ಇಂದಿನ ಜಲಾಶಯಗಳ ನೀರಿನ ಮಟ್ಟ

 ಸುದ್ದಿಲೈವ್/ಶಿವಮೊಗ್ಗ




ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಲಿಂಗನಮಕ್ಕಿ, ಭದ್ರ ಮತ್ತು ತುಂಗ ನದಿಗಳ ಜಲಾಶಯಗಳಲ್ಲಿ ಒಳಹರಿವುಗಳು ಹೆಚ್ಚಾಗಿವೆ.


ಲಿಂಗನಮಕ್ಕಿಯಲ್ಲಿ ಒಳಹರಿವು ನಿರಂತರವಾಗಿ ಹೆಚ್ಚಾಗಿದೆ. 1794.5 ಅಡಿ ನೀರು ಸಂಗ್ರಹವಾಗಿದೆ. 1791 ಅಡಿ ಸಂಗ್ರಹವಾಗಿದ್ದ ಜಲಾಶಯ ಇಂದು ಮೂರು ಅಡಿ ಏರಿಕೆಯಾಗಿದೆ. ಇದರಿಂದ ಲಿಂನಮಕ್ಕಿ ಜಲಾಶಯಗಳ ಉಪ ಜಲಾಶಯ ಜಲಾಶಯಗಳು ಭರ್ತಿಯಾಗುತ್ತಿವೆ


ಭದ್ರಜಲಾಶಯಕ್ಕೆ  46876 ಕ್ಯೂಸೆಕ್ ನೀರು ಒಳಹರಿವು ಹರಿದು ಬರುತ್ತಿದೆ. ನುನ್ನೆ 157.11 ಅಡಿ ನೀರು ಸಂಗ್ರಹವಾಗಿದ್ದ ಜಲಾಶಯದಲ್ಲಿ ಇಂದು 162.3 ಅಡಿ ನೀರು ಸಂಗ್ರಹವಾಗಿದೆ. 


ತುಂಗ ನದಿಗೆ 70 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು,  ಗಾಜನೂರಿನ ಜಲಾಶಯದಲ್ಲಿ 21 ಗೇಟ್ ತೆರೆದು ನದಿಗೆ ನೀರು ಹರಿಸಲಾಗುತ್ತಿದೆ. 10 ಗೇಟುಗಳನ್ನ 2.5 ಮೀಟರ್ ಎತ್ತರ ಏರಿಸಿದರೆ, ಉಳಿದ 10 ಗೇಟನ್ನ ಎರಡು ಮೀಟರ್ ಏರಿಸಲಾಗಿದೆ. ಉಳಿದ ಒಂದು ಗೇಟನ್ನ ಅರ್ಧ ಮೀಟರ್ ಏರಿಸಿ ನದಿಗೆ ನೀರು ಬಿಡಲಾಗಿದೆ. 

ಇದನ್ನೂ ಓದಿ-https://www.suddilive.in/2024/07/blog-post_263.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close