ಬಿ‌ಸಿ ಪಾಟೀಲರ ಮೊದಲನೇ ಅಳಿಯ ವಿಷ ಸೇವಿಸಿ ಆತ್ಮಹತ್ಯೆ

ಸುದ್ದಿಲೈವ್/ಶಿವಮೊಗ್ಗ

ಮಾಜಿ ಸಚಿವ ಬಿ.ಸಿ ಪಾಟೀಲ್ ಅವರ ಅಳಿಯ ಹೊನ್ನಾಳಿಯಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಮೃತ ದೇಹವನ್ನ ಶಿವಮೊಗ್ಗದ‌ ಮೆಗ್ಗಾನ್ ಗೆ ಸಾಗಿಸಲಾಗಿದೆ.

ಹೊನ್ನಾಳಿಯಲ್ಲಿ ವಿಷ ಸೇವಿಸಿದ ಪಾಟೀಲ ಅವರ ಅಳಿಯ ಪ್ರತಾಪ್ (43) ಅವರ ಅಳಿಯ ಪ್ರತಾಪ್ ಕುಮಾರ್ ಕೆ.ಜಿ ಹೊನ್ನಾಳಿಯ ಬಳಿ ವಿಷ ಸೇವಿಸಿದ್ದಾರೆ.

ಮೊದಲಿಗೆ ಹೊನ್ನಾಳಿ ಖಾಸಗಿ ಆಸ್ಪತ್ರೆಗೆ  ಕರೆದೊಯ್ಯಲಾಗಿದೆ. ವೈದ್ಯರು  ಶಿವಮೊಗ್ಗಕ್ಕೆ ಕರೆದೊಯ್ಯಲು ಸೂಚಿಸಿದ್ದಾರೆ. ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆತರುವಾಗಲೇ ಪ್ರತಾಪ್ ಮಾರ್ಗಮಧ್ಯೆ ಅಸು ನೀಗಿದ್ದಾರೆ.

ಪ್ರತಾಪ್ ಕುಮಾರ್  ಬಿಸಿ ಪಾಟೀಲರ ಮೊದಲನೇ ಅಳಿಯ ಎಂದು ತಿಳಿದು ಬಂದಿದೆ. ಇವರಿಗೆ ಇಬ್ವರು ಅಳಿಯಂದಿರಿದ್ದು ಮೊದಲನೇ ಚನ್ನಗಿರಿ ತಾಲೂಕು ಕತ್ತಲಗೆರೆಯ‌ನಿವಾಸಿ ಪ್ರತಾಪ್ ಆಗಿದ್ದಾರೆ. ಪಾಟೀಲರ ವ್ಯವಹಾರವನ್ನ ನೋಡಿಕೊಳ್ಳುವುದು ಪ್ರತಾಪ್ ಅವರೇ ಆಗಿದ್ದರು.

ಅರಕೆರೆ ಬಳಿ ಪ್ರತಾಪ್ ವಿಷ ಸೇವಿಸಿದ್ದರು.ಮೆಗ್ಗಾನ್ ಮರಣೋತ್ತರ ಪರೀಕ್ಷೆ ಕೇಂದ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜೇಂದ್ರ, ಸಂಸದ ರಾಘವೇಂದ್ರ, ಮಾಜಿ ಸಚಿವ ರೇಣುಕಾಚಾರ್ಯ ಮನನ ಅಜಿ ಸಚಿವ  ಬಿಸಿ ಮಾಟೀಲರನ್ನ  ಭೇಟಿ ಮಾಡಿ ಸಾಂತ್ವಾನ ಹೇಳಿದರು.

ಮಾವ ಬಿ.ಸಿ ಪಾಟೀಲ್ ಮಾತನಾಡಿ ಪ್ರತಾಪ್ ಗೆ ಮಕ್ಕಳಾಗಿರಲಿಲ್ಲ. ಮಕ್ಕಳ ವಿಚಾರದಲ್ಲಿ ಕೊರಗಿತ್ತು. ಮದ್ಯ ವ್ಯಸನ ಪುನರ್ವಸತಿ  ಕೇಂದ್ರಕ್ಜೆ ಸೇರಿಸಲಾಗಿತ್ತು. ಬೆಳಿಗ್ಗೆ ಒಟ್ಟಿಗೆ ತಿಂಡಿ ತಿಂದಿದ್ವಿ. ಊರಿಗೆ ಹೋಗುವುದಾಗಿ ಹೇಳಿ ಕತ್ತಲಗೆರೆಗೆ ಹೋಗಿದ್ದರು. ಹೊನ್ನಾಳಿಯಿಂದ ಪ್ರಭು ಎನ್ನುವರು ಕರೆ ಮಾಡಿ ವಿಷಯ ತಿಳಿಸಿದ್ದರು ದಾವಣಗೆರೆಗೆ ಕರೆದೊಯ್ಯಲು ಸೂಚಿಸಿದ್ದೆ. ಆದರೆ ವೈದ್ಯರು ಶಿವಮೊಗ್ಗಕ್ಕೆ ಹೋಗಲು ತಿಫಿಸಿದ್ದರು. ಮಾರ್ಗ ಮದ್ಯದಲ್ಲಿ ಸಾವಾಗಿದೆ ಎಂದರು.

ಪ್ರತಾಪ್ ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ಪದವಿಈಧರರಾಗಿದ್ದರು.‌2001 ರಲ್ಲಿ ಡಿವಿಎಸ್ ಓದಿದ್ದರು. 2008 ರಲ್ಲಿ ಪಾಟೀಲರ ಮಗಳಾದ ಸೌಮ್ಯರನ್ನ ಮದುವೆಯಾಗಿದ್ದರು. ಪಾಟೀಲರು ಸಹೋದರ ಮಾವ ಆಗಿದ್ದರು. ಪಾಟೀಲರ ಎರಡನೇ ಮಗಳ ಮದುವೆಯಾದ ನಂತರ ಪ್ರತಾಪ್ ಗೆ ಗಿಲ್ಟಿ ಕಾನ್ಷಿಯಸ್ ನೆಸ್ ಆರಂಭವಾಗಿದೆ. ತನ್ನನ್ನ ನಿರ್ಲಕ್ಷಿಸಲಾಗುತ್ತಿದೆ ಎಂಬ ಅನುಮಾನ ಹುಟ್ಟಿದ ಕಾರಣ ಆತ ಖಿನ್ನತೆಗೂ ಜಾರಿದ್ದ ಎನ್ನಲಾಗಿದೆ.

ನಾಳೆ ಪ್ರತಾಪ್ ಅವರ ಅಂತ್ಯ ಕ್ರಿಯೆಯನ್ನ ಚನ್ನಗಿರಿ ತಾಲೂಕು ಕತ್ತಲಗೆರೆಯಲ್ಲಿ ಅಂತ್ಯಕ್ರಿಯೆ ಮಾಡಲಾಹುವುದು.

ಇದನ್ಬೂ ಓದಿ-https://suddilive.in/archives/18777

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close