ಕಾಪರ್ ವೈರ್ ಕದ್ದ ಆರೋಪಿ ಅರೆಸ್ಟ್

ಸುದ್ದಿಲೈವ್/ಶಿವಮೊಗ್ಗ

ಭದ್ರಾವತಿಯ ಅನುಟೆಕ್ ಅಂಗಡಿಯಲ್ಲಿ 92 ಸಾವಿರ ರೂ.ಮೌಲ್ಯದ 92 ಸಾವಿರ ರೂ. ಮೌಲ್ಯದ ಕಾಪರ್ ವಯರ್ ಖರೀದಿ ಮಾಡಿ ಹಣ ನೀಡದೆ ವಂಚಿಸಿದ್ದ ಪ್ರಕರಣವನ್ನ ಬೇಧಿಸಿದ್ದಾರೆ.

ದಿನಾಂಕ:14-07-2024 ರಂದು ಮದ್ಯಾಹ್ನ ಭದ್ರಾವತಿ ಹಳೆನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಹೆಚ್.ರಸ್ತೆಯಲ್ಲಿ ಅನುಟೆಕ್ ಅಂಗಡಿಯಲ್ಲಿ ವ್ಯಕ್ತಿಯೊಬ್ಬನು ಅಂದಾಜು ಮೌಲ್ಯ 92,800/- ರೂ ಗಳ ಕಾಪರ್ ವೈರ್ ಅನ್ನು ಖರೀದಿ ಮಾಡಿ, ಹಣವನ್ನು ಕೊಡದೇ ವೈರ್ ತೆಗೆದುಕೊಂಡು ಹೋಗಿ ವಂಚಿಸಿರುವ ಬಗ್ಗೆ ಅನುಟೆಕ್ ಅಂಗಡಿಯ ಮಾಲೀಕನಾದ  ರಾಕೇಶ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣದಲ್ಲಿ ವಂಚಿಸಿ ತೆಗೆದುಕೊಂಡು ಹೋದ ಮಾಲು ಮತ್ತು ಆರೋಪಿಯ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ.ಕೆ. ಐಪಿಎಸ್, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ,  ಮತ್ತು  ಕಾರಿಯಪ್ಪ ಎ.ಜಿ. ರವರ ಮಾರ್ಗದರ್ಶನದಲ್ಲಿ ಪ್ರಭಾರ ಡಿವೈಎಸ್ಪಿ ಗಜಾನನ ವಾಮನ ಸುತಾರ್  ಮತ್ತು ಸಿಪಿಐ ಶೈಲಕುಮಾರ್, ಪಿಎಸ್ಐ ಶರಣಪ್ಪ ಹಂಡ್ರಗಲ್,

ಚಂದ್ರಶೇಖರ್ ನಾಯ್ಕ್ ಪಿಎಸ್ಐ-2 ಹಳೇನಗರ ಪೊಲೀಸ್ ಠಾಣೆ ರವರ ನೇತೃತ್ವದ ಮಹೇಶ್ವರ ನಾಯ್ಕ್ ಎ.ಎಸ್.ಐ, ಹೆಚ್ ಸಿ ರವರಾದ ಹಾಲಪ್ಪ, ಪಿಸಿರವರಾದ ನಾರಾಯಣಸ್ವಾಮಿ, ಮೌನೇಶ್ ಶೀಕಲ್, ಚಿಕ್ಕಪ್ಪ ಸಣ್ಣತಂಗೇರ ಮತ್ತು ಪ್ರವೀಣ್ ಜಿ.ಎ. ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.

ತನಿಖಾ ತಂಡವು ದಿನಾಂಕ:16-07-2024 ರಂದು ಪ್ರಕರಣದ ಆರೋಪಿ ಸೈಫುಲ್ಲಾಖಾನ್, 35 ವರ್ಷ, ಆಜಾದ್ ನಗರ, ದಾವಣಗೆರೆ ಜಿಲ್ಲೆ ಈತನನ್ನು ಬಂಧನ ಮಾಡಲಾಗಿದೆ. ಆರೋಪಿತನಿಂದ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯ 01 ಪ್ರಕರಣ ಹಾಗೂ ಬಳ್ಳಾರಿ ಜಿಲ್ಲೆಯ ಗಾಂಧಿನಗರ ಪೊಲೀಸ್ ಠಾಣೆಯ 01 ಪ್ರಕರಣ

ಸೇರಿ ಒಟ್ಟು 02 ವಂಚನೆ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 2,07800/-ರೂಗಳ ವಿ-ಗಾರ್ಡ್ ಕಂಪನಿಯ ಕಾಪ್ಪರ್ ವೈರ್ ಬಾಕ್ಸ್ ಗಳನ್ನು ಮತ್ತು ಕೃತ್ಯಕ್ಕೆ ಬಳಸಿದ 80,000/ರೂ ಬೆಲೆ ಬಾಳುವ ಸ್ಕೂಟಿ ಸೇರಿ ಒಟ್ಟು 2,87,800/- ರೂಗಳ ಮಾಲನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.

ಇದನ್ನೂ ಓದಿ-https://suddilive.in/archives/19523

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket