ಫ್ಯಾಕ್ಟರಿ ಕಳ್ಳರ‌ ಬಂಧನ

ನ್ಯೂಟೌನ್ ಪೊಲೀಸರು ಮತ್ತು ಸಿಬ್ಬಂದಿಗಳು


ಸುದ್ದಿಲೈವ್/ಶಿವಮೊಗ್ಗ


ಮಾಚೇನಹಳ್ಳಿಯಲ್ಲಿರುವ ಫ್ಯಾಕ್ಟರಿವೊಂದರ ಏರ್ ವೆಂಟಿಲೇಟರ್ ಮೂಲಕ ಒಳಗೆ ನುಗ್ಗಿ ಸ್ಟೀಲ್ ಕಾಸ್ಟಿಂಗ್ ನ್ನ ಕಳ್ಳತನ ಮಾಡಿಕೊಂಡು ಹೋಗಿದ್ದ ಘಟನೆಗೆ ಸಂಬಙಧಿಸಿದಂತೆ ನ್ಯೂಟೌನ್ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿ ಒಂದು ಟನ್ ಸ್ಟೀಲ್ ಕಾಸ್ಟಿಂಗ್ ಐಟಂಮ್ಸ್ ಮತ್ತು ಕೃತ್ಯಕ್ಕೆ ಬಳಸಿದ ವಾಹನವನ್ನ ವಶಪಡಿಸಿಕೊಂಡಿದ್ದಾರೆ. 


ದಿನಾಂಕಃ 30-06-2024  ರಂದು ರಾತ್ರಿ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾಚೇನಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ರಾಜೇಶ್ವರಿ ಸಿ.ಎನ್.ಸಿ ಮಿಷಿನಿಂಗ್ ಟೆಕ್ನಾಲಜಿ  ಫ್ಯಾಕ್ಟರಿಯ ಏರ್  ವೆಂಟಿಲೇಟರ್ ಮೂಲಕ ಫ್ಯಾಕ್ಟರಿಗೆ ನುಗ್ಗಿ ಸ್ಟೀಲ್ ಕ್ಯಾಸ್ಟ್ರೀಂಗ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 


   ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ ಕೆ, ಐಪಿಎಸ್, ಅಡಿಷನಲ್ ಎಸ್ಪಿ ಅನೀಲ್ ಕುಮಾರ್ ಭೂಮರೆಡ್ಡಿ ಮತ್ತು ಕಾರಿಯಪ್ಪ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ  ನಾಗರಾಜ್ ರವರ ಮೇಲ್ವಿಚಾರಣೆಯಲ್ಲಿ, ನಗರ ಸಿಪಿಐ ಶ್ರೀಶೈಲ್ ಕುಮಾರ್  ರವರ ನೇತೃತ್ವದಲ್ಲಿ ನ್ಯೂಟೌನ್ ಪೊಲೀಸ್ ಠಾಣೆಯ ಪಿಎಸ್ಐ  ಟಿ ರಮೇಶ್  ಮತ್ತು  ಠಾಣೆಯ ಸಿಬ್ಬಂದಿಗಳಾದ ಎಎಸ್ಐ ಟಿ ಪಿ ಮಂಜಪ್ಪ ಸಿಹೆಚ್ ಸಿ ನವೀನ್, ರಾಘವೆಂದ್ರ, ಮತ್ತು ಸಿಪಿಸಿ ಪ್ರಸನ್ನ ರವರನ್ನು ಒಳಗೊಂಡ  ತನಿಖಾ ತಂಡವನ್ನು ರಚಿಸಲಾಗಿತ್ತು. 


ಸದರಿ   ತನಿಖಾ  ತಂಡವು ದಿನಾಂಕಃ 22-07-2024 ರಂದು  ಪ್ರರಕಣದ  ಆರೋಪಿಗಳಾದ 1) ಗಂಗಾಧರ್ ಎಸ್,  28 ವರ್ಷ, ವಾಸ ಜೇಡಿಕಟ್ಟೆ ಹೂಸೂರು, ಭದ್ರಾವತಿ, 2) ಮಹಮದ್ ಇಮ್ರಾನ್ ಖಾನ್, 35 ವರ್ಷ, ಟ್ಯಾಂಕ್ ಮೊಹಲ್ಲಾ, ಶಿವಮೊಗ್ಗ.  3) ಮಹಮದ್ ಹಪೀಜುಲ್ಲಾ, 33 ವರ್ಷ ನಂಜಪ್ಪ ಲೇ ಔಟ್ ಮದಾರಿಪಾಳ್ಯ ರಸ್ತೆ ಶಿವಮೊಗ್ಗ, 4) ಮುಷ್ತಾಕೀಂ @ ಮುಸ್ತು, 22  ವರ್ಷ, ದೊಣಭಘಟ್ಟ ಭದ್ರಾವತಿ ಇವರನ್ನ ಬಂಧಿಸಲಾಗಿದೆ.   

ಆರೋಪಿಗಳಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ  ಅಂದಾಜು ಮೌಲ್ಯ 1,40,000/- ರೂ ಗಳ 1ಟನ್ ತೂಕದ  40 ಸ್ಟೀಲ್ ಕ್ಯಾಸ್ಟೀಂಗ್ ಪೀಸ್ ಗಳನ್ನು ಮತ್ತು ಕೃತ್ಯಕ್ಕೆ ಬಳಸಿದ 5,00,000/- ರೂ ಬೆಲೆಯ ASHOK LAYLAND DOST ವಾಹನವನ್ನು  ಅಮಾನತ್ತು ಪಡಿಸಿಕೊಳ್ಳಲಾಗಿದೆ. 


 ಸದರಿ ತನಿಖಾ ತಂಡದ ಉತ್ತಮವಾದ  ಕಾರ್ಯವನ್ನು  ಮಾನ್ಯ  ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.


ಇದನ್ನೂ ಓದಿ-https://www.suddilive.in/2024/07/blog-post_419.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು