ನದಿಗೆ ತಡೆಗೋಡೆ ನಿರ್ಮಿಸಿ-ಎಸ್ ಡಿಪಿಐ ಆಗ್ರಹ




ಸುದ್ದಿಲೈವ್/ಶಿವಮೊಗ್ಗ


ಮನೆ ಕುಸಿತಗೊಂಡು ಕಂಗಾಲಾದ ಬಡ ಕುಟುಂಬಗಳಿಗೆ ಜಿಲ್ಲಾಡಳಿತದಿಂದ ಸೂಕ್ತ ಪರಿಹಾರ ನೀಡಬೇಕು ಹಾಗೂ ಸವಾಯಿಪಾಳ್ಯದ ತುಂಗಾ ನದಿಗೆ ತಡೆಗೋಡೆ(safety wal) ನಿರ್ಮಾಣಕ್ಕೆ SDPI  ಆಗ್ರಹಿಸಿದೆ.


ಶಿವಮೊಗ್ಗ ಜಿಲ್ಲಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವು ಬಡ ಕುಟುಂಬಗಳು ಮನೆಗಳು ಕುಸಿತಗೊಂಡು ಕಂಗಾಲಾಗಿದ್ದರೆ ಕೆಲ ಮನೆಗಳ ಗೋಡೆಗಳು ಕುಸಿದು ಬಿದ್ದಿದೆ.  ಕಚ್ಚಾ ಮನೆಗಳಲ್ಲಿ ವಾಸಿಸುವ ಬಡಪಾಯಿ ಕುಟುಂಬಗಳು ತನ್ನ ಮೇಲಿನ ಆಸರೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಜಿಲ್ಲಾಡಳಿತದಿಂದ ಈ ಬಡ ಕುಟುಂಬಗಳಿಗೆ ಪಕ್ಕ ಮನೆ ನಿರ್ಮಿಸಲು ಧನ ಸಹಾಯ ಪರಿಹಾರವಾಗಿ ನೀಡಿ ಆಸರೆಯಾಗಬೇಕಾಗಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಇಮ್ರಾನ್ ಒತ್ತಾಯಿಸಿದ್ದಾರೆ.  


ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವಂತಹ ವಾರ್ಡ್ ನಂ.33 ಸವಾಯಿ ಪಾಳ್ಯದ ತುಂಗಾ ನದಿ ತೀರದಲ್ಲಿ ನದಿಯ ನೀರಿನ ರಭಸಕ್ಕೆ ಭೂಮಿ ಕುಸಿತಗೊಂಡು ಜಾಮಿಯಾ ಮಸೀದಿ ಶೌಚಾಲಯ ಕಟ್ಟಡಗಳು ಮತ್ತು ಕಾಂಪೌಂಡ್ ಕಟ್ಟಡ ನದಿಯಲ್ಲಿ ಬಿದ್ದಿದ್ದು ಅದೃಷ್ಟವಶಾತ್ ಜೀವ ಹಾನಿ ಸಂಭವಿಸಿಲ್ಲ. 


ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನದಿ ತೀರದಲ್ಲಿ ನಿರ್ಮಾಣಗೊಂಡ ಪಾರ್ಕ್ ತಡೆಗೋಡೆ ನಿರ್ಮಿಸಿ ರಕ್ಷಣೆ ಮಾಡಲಾಗಿದೆ. ಆದರೇ ಇದರ ಪಕ್ಕದಲ್ಲೇ ಇರುವ ಸವಾಯಿ ಪಾಳ್ಯದಲ್ಲಿ ಸಾವಿರಾರು ಮನೆಗಳಿದ್ದು ಇಲ್ಲಿ ತಡೆಗೋಡೆ ನಿರ್ಮಿಸಲು ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ ಎಂದು ಸಂಘಟನೆ ಆಗ್ರಹಿಸಿದೆ. 


ಮನುಷ್ಯರ ಜೀವನ ಎಲ್ಲಾದುಕ್ಕಿಂತ ಮುಖ್ಯ ಆದಷ್ಟು ಬೇಗ ಸವಾಯಿ ಪಾಳ್ಯ, ಕುರುಬರ ಪಾಳ್ಯ, ಹಳೆ ಮಂಡ್ಲಿ, ವಾದಿಯೇ ಹುದಾ, ಮದಾರಿ ಪಾಳ್ಯ ತುಂಗಾ ನದಿ ಪಕ್ಕದಲ್ಲಿರುವ ಪ್ರದೇಶಗಳು, ಈ ಎಲ್ಲಾ ಪ್ರದೇಶಗಳ ನಿವಾಸಿಗಳ ಜೀವ ರಕ್ಷಣೆ ನಿಮ್ಮ ಕರ್ತವ್ಯ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಸ್ಥಳಕ್ಕೆ ಭೇಟಿ ನೀಡಿ ತಡೆಗೋಡೆ ನಿರ್ಮಾಣಕ್ಕೆ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕೆಂದು SDPI ಜಿಲ್ಲಾ ಸಮಿತಿ ಆಗ್ರಹಿಸಿದೆ. 


ಇದನ್ನೂ ಓದಿ-https://www.suddilive.in/2024/07/blog-post_559.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close