ಸಾಗರದಲ್ಲಿ ತಹಶೀಲ್ದಾರ್ ಹೆಸರು ಬರೆದು ಆತ್ಮಹತ್ಯೆಗೆ ಯತ್ನ

ಸುದ್ದಿಲೈವ್/ಶಿವಮೊಗ್ಗ

ಸಾಗರದ ತಹಶೀಲ್ದಾರ್ ಕಚೇರಿಗೆ ಬಂದಿದ್ದ ತಾಳಗುಪ್ಪ ಗ್ರಾಮಲೆಕ್ಕಾಧಿಕಾರಿಗಳೊಬ್ಬರು ಅಸ್ವಸ್ಥರಾಗಿ ಬಿದ್ದಿದ್ದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.

ತಾಳಗುಪ್ಪದ ಅರೆಹದ ಗ್ರಾಮಪಂಚಾಯಿತಿಯ ವಿಎರವರು ಇಂದು ಬೆಳಿಗ್ಗೆ ಸಾಗರದ ತಹಶೀಲ್ದಾರ್ ಕಚೇರಿಗೆ ಬಂದಿದ್ದಾರೆ. ಬಂದ ವಿಎ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಂತರ ಬಂದ ಅವರ ಪತಿ ಅವರ ಪ್ಯಾಂಟ್ ಜೇಟಬ್ ಚೆಕ್ ಮಾಡಿದಾಗ ಎರಡು ಪುಟದ ಡೆತ್ ನೋಟ್ ದೊರೆತಿದೆ. ಡೆತ್ ನೋಟ್ ನಲ್ಲಿ ತಮ್ಮ ಸಾವಿಗೆ ತಹಶೀಲ್ದಾರ್ ಕಾರಣ ಎಂದು ವಿಎ ದಾಖಲಿಸಿರುವುದು ಸುದ್ದಿ ಸ್ಪೋಟಗೊಂಡಿದೆ.

ತಹಶೀಲ್ದಾರ್ ಅವರು ಸಿಬ್ಬಂದಿಗಳ ನಡುವೆ ತಾರತಮ್ಯ ಮಾಡುತ್ತಾರೆ. ಈ ಹಿಂದೆ ಅವರಿಗೆ ಹೆರಿಗೆ ಆದಾಗ ಹೆರಿಗೆ ವೈದ್ಯಕೀಯ ಭತ್ಯೆ 60,140 ರೂ.ಗಳಾಗಿವೆ ಎಂದು ದಾಖಲಾತಿ ಸಮೇತ ನೀಡಿದರೂ, ನನ್ನ ಪತಿಗೆ ಭತ್ಯೆ ಬಿಡುಗಡೆಗೆ ತಹಶೀಲ್ದಾರ್ ಲಂಚ ನೀಡಲು ಒತ್ತಾಯಿಸಿರುವುದಾಗಿ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಎಸಿ ಅವರು ನೀಚಡಿ ವೃತ್ತಕ್ಕೆ ವರ್ಗ ನೀಡಿದರೆ ಎಸಿ ಆದೇಶವನ್ನೇ ಉಲ್ಲಂಘಿಸಿ ಅರೆಹದ ವೃತ್ತಕ್ಕೆ ತಹಶೀಲ್ದಾರ್ ಹಾಕಿದ್ದಾರೆ ಎಂದು ಡೆತ್ ನೋಟ್ ಬರೆದಿದ್ದಾರೆ.

ಇದನ್ನೂ ಓದಿ-https://suddilive.in/archives/19030

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close