ಶರಾವತಿ ಹಿನ್ನೀರು |
ಸುದ್ದಿಲೈವ್/ಶಿವಮೊಗ್ಗ
ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತಗ್ಗಿದೆ. ಇದರಿಂದ ಜಿಲ್ಲೆಯ ಪ್ರಮುಖ ನದಿಗಳ ಜಲಾಶಯಗಳ ಒಳಹರಿವು ಸಹ ಕಡಿಮೆಯಾಗಿದೆ.
ಭದ್ರಾ ಜಲಾಶಯದ ಒಳ ಹರಿವು ಇಳಿಕೆಯಾಗಿದೆ. ನಿನ್ನೆ 20,045 ಕ್ಯೂಸೆಕ್ ಒಳ ಹರಿವು ದಾಖಲಾಗಿತ್ತು. ಇಂದು 15 ಸಾವಿರ ಕ್ಯೂಸೆಕ್ ಒಳಹರಿವು ದಾಖಲಾಗಿದೆ. ನಿನ್ನೆ 168.2 ಅಡಿಗೆ ಇದ್ದ ಜಲಾಶಯದ ಮಟ್ಟ ಇಂದು 169.5 ಅಡಿಗೆ ಏರಿಕೆಯಾಗಿದೆ.
ತುಂಗಾ ಜಲಾಶಯದ ಒಳ ಹರಿವು ಪ್ರಮಾಣ ಕೊಂಚ ಏರಿಕೆಯಾಗಿದೆ. ನಿನ್ನೆ ಜಲಾಶಯಕ್ಕೆ 31,362 ಕ್ಯೂಸೆಕ್ ಒಳ ಹರಿವು ಇತ್ತು. ಇಂದು 34900 ಕ್ಯೂಸೆಕ್ ಹರಿದು ಬರುತ್ತಿದೆ. 33 ಸಾವಿರ ಕ್ಯೂಸೆಕ್ ನೀರನ್ನ ನದಿಗೆ 21 ಗೇಟಿನ ಮೂಲಕ ಹರಿಸಲಾಗುತ್ತಿದ್ದು, 1900 ಕ್ಯೂಸೆಕ್ ನೀರು ಕ್ಯಾನೆಲ್ ಗಳಿಗೆ ಹರಿಸಲಾಗುತ್ತಿದೆ.
ಲಿಂಗನಮಕ್ಕಿ ಜಲಾಶಯಕ್ಕೆ ನಿನ್ನೆ ಒಳ ಹರಿವು 41,269 ಕ್ಯೂಸೆಕ್ ಇತ್ತು. ಇಂದು 58619 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 1892 ಕ್ಯೂಸೆಕ್ ಹೊರ ಹರಿವು ಇದೆ. ಜಲಾಶಯದ ನೀರಿನ ಮಟ್ಟ ನಿನ್ನೆ 1799 ಅಡಿಗೆ ಏರಿಕೆಯಾಗಿತ್ತು. ಇಂದು 1801 ಅಡಿ ನೀರು ಸಂಗ್ರಹವಾಗಿದೆ. ಒಟ್ಟು 151.65 ಟಿಎಂಸಿ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ 98.40 ಟಿಎಂಸಿ ನೀರು ಸಂಗ್ರಹವಾಗಿದೆ.
ಇದನ್ನು ಓದಿ-https://www.suddilive.in/2024/07/blog-post_931.html