ತೀರ್ಥಹಳ್ಳಿ-ಕುಂದಾಪುರ ರಸ್ತೆಗೆ ಉರುಳಿ ಬಿದ್ದ ಮರ-ಕೆಲಕಾಲ ಪ್ರಯಾಣಿಕರು ಹೈರಾಣು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯಲ್ಲಿ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಯಿಂದಾಗಿ ಹೊಸನಗರ ತಾಲೂಕಿನ ಹಳಗುಂದ ಗ್ರಾಮದಲ್ಲಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ.

ತೀರ್ಥಹಳ್ಳಿ ಮಾಸ್ತಿಕಟ್ಟೆ. ಕುಂದಾಪುರ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮಂಗಳೂರು, ಉಡುಪಿ, ಕುಂದಾಪುರ. ಮಣಿಪಾಲ್ ಹೋಗಿ ವಾಹನ ಸವಾರರ ಪ್ರಯಾಣಿಕರ ಪರದಾಡುವಂತಾಗಿದೆ.

ರಾತ್ರಿ ಮೂರು ಗಂಟೆಯಿಂದ ರಸ್ತೆ ಬದಿ ಎರಡು ಕಡೆ  ಲಾರಿ, ಬಸ್ ಗಳು ನಿಂತುಕೊಂಡಿವೆ. ಆಗುಂಬೆಯಲ್ಲಿಭಾರಿ ವಾಹನಗಳ ನಿಷೇಧದ ಬೆನ್ಬಲ್ಲೇ ಈ ಮಾರ್ಗದ ಮೂಲಕ ಮಂಗಳೂರುತಲುಪಲು ಬದಲೀವ್ಯವಸ್ಥೆಯಾಗಿತ್ತು.

ಈ ಬದಲೀ ವ್ಯವಸ್ಥೆಯೂ ಮಳೆ ಗಾಳಿಯಿಂದಾಗಿ ಅವ್ಯವಸ್ಥೆಗೊಂಡಿದೆ.  ಬೆಳಗ್ಗೆ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮರ ತೆರವುಗಳಿಸಿದ್ದಾರೆ. ಸುಮಾರು ಎರಡು ಮೂರು ಘಂಟೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ರಸ್ತೆ ಸಂಚಾರ ಸ್ಥಗಿತ ಹಿನ್ನಲೆ ವಾಹನದಲ್ಲಿಯೇ ಕೆಲ ಕಾಲ  ಪ್ರಯಾಣಿಕರು ಕಳೆಯವಂತಾಗಿದೆ. ಅವ್ಯವಸ್ಥೆಗೆ ಅಧಿಕಾರಿಗಳ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ-https://suddilive.in/archives/19416

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close