ಕಾರ್ಮಿಕ ಸಚಿವರನ್ನ ಭೇಟಿ ಮಾಡಿದ ಮಾಜಿ ಡಿಸಿಎಂ ಈಶ್ವರಪ್ಪ

ಬೆಂಗಳೂರಿನಲ್ಲಿ ಕಾರ್ಮಿಕ ಸಚಿವರನ್ನ ಭೇಟಿಯಾದ ಮಾಜಿ ಡಿಸಿಎಂ ಈಶ್ವರಪ್ಪ


ಸುದ್ದಿಲೈವ್/ಶಿವಮೊಗ್ಗ


ಜಿಲ್ಲೆಯಲ್ಲಿ ಕಾರ್ಮಿಕ ಕಲ್ಯಾಣ ಇಲಾಖೆಯಿಂದ ಕಳೆದ ಎರಡು ವರ್ಷದಿಂದ ಅನುಧಾನದ ಹಣ ಬಿಡುಗಡೆ ಆಗದ ಹಿನ್ನಲೆಯಲ್ಲಿ ಇಂದು ಮಾಜಿ ಡಿಸಿಎಂ ಈಶ್ವರಪ್ಪ ಕಾರ್ಮಿಕ ಸಚಿವ ಸಂತೋಷ್ ಲಾಡ್ ರನ್ನ ಭೇಟಿ ಮಾಡಿ ಹಣ ಬಿಡುಗಡೆಗೆ ಮನವಿ ಮಾಡಿಕೊಂಡಿದ್ದಾರೆ. 


ಬೆಂಗಳೂರಿನಲ್ಲಿ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ ಅವರನ್ನು ಬೇಟಿ ಮಾಡಿ, “ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ನಿಧಿ” ಯಿಂದ ಬಾಕಿ ಇರುವ ಧನಸಹಾಯವನ್ನು ತಕ್ಷಣ ಬಿಡುಗಡೆ ಮಾಡುವಂತೆ  ಮನವಿ ಸಲ್ಲಿಸಲಾಯಿತು. 


ಸಚಿವರು ಧನಾತ್ಮಕವಾಗಿ ಸ್ಪಂದಿಸಿದ್ದು ಕೂಡಲೆ ಸಂಭಂದಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಮಾಜಿ ನಗರಸಭಾ ಅಧ್ಯಕ್ಷರಾದ  ಎಮ್. ಶಂಕರ್, 


ಮಾಜಿ ನಗರಸಭಾ ಮಹಾನಗರ ಪಾಲಿಕೆ ಸದಸ್ಯರಾದ  ಇ.ವಿಶ್ವಾಸ್,  ವಾಗೀಶ್ ವಕೀಲರು, ಛಾಯಾಗ್ರಾಹಕ ಮೋಹನ್  ಕುಬೇರಪ್ಪ ಪಿ.ಹೆಚ್,  ಮೋಹನ್ ರಾವ್ ಜಾದವ್  ಹಾಗು ರಾಜ್ಯ ಕಟ್ಟಡ ಕಾರ್ಮಿಕ ಒಕ್ಕೂಟದ ಅಧ್ಯಕ್ಷರಾದ ಪಳನಿ ಕುಮಾರ್ ಹಾಜರಿದ್ದರು.

ಇದನ್ನೂ ಓದಿ-https://www.suddilive.in/2024/07/blog-post_580.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close