸಿಟಿವ್ ಬಂದಿದೆ. ಇವರೆಲ್ಲಾ ಆಸ್ಪತ್ರೆಗೆ ಬಂದು ಹೋಗ್ತಾರೆ ಇವರನ್ನ ಟ್ರೇಸ್ ಮಾಡಲಾಗುತ್ತಿಲ್ಲ ಎಂದು  ತಿಳಿಸಿದರು.

ಇದನ್ನೂ ಓದಿ-https://suddilive.in/archives/18936

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close